ಗೊರೂರರು ಜನಪದ ಸಂಸ್ಕೃತಿಯ ಹೆಗ್ಗುರುತು'
ಕ.ಪ್ರ.ವಾರ್ತೆ ಹಾಸನ ಡಿ. 4
ಕನ್ನಡ ಜಾನಪದ ಸಂಸ್ಕೃತಿಯ ಒಟ್ಟು ಮೊತ್ತವಾಗಿ ಗೊರೂರು ರಾಮಸ್ವಾಮಿ ಅಯ್ಯಂಗಾರರು ಮೂಡಿಬಂದಿದ್ದರು ಎಂದು ಕನ್ನಡ ಪ್ರಾಧ್ಯಾಪಕ ಡಾ. ಹೆಚ್.ಎಲ್. ಮಲ್ಲೇಶಗೌಡ ಅವರು ತಿಳಿಸಿದರು.
ಹಾಸನ ತಾಲೂಕು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರಿ ನೌಕರರ ಸಂಘದ ಹೇಮಾವತಿ ಜಲಾಶಯ ಶಾಖೆ, ಗೊರೂರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರರ ಸ್ಮರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸತ್ಕಾರ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಭಾಷಣ ಮಾಡಿದರು.
ಹೆಚ್ಚು ಓದಿರದ ಗೊರೂರು ಮುಂದೊಮ್ಮೆ ಇಂಟರ್ ಮಿಡಿಯೇಟ್ ಓದಲು ಹೊರಟಾಗ ಅವರೇ ಬರೆದ ನಮ್ಮೂರಿನ ರಸಿಕರು ಕೃತಿಯನ್ನು ಅಭ್ಯಾಸ ಮಾಡಿ ಬರೆಯಬೇಕಾದ ಪ್ರಸಂಗವನ್ನು ನೆನಪಿಸಿದ ಅವರು, ಮುಂದೆ ಅವರ ಬದುಕು - ಬರಹಗಳು ಅನೇಕ ಸಂಶೋಧಕರಿಗೆ ಅಧ್ಯಯನದ ವಿಷಯವಾಗಿದ್ದು ವಿಶೇಷ ಎಂದರು.
ವಿದೇಶಿ ಭಾಷೆಗಳ ಅಕ್ರಮಣಕ್ಕಿಂತ ವಿದೇಶಿ ಸಂಸ್ಕೃತಿಯ ಅಕ್ರಮಣ ಅಪಾಯಕಾರಿಯಾದ್ದರಿಂದ ಅನ್ನ ಎಂಬ ಪದದ ವಿಶೇಷ ಅರ್ಥ, ಸಂಸ್ಕೃತಿಯ ಹಿನ್ನೆಲೆ ಇಂಗ್ಲೀಷ್ನ ರೈಸ್ ಎಂಬ ಪದಕ್ಕಿಲ್ಲ. ಹಾಗಾಗಿಯೇ ಪಾಶ್ಚಾತ್ಯ ಸಂಸ್ಕೃತಿಯ ಪ್ರತೀಕವಾದ ಹುಟ್ಟುಹಬ್ಬದ ಸಂದರ್ಭದಲ್ಲಿ ಇಂಗ್ಲೀಷ್ ಪದಗಳ ಬಳಕೆ ಹೇರಳವಾಗಿದ್ದರೆ ನಮ್ಮ ಸಂಸ್ಕೃತಿಯ ಪ್ರತೀಕವಾದ ತಿಥಿಯಾಚರಣೆಯಲ್ಲಿ ಕಷ್ಟಪಟ್ಟು ಬಳಸಬೇಕೆಂದರೂ ಇಂಗ್ಲೀಷ್ ಪದಗಳ ಬಳಕೆ ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಲಾಶಯದ ಮುಖ್ಯ ಇಂಜಿನಿಯರ್ ಹೆಚ್.ಕೆ. ಕೃಷ್ಣೇಗೌಡ ಕನ್ನಡ ನೆಲ, ಜಲ ಹತ್ತು ಹಲವು ವಿಷಯಗಳಲ್ಲಿ ವಿಶಿಷ್ಟವಾಗಿದೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಜಲ ಸಂಪನ್ಮೂಲ ಹೊಂದಿ, ನೆರೆಯ ತಮಿಳುನಾಡು, ಆಂದ್ರಪ್ರದೇಶ, ಗೋವಾ, ಮಹಾರಾಷ್ಟ್ರಗಳಿಗೆ ನೀರುಣಿಸುತ್ತಿದೆ. ಮೊದಲಿನಿಂದಲೂ ಜನಪದ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದ ಹಿರಿಮೆಗೆ ಕನ್ನಡನಾಡು ಪಾತ್ರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ವಾಮಿನಾಯಕ್, ಜಿ.ಟಿ. ವೆಂಕಟೇಶ್, ಗೊರೂರು ಶಿವೇಶ್, ಎಂ.ಆರ್. ಚಂದ್ರಶೇಖರ್, ಜಗದೀಶ್ ರಾಮಘಟ್ಟ ಮತ್ತು ಸ್ವಾಮಿಗೌಡರವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಕಾರ್ಯಕ್ರಮ ನಡೆಯಿತು. ತಾಲೂಕು ಕಸಾಪ ಅಧ್ಯಕ್ಷ ಮಮತೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ ಹೆಚ್.ಎಲ್. ಜನಾರ್ಧನ್ ಆಶಯ ಭಾಷಣ ಮಾಡಿದರು.
ಹೇಮಾವತಿ ಘಟಕ ಸರ್ಕಾರಿ ನೌಕರರ ಗೌರವಾಧ್ಯಕ್ಷ ಶ್ರೀನಾಥ್ ಸ್ವಾಗತಿಸಿ, ಅಧ್ಯಕ್ಷ ಬಿ.ಕೆ. ರುದ್ರಪ್ಪ ವಂದಿಸಿದರು.
ಮಂಜುಳ ಶಿವಕುಮಾರ್ ನಿರೂಪಿಸಿದರು. ಜಿ.ಪಂ. ಸದಸ್ಯ ದ್ಯಾವಪ್ಪ ಮಲ್ಲಿಗೆವಾಳು ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಕೃಷ್ಣ, ಕ.ಸಾ.ಪ ಗೌರವ ಕಾರ್ಯದರ್ಶಿ ಹರೀಶ್ ಸಿ.ಕೆ. ಕಟ್ಟಾಯ ಹೋಬಳಿ ಘಟಕದ ಅಧ್ಯಕ್ಷ ಕಾಂತರಾಜು, ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಶಂಕರ್, ತ್ಯಾವಿಹಳ್ಳಿ ಪರಮೇಶ್, ವಜೀರ್ ಖಾನ್ ಮುಂತಾದವರು ಸಮಾರಂಭದಲ್ಲಿ ಇದ್ದರು.
ಗೊರೂರಲ್ಲೂ ಕಾರ್ಯಕ್ರಮ
ಗೊರೂರಿನಲ್ಲಿ ನಡೆದ ಗೊರೂರು ಸ್ಮರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹೇಮಾವತಿ ಜಲಾಶಯದ ಮುಖ್ಯ ಇಂಜಿನಿಯರ್ ಕೃಷ್ಣೇಗೌಡ ಎಚ್.ಕೆ. ಉದ್ಘಾಟಿಸಿದರು. ಹೇಮಾವತಿ ಯೋಜನಾ ಘಟಕದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಕೆ. ರುದ್ರಪ್ಪ, ಪ್ರಾಧ್ಯಾಪಕರಾದ ಡಾ. ಎಚ್.ಎಲ್. ಮಲ್ಲೇಶ ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹೆಚ್.ಎಲ್. ಜನಾರ್ಧನ್, ತಾಲೂಕು ಕ.ಸಾ.ಪ ಅಧ್ಯಕ್ಷ ಮಮತೇಶ್ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

