ಹಾಸನ

ಕೃಷಿ ವಿಮಾ ಯೋಜನೆಗೆ ಹೋಬಳಿವಾರು ಬೆಳೆ ನಿಗದಿ

Published On :

ಕನ್ನಡಪ್ರಭ ವಾರ್ತೆ, ಹಾಸನ,  ಡಿ. 4
2013ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು  ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಈ ಯೋಜನೆಯಲ್ಲಿ ಈ ಜಿಲ್ಲೆಗೆ ಸಂಬಂಧಿಸಿದಂತೆ ಆಯ್ಕೆಯಾಗಿರುವ ಬೆಳೆಗಳನ್ನು ಹೋಬಳಿವಾರು ನಿಗದಿಪಡಿಸಲಾಗಿದೆ.
 2013-14ರ  ಹಿಂಗಾರು ಹಂಗಾಮಿನ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿಯಲ್ಲಿ ಒಳಗೊಂಡ ಹೋಬಳಿ ಮತ್ತು ಬೆಳೆಗಳ ಪಟ್ಟಿ ಇಂತಿದೆ.
ಆಲೂರು ತಾಲೂಕು: ಆಲೂರು - ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಕೆಂಚಮ್ಮನ ಹೊಸಕೋಟೆ- ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಕುಂದೂರು- ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಪಾಳ್ಯ - ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ) ಬೆಳೆ  ನಿಗದಿಪಡಿಸಲಾಗಿದೆ.
ಅರಕಲಗೂಡು ತಾಲೂಕು: ಅರಕಲಗೂಡು - ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ದೊಡ್ಡಮಗ್ಗೆ- ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಕೊಣನೂರು - ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಮಲ್ಲಿಪಟ್ಟಣ- ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ರಾಮನಾಥಪುರ- ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ).

ಅರಸೀಕೆರೆ ತಾಲೂಕು: ಅರಸೀಕೆರೆ - ರಾಗಿ (ಮಳೆ ಆಶ್ರಿತ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆಆಶ್ರಿತ), ಕಡಲೆ (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ), ಬಾಣಾವರ- ರಾಗಿ (ಮಳೆ ಆಶ್ರಿತ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆಆಶ್ರಿತ),  ಕಡಲೆ (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ), ಗಂಡಸಿ - ರಾಗಿ (ಮಳೆ ಆಶ್ರಿತ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಕಡಲೆ (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ), ಜಾವಗಲ್ ಲ್ರಾಗಿ (ಮಳೆ ಆಶ್ರಿತ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆಆಶ್ರಿತ), ಕಡಲೆ (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ), ಕಣಕಟ್ಟೆ - ರಾಗಿ (ಮಳೆ ಆಶ್ರಿತ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆಆಶ್ರಿತ), ಕಡಲೆ (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ)
ಬೇಲೂರು ತಾಲೂಕು: ಅರೇಹಳ್ಳಿ - ರಾಗಿ (ಮಳೆ ಆಶ್ರಿತ), ಬೇಲೂರು - ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಬಿಕ್ಕೋಡು - ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಹಳೇಬೀಡು - ಜೋಳ (ಮಳೆ ಆಶ್ರಿತ), ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಮಾದೀಹಳ್ಳಿ - ರಾಗಿ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ)

ಚನ್ನರಾಯಪಟ್ಟಣ ತಾಲೂಕು: ಬಾಗೂರು - ರಾಗಿ (ಮಳೆ ಆಶ್ರಿತ), ಕಡಲೆ (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ), ಚನ್ನರಾಯಪಟ್ಟಣ - ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ದಂಡಿಗನಹಳ್ಳಿ - ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಕಡಲೆ (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ), ಹಿರಿಸಾವೆ - ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ನುಗ್ಗೇಹಳ್ಳಿ - ಬತ್ತ (ನೀರಾವರಿ), ಜೋಳ (ಮಳೆಆಶ್ರಿತ), ರಾಗಿ (ಮಳೆ ಆಶ್ರಿತ), ಕಡಲೆ (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ), ಶ್ರವಣಬೆಳಗೋಳ - ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ)
ಹಾಸನ ತಾಲೂಕು: ದುದ್ದ - ರಾಗಿ (ನೀರಾವರಿ), ರಾಗಿ (ಮಳೆಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆಆಶ್ರಿತ), ಹುರುಳಿ (ಮಳೆಆಶ್ರಿತ), ಹಾಸನ - ರಾಗಿ (ನೀರಾವರಿ), ರಾಗಿ (ಮಳೆಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಹುರುಳಿ (ಮಳೆಆಶ್ರಿತ), ಕಟ್ಟಾಯ - ಬತ್ತ (ನೀರಾವರಿ), ರಾಗಿ (ಮಳೆಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ), ಸಾಲಗಾಮೆ - ರಾಗಿ (ನೀರಾವರಿ), ರಾಗಿ (ಮಳೆಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಹುರುಳಿ (ಮಳೆಆಶ್ರಿತ), ಶಾಂತಿಗ್ರಾಮ - ರಾಗಿ (ನೀರಾವರಿ), ರಾಗಿ (ಮಳೆಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಹುರುಳಿ (ಮಳೆಆಶ್ರಿತ)
ಹೊಳೆನರಸೀಪುರ ತಾಲೂಕು: ಹಳೇಕೋಟೆ - ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ), ಹಳ್ಳಿಮೈಸೂರು
 - ಬತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಹೊಳೆನರಸೀಪುರ - ಭತ್ತ (ನೀರಾವರಿ), ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ)  ಬೆಳೆ ನಿಗದಿಪಡಿಸಲಾಗಿದೆ.

ಸೂಚನೆಗಳು
 ಬೆಳೆ ಸಾಲ ಪಡೆಯುವ ರೈತರನ್ನು 2013-14ರ ಹಿಂಗಾರು ಹಂಗಾಮಿನಲ್ಲಿ ಅ.1 ರಿಂದ  ಡಿ. 31ರವರೆಗೆ ಮತ್ತು ಬೇಸಿಗೆ ಹಂಗಾಮಿನಲ್ಲಿ ಜ.1 ರಿಂದ  ಮಾ.31 ರವರೆಗೆ   ಕಡ್ಡಾಯವಾಗಿ ಬೆಳೆ ವಿಮಾ ವ್ಯಾಪ್ತಿಗೆ ಒಳಪಡಿಸತಕ್ಕದ್ದು. ಬೆಳೆ ಸಾಲ ಪಡೆಯುವ ರೈತರು ಅವರು ಪಡೆಯುವ ಸಾಲದ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ಅಂದರೆ, ಪ್ರಾರಂಭಿಕ ಇಳುವರಿಯ ವಿಮಾ ಮೊತ್ತದವರೆವಿಗೂ ವಿಮೆ ಮಾಡಿಸಬೇಕೆಂದಿದ್ದರೆ ಸ್ವಇಚ್ಛೆಯಿಂದ ವಿಮಾ ಕಂತನ್ನು ಪಾವತಿಸಿ 2013-14ರ ಹಿಂಗಾರು ಹಂಗಾಮಿನಲ್ಲಿ ಡಿ. 31ರೊಳಗೆ ಮತ್ತು 2013-14ರ ಬೇಸಿಗೆ ಹಂಗಾಮಿನಲ್ಲಿ ಫೆ. 28ರೊಳಗೆ ಯೋಜನೆಯಡಿಯಲ್ಲಿ ಪಾಲ್ಗೊಳ್ಳತಕ್ಕದ್ದು.
ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಆಲಿಕಲ್ಲು ಮಳೆ, ಭೂ ಕುಸಿತ, ಚಂಡಮಾರುತ ಮತ್ತು ಪ್ರವಾಹಗಳಿಂದಾಗಿ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುವುದು. ಇಂತಹ ಸ್ಧಳೀಯ ಗಂಡಾಂತರಗಳ ಕಾರಣದಿಂದ ಬೆಳೆ ನಷ್ಟ ಸಂಭವಿಸಿದರೆ, ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ., ಬೆಂಗಳೂರು ಈ ಕಚೇರಿಗಳಿಗೆ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 48 ಗಂಟೆಗಳೊಳಗಾಗಿ ತಿಳಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.