ಹಾಸನ

ಮೂಲ ಸೌಕರ್ಯಕ್ಕೆ ಗ್ರಾಮಸ್ಥರ ಆಗ್ರಹ

Published On :

ಕ.ಪ್ರ.ವಾರ್ತೆ   ಆಲೂರು   ಡಿ.3
ತಾಲೂಕಿನ ಸಮುದ್ರವಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಸಿಕ್ಕಿಲ್ಲ. ಸಂಬಂಧಪಟ್ಟವರು ಶೀಘ್ರವಾಗಿ ಈ ಗ್ರಾಮದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೊಡಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ತಾಲೂಕಿನ ವಾಟೆ ಹೊಳೆ ಸಮುದ್ರವಳ್ಳಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿವೆ. ವ್ಯವ ಸಾಯವನ್ನೇ ಹೆಚ್ಚಾಗಿ ಅವಲಂಬಿಸಿರುವ ರೈತಾಪಿ ವರ್ಗದ ಜನರೇ ಅಧಿಕವಾಗಿದ್ದಾರೆ. ಇಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ವಾರಕ್ಕೆ ಒಂದು ಅಥವಾ ಎರಡು ಬಾರಿ ನೀರು  ಬಿಡುತ್ತಾರೆ. ಕೇಳಿದರೆ ಮೋಟಾರ್ ಸರಿಯಿಲ್ಲ, ಪೈಪ್ ಒಡೆದಿದೆ ಆಗಿದೆ ಎಂಬ ಕಾರಣ  ನೀಡುತ್ತಾರೆ. ಪಂಚಾಯ್ತಿಯಲ್ಲಿ ವಿಚಾರಿಸಿದರೆ ಎಲ್ಲವೂ ಸರಿಯಿದೆ ಎಂದು ಅಲ್ಲಿಯವರು  ಹೇಳುತ್ತಾರೆಂದು ಗ್ರಾಮಸ್ಥರು ದೂರಿದ್ದಾರೆ.  100 ಮನೆಗಳ ಈ ಹಳ್ಳಿಯಲ್ಲಿ ಮೂಲಭೂತ  ಸೌಕರ್ಯಗಳು ಸರಿಯಾಗಿಲ್ಲ. ಇನ್ನು ರಸ್ತೆಯ ಬಗ್ಗೆ ಮಾತನಾಡು ವುದಕ್ಕಿಂತ ಸುಮ್ಮನಿರುವುದೇ ಲೇಸು. ಬೇಸಿಗೆ ಕಾಲದಲ್ಲಿ ರಸ್ತೆಗಳು ಕಲ್ಲು ಬಂಡೆಗಳಂತೆ ಬಿದ್ದಿರುತ್ತವೆ. ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಗಳಾಗಿವೆ. ಇಲ್ಲಿ ಪ್ರತಿನಿತ್ಯ ತಿರುಗಾಡುವುದೂ ಕಷ್ಟವಾಗಿದೆ ಎಂದಿದ್ದಾರೆ. ಪಂಚಾಯ್ತಿ ವಿಷಯಕ್ಕೆ ಬಂದರೆ ಪಂಚಾಯಿತಿಯಲ್ಲಿ ಅಧಿಕಾರ ಅನುಭವಿಸುತ್ತಿರುವವರು ಅವರವರ ಸಂಬಂಧಿಕರಿಗೆ ಮಾತ್ರ ಜನತಾಮನೆ, ಶೌಚಾಲಯಗಳನ್ನು ಮಾಡಿಸಿದ್ದಾರೆ. ಉಳಿದ ಜನರಿಗೆ ಹೊಲದ ಬಯಲೇ ಗತಿಯಾಗಿದೆ. ಮಳೆಗಾಲದಲ್ಲಂತೂ ಹೆಂಗಸರು, ಮಕ್ಕಳಿಗೆ ತುಂಬಾ ಕಷ್ಟವಾಗಿದೆ. ಪಂಚಾಯಿತಿಯಲ್ಲಿ ಬೀದಿ ದೀಪಕ್ಕೂ ತಾರತಮ್ಯ ಮಾಡುತ್ತಾರೆ. ಈ ಊರಿನಲ್ಲಿ ಶಾಸ್ತ್ರಕ್ಕೆ ಒಂದೇ ಒಂದು ದೇಗುಲವಿಲ್ಲ, ಸಮುದಾಯ ಭವನವೂ ಇಲ್ಲ ಎಂದು ದೂರಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.