ಹಾಸನ

ಸಂವಿಧಾನ ರಕ್ಷಣೆಗೆ ವಕೀಲರ ಸಹಕಾರ ಅಗತ್ಯ

Published On :

ಆಲೂರು: ಸಂವಿಧಾನ ರಕ್ಷಣೆಯಲ್ಲಿ ವಕೀಲರು ನ್ಯಾಯಾಂಗದೊಂದಿಗೆ ಕೈಜೋಡಿಸಿದ್ದು ಅವರ  ಸಹಕಾರ ನಿರಂತರ ಅಗತ್ಯವೆಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ  ಜೆ.ಎಂ.ಎಫ್.ಸಿ. ನ್ಯಾಯಾಧೀಶ ಎಂ. ಮಹೇಶ್ ಬಾಬು ತಿಳಿಸಿದರು. ವಕೀಲರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಕೀಲರ ದಿನ ಮತ್ತು ಕಾನೂನು  ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯದಾನದಲ್ಲಿ ನ್ಯಾಯಾಂಗದಷ್ಟೇ ಸಮನಾದ ಹೊಣೆಗಾರಿಕೆಯನ್ನು ವಕೀಲರು ಹೊಂದಿದ್ದು, ಸಾಮಾನ್ಯ ಜನರ ಸಾಂವಿಧಾನಿಕ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದರು.
4ನೇ ಸ್ಥಾನದಲ್ಲಿ: ತಮ್ಮ ಮಾತುಗಳಲ್ಲಿ ಆಲೂರು ಕಾನೂನು ಸೇವಾ ಸಮಿತಿಯ ಸಾಧನೆಯನ್ನು ಬಣ್ಣಿಸಿದರು ಅವರು, ಸೆ. 9ರಿಂದ ನ. 23ರವರೆಗೆ ರಾಷ್ಟ್ರಾದ್ಯಂತ ಏಕಕಾಲಲ್ಲೇ ನಡೆದ ಬೃಹತ್ ಜನತಾ ನ್ಯಾಯಾಲಯದಲ್ಲಿ ಒಟ್ಟು 547 ಪ್ರಕರಣಗಳು ಇತ್ಯರ್ಥಗೊಂಡಿದ್ದು ಆಲೂರು. ಕಾ.ಸೇ. ಸಮಿತಿ. 4ನೇ ಸ್ಥಾನದಲ್ಲಿದೆಯೆಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಮಹೇಂದ್ರ ಮಾತನಾಡಿ,  ಪ್ರಸ್ತುತ ವಕೀಲರಿಗೆ ಯಾವುದೇ ಭದ್ರತೆಯಿಲ್ಲ ಸರ್ಕಾರ ಈ ಬಗ್ಗೆ ಸೂಕ್ತ ಕಾಯ್ದೆಗಳನ್ನು ರೂಪಿಸುವ ಅವಶ್ಯಕತೆ ಇದೆ ಎಂದು ಹೇಳಿದರು. ವಕೀಲ ಕೆ.ಕೆ.ಮಂಜೇಗೌಡ, ಕೆ.ನಾಗರಾಜ್, ಹೆಚ್.ಪಿ.ಪ್ರೇಮ್ ಹಾಗೂ ಜೀವನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.