ಕಲುಷಿತ ನೀರು: ಆಕ್ರೋಶ
ಕ.ಪ್ರ.ವಾರ್ತೆ ಹೊಳೆನರಸೀಪುರ ಡಿ.3
ಪುರಸಭೆಯ ನಿರ್ಲಕ್ಷ್ಯ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಲ್ಲಿನ ನಿಧಾನಗತಿಯ ಧೋರಣೆಯಿಂದಾಗಿ ಪಟ್ಟಣದ ಆಶ್ರಯ ಬಡಾವಣೆಯಲ್ಲಿನ ಕೆಲ ಬೀದಿಗಳ ಮನೆಗಳಲ್ಲಿನ ಕುಡಿಯುವ ನೀರಿಗೆ ಕಲುಷಿತ ನೀರು ಸೇರಿ ಸರಬರಾಜಾಗುತ್ತಿದ್ದು, ಈ ಕಲುಷಿತ ನೀರನ್ನೇ ಸಾರ್ವಜನಿಕರು ಕುಡಿಯಬೇಕಾದ ದುಃಸ್ಥಿತಿ ಬಂದಿದೆ ಎಂದು ಬಡಾವಣೆಯ ನಿವಾಸಿಗಳು ದೂರಿದ್ದಾರೆ.
ಕಳೆದ ಒಂದು ತಿಂಗಳಿನಿಂದಲೂ ಬಡಾವಣೆಯಲ್ಲಿನ ಕೆಲ ಬೀದಿಗಳಲ್ಲಿ ಕುಡಿಯುವ ನೀರಿಗೆ ಒಳಚರಂಡಿಯ ನೀರು ಸೇರಿಕೊಂಡು, ಕಲುಷಿತ ನೀರು ಸರಬರಾಗುತ್ತಿರುವುದಾಗಿ ಇಲ್ಲಿನ ನಿವಾಸಿಗಳು ಪುರಸಭೆಗೆ ಒಳಚರಂಡಿ ನೀರು ಸೇರಿರುವ ಕಲುಷಿತ ನೀರನ್ನೇ ಕೊಂಡೊಯ್ದು ಸಾಕ್ಷಿ ಸಮೇತವಾಗಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಅಲ್ಲದೇ, ಪುರಸಭೆಯ ನಿರ್ಲಕ್ಷ್ಯ ಕುರಿತಂತೆಯೂ ಮಾಧ್ಯಮಗಳ ಮುಂದೆ ಕಿಡಿಕಾರಿದರು.
ಈ ಮೊದಲು ಇಲ್ಲಿ ಒಳಚರಂಡಿ ಅವ್ಯವಸ್ಥೆ ನಿವಾಸಿಗಳನ್ನು ನಿತ್ಯ ಕಾಡುತ್ತಿತ್ತು. ಅದನ್ನು ಸರಿಪಡಿಸಲು ಹೊಸ ಕಾಮಗಾರಿಯ ಕೈಗೆತ್ತಿಕೊಂಡು, ಟೆಂಡರ್ ಕರೆದು ಕೆಲಸ ಹಂಚಲಾಗಿತ್ತು. ಗುತ್ತಿಗೆದಾರ ಮಾತ್ರ ಇದುವರೆಗೂ ಕಾಮಗಾರಿಯನ್ನು ಕೈಗೆತ್ತಿಕೊಳ್ಳದೇ ನಿರ್ಲಕ್ಷ್ಯತೆ ತೋರುತ್ತಿರುವ ಕಾರಣದಿಂದಾಗಿ ಈ ರಸ್ತೆಗಳಲ್ಲಿನ ಜನರು ಅನಿವಾರ್ಯವಾಗಿ ಕಲುಷಿತ ನೀರನ್ನೇ ಕುಡಿಯಬೇಕಾದ ದುಃಸ್ಥಿತಿ ಬಂದಿದೆ. ಕಲುಷಿತ ನೀರು ಸೇವನೆಯಿಂದಾಗಿ ಬಡಾವಣೆಯ ಕೆಲ ನಿವಾಸಿಗಳು ಅನಾರೋಗ್ಯಕ್ಕೂ ತುತ್ತಾಗಿರುವ ಉದಾಹರಣೆಗಳು ಕಾಣಸಿಗುತ್ತಿವೆ. ಕೂಡಲೇ ಪುರಸಭೆಯವರು ಈ ಅವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಬಡಾವಣೆಯ ನಿವಾಸಿಗಳು ಪುರಸಭೆಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ಮುಖ್ಯಾಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

