ಪುರಸಭೆ ಅಧಿಕಾರಿಗಳಿಂದ ಭ್ರಷ್ಟ ಆಡಳಿತ
ಕ.ಪ್ರ.ವಾರ್ತೆ ಸಕಲೇಶಪುರ ಡಿ 3
ಸ್ಥಳೀಯ ಪುರಸಭೆ ಅಧಿಕಾರಿಗಳು ಭ್ರಷ್ಟಚಾರದಲ್ಲಿ ತೊಡಗಿ ಬೇಜಾವಾಬ್ದಾರಿ ಆಡಳಿತ ನಡೆಸುತ್ತಿದ್ದಾರೆಂದು ಬಿಜೆಪಿ ತಾಲೂಕು ಅಧ್ಯಕ್ಷ ಡಿ. ರಾಜ್ಕುಮಾರ್ ಅರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯ ರಾಘವೇಂದ್ರ ನಗರ ಬಡಾವಣೆ ಸರ್ವೆ ನಂ.343 ರಲ್ಲಿ ಜಿಲ್ಲಾಧಿಕಾರಿಗಳು ಸುಮಾರು 34 ನಿವೇಶನಗಳು ಸರಕಾರಿ ನಿಯಮಾನುಸಾರವಾಗಿ ವಿನ್ಯಾಸಗೊಂಡಿಲ್ಲ ಎಂದು ಕಾರಣ ನೀಡಿ, ಪುರಸಭೆಯ ದಾಖಲೆಯಲ್ಲಿ ದಾಖಲಿಸಿರುವ ಖಾತೆಯನ್ನು ವಜಾಗೊಳಿಸಬೇಕೆಂದು ಮುಖ್ಯಾಧಿಕಾರಿಗೆ ಜಿಲ್ಲಾಧಿಕಾರಿ ಅದೇಶ ಮಾಡಿರುತ್ತಾರೆ. ಆದರೆ ಮುಖ್ಯಾಧಿಕಾರಿಗಳು ಜಿಲ್ಲಾದಿಕಾರಿಗಳ ಆದೇಶಕ್ಕೆ ಯಾವುದೆ ಕಿಮ್ಮತ್ತು ನೀಡದೇ ಸದರಿ ನಿವೇಶನದಲ್ಲಿ ಪರೋಕ್ಷವಾಗಿ ಮನೆ ಕಟ್ಟಲು ಅವಕಾಶ ಮಾಡಿ ಕೊಟ್ಟಿರುತ್ತಾರೆಂದು ಅರೋಪಿಸಿದರು.
ಸೌಚಾಲಯ ನಿರ್ಮಾಣಕ್ಕೆ ಅನುದಾನವನ್ನು ನೀಡುವಾಗ ಸ್ಥಳ ಪರಿಶೀಲನೆ ನಡೆಸದೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಟಿಪ್ಪಣಿ ಬರೆದು ಅರ್ಹರಿಗೆ ಸೇರ ಬೇಕಾದ ಹಣವನ್ನು ಅನ್ಯರ ಪಾಲು ಮಾಡಿದ್ದಾರೆ ಎಂದರು.
ಪುರಸಭ ಸದಸ್ಯ ಮೋಹನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಕ್ರಮ ನೀರಿನ ನಲ್ಲಿ ಸಂಪರ್ಕಗಳು ಹೆಚ್ಚಾಗಿದೆ. ಈ ಬಗ್ಗೆ ಪುರಸಭ ಅದಿಕಾರಿಗಳು ಕಣ್ಣಿದ್ದೂ ಕುರುಡರಾಗಿ, ಬಾಯಿದ್ದು ಮೂಕರಾಗಿ, ಕಿವಿ ಇದ್ದೂ, ಕಿವುಡರಾಗಿ ವರ್ತಿಸಿ ಅಕ್ರಮ ಮನೆಗಳಿಗೆ ಅಕ್ರಮವಾಗಿ ನಲ್ಲಿ ಸಂಪರ್ಕ ನೀಡುತ್ತಿದ್ದಾರೆಂದು ಗಂಭೀರವಾದ ಅರೋಪ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಕಾರ್ಯದರ್ಶಿ ಸಂದೇಶ್, ಪುರಸಭೆ ಸದಸ್ಯೆ ಸತ್ಯವತಿ ಮತ್ತು ಬಿಜೆಪಿ ನಗರ ಕಾರ್ಯದರ್ಶಿ ಸೋಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

