'ಅಂಗವಿಕಲರಿಗೆ ಸವಲತ್ತು ದೊರೆಯಬೇಕು'
ಕನ್ನಡಪ್ರಭ ವಾರ್ತೆ, ಆಲೂರು. ಡಿ 3
ವಿಕಲಚೇತನ ಮಕ್ಕಳು ಹುಟ್ಟಿದರೆಂದು ಪೋಷಕರು ಚಿಂತಿಸುವುದನ್ನು ಬಿಟ್ಟು ಅವರಿಗೆ ಸರ್ಕಾರದ ವತಿಯಿಂದ ದೊರೆಯುವ ಸವಲತ್ತುಗಳ ಸದುಪಯೋಗ ಪಡೆದು ಅವರು ಎಲ್ಲರಂತೆ ಬಾಳುವಂತೆ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ತಿಳಿಸಿದರು.
ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣಾ ಕಾರ್ಯಕ್ರಮದಲ್ಲಿ ವಿಕಲಚೇತನ ಮಕ್ಕಳಿಗೆ ಸಾಧನೆ ಸಲಕರಣೆಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರ ತಿಳುವಳಿಕಾ ಕೊರತೆಯಿಂದಾಗಿ ಅಂಗವಿಕಲ ಮಕ್ಕಳಿಗೆ ಸೂಕ್ತ ಸವಲತ್ತುಗಳು ದೊರೆಯುತ್ತಿಲ್ಲ ಆದುದರಿಂದ ಪೋಷಕರು ಜಾಗಣತರಾಗ ಬೇಕು ಅಂಗವಿಕಲ ಮಕ್ಕಳಿಗೆ ದೇವರು ಯಾವುದಾದರೊಂದು ವಿಶೇಷ ಶಕ್ತಿ ನೀಡಿರುತಾನೆ. ಇದಕ್ಕೆ ಪ್ಯಾರಾ ಓಲಂಪಿಕ್ನಲ್ಲಿ ಬೆಳ್ಳಿ ಪದಕ ಗೆದ್ದು ತಂದ ಜಿಲ್ಲೆಯ ಮಗ ಗಿರೀಶನ ಉದಾಹರಣೆ, ಅಲ್ಲದೆ ಪೋಷಕರಷ್ಟೆ ಜವಾಬ್ದಾರಿ ಶಿಕ್ಷಣ ಇಲಾಖೆಗೂ ಇದೆ ಇಲಾಖೆವತಿಯಿಂದ ವಿಕಲಚೇತನರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಸಾಮಾನ್ಯ ಅಂಗವಿಕಲರಿಗೆ ಸಾಮಾನ್ಯ ಶಿಕ್ಷಣ ಪಡೆಯಲು ತೀವ್ರ ಪ್ರಭಾವ ಪಡೆಯುವುದಿಲ್ಲ. ಅಂತವರಿಗೆ ಸಮನ್ವಯ ಶಿಕ್ಷಣ, ವೃತ್ತಿ ಕೌಶಲ್ಯ ಶಿಕ್ಷಣ ನೀಡಲಾಗುತ್ತಿದೆ. ತೀವ್ರ ಅಂಗವೈಪಲ್ಯಕ್ಕೆ ಒಳಗಾದವರಿಗೆ ಗಣಹ ಆಧಾರಿತ ಶಿಕ್ಷಣವನ್ನು ನೀಡಲಾಗುತ್ತಿದ್ದು, ಅವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಎಂದ ಅವರು ಈ ದಿಟ್ಟಿನಲ್ಲಿ ಪೋಷಕರು ಹಾಗೂ ಜನತೆ ಜಾಗೃತರಾಗಿ ಅಂಗವಿಕಲರೊಂದಿಗೆ ಸ್ಪಂದಿಸಿದಿದರೆ ಅವರೆ ತಮ್ಮ ವಿಶೇಷ ಶಕ್ತಿಯಿಂದ ಸಮಾಜ ತಮ್ಮನ್ನು ಗುರುತಿಸುವಂತೆ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎನ್. ರವಿಪ್ರಕಾಶ ಮಾತನಾಡಿ, ಅಂಗ ವೈಫಲ್ಯತೆ ಶಾಪವಲ್ಲ ಉತ್ಸಾಹ, ಛಲ, ಶ್ರಮದಲ್ಲಿ ಯಾರಿಗೆ ವೈಕಲ್ಯತೆ ಇರುತ್ತದೋ ಅವರಷ್ಟೆ ಅಂಗವಿಕಲರು ಆದುದರಿಂದ ವಿಕಲಚೇತನರ ಬಗ್ಗೆ ಅಸಡ್ಡೆ ಸಲ್ಲ ಎಂದರು.
ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ವರದರಾಜು ಅಕ್ಷರ ದಾಸೊಹ ಅಧಿಕಾರಿ ಧರ್ಪಶೆಟ್ಟಿ, ಕಸಾಪ ಅಧ್ಯಕ್ಷ ಗುಲಾಮ ಸತ್ತಾರ್, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಪಿ.ನಾಗಾರಾಜ್, ದೈಹಿಕ ಶಿಕ್ಷಣ ಅಧಿಕಾರಿ ನಾಗರಾಜ್, ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಸಿದ್ದೇಗೌಡ, ಶಿಕ್ಷಕರಾದ ಧರ್ಮು, ಸೋಮನಾಯಕ್, ಸೋಮೇಶ್ ಹಾಗೂ ಇತರರು ಇದ್ದರು. ನಂತರ ವಿಕಲಚೇತನ ಮಕ್ಕಳಿಗೆ ಹಾಗೂ ಪೋಷಕರಿಗೆ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

