ಪ್ರಚಲಿತ ವಿದ್ಯಮಾನಗಳಿಂದ ನೋವು - ಶಿವಣ್ಣ ವಿಷಾದ
ಚನ್ನರಾಯಪಟ್ಟಣ: ತಮ್ಮ ದೇಶದಲ್ಲಿನ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ತಮಗೆ ಅಪಾರ ನೋವುಂಟಾಗುತ್ತದೆ ಎಂದು ಸ್ವಾತಂತ್ರ್ಯ ಹೋರಾಟಗಾರರಾದ ಶಿವಣ್ಣ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಇಂಡಿಯನ್ ರೆಡ್ಕ್ರಾಸ್ ಸಂಸ್ಥೆ ಏರ್ಪಡಿಸಿದ್ದ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿನ ಕೆಲ ವಿದ್ಯಮಾನಗಳನ್ನು ನೋಡುತ್ತಿದ್ದರೆ ತಮಗೆ ನೋವುಂಟಾಗುತ್ತದೆ. ಸ್ವಾತಂತ್ರ್ಯಕ್ಕಾಗಿ ಎಷ್ಟೋ ಮಂದಿ ತಮ್ಮ ಪ್ರಾಣ ನೀಡಿದ್ದಾರೆ. ಅಂತಹ ದೇಶವನ್ನು ನಾವಿಂದು ಯಾವ ರೀತಿಯಲ್ಲಿ ಉಳಿಸಿಕೊಂಡು ಹೋಗಬೇಕೆಂಬುದರ ಅರಿವನ್ನು ತಾವೆಲ್ಲರೂ ತಿಳಿಯಬೇಕಾಗಿದೆ ಎಂದು ತಿಳಿಸಿದರು.
ದೇಶದ ಇಂತಹ ಕೀಳುಮಟ್ಟದ ಪರಿಸ್ಥಿತಿಗೆ ರಾಜಕಾರಣಿಗಳು ಕಾರಣರಾಗಿದ್ದು, ಅವರಿಗೆ ತಮ್ಮ ವೈಯಕ್ತಿಕ ಬೆಳವಣಿಗೆಗೆ ಮುಖ್ಯವಾಗಿದ್ದು, ದೇಶದ ಬಗ್ಗೆ ಚಿಂತನೆ ಅವರಿಗಿಲ್ಲ ಎಂದು ತಿಳಿಸಿದರು.
ರಾಮಾಯಣದಲ್ಲಿನ ರಾವಣನಿಗೆ ಒಮ್ಮೆಯಾದರೂ ತಾನು ಮಾಡುತ್ತಿರುವ ತಪ್ಪು ಅರಿವಾಗಿ ಅದನ್ನು ಹೊರಗಿಟ್ಟಿದ್ದಾನೆ. ಆದರೆ ದೇಶದಲ್ಲಿನ ರಾಜಕಾರಣಿಗಳು ತಾವು ಎಷ್ಟೇ ತಪ್ಪು ಮಾಡುತ್ತಿದ್ದರೂ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ತಹಸೀಲ್ದಾರ್ ಡಾ. ನಾಗರಾಜು ಮಾತನಾಡಿ ರೆಡ್ಕ್ರಾಸ್ ಸಂಸ್ಥೆ ಒಂದು ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯಾಗಿದ್ದು, ದೇಶದ ಪ್ರಗತಿಗೆ ಸಂಘಟನೆ ಬಲಗೊಳ್ಳಬೇಕು. ಜನಸಾಮಾನ್ಯರು ಸಂಸ್ಥೆಯ ಸದಸ್ಯತ್ವ ಹೊಂದಿ ದೇಶ ಸೇವೆಗೆ ಮುಂದಾಗಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದಲ್ಲಿ ಸದಸ್ಯರಾಗಿರುವ ಎಲ್ಲಾ ಸದಸ್ಯರು ಸಂಸ್ಥೆಗೆ ಸದಸ್ಯತ್ವ ಪಡೆಯುವಂತೆ ಕರೆ ನೀಡಿದ ಅವರು ಜೀವನದಲ್ಲಿ ಹಣ ಗಳಿಸುವುದೇ ಮುಖ್ಯ ಅಲ್ಲ. ಅದರ ಜತೆಗೆ ದೇಶದ ಉಳಿವು ಮುಖ್ಯವಾಗಿದ್ದು, ದೇಶ ಸೇವೆ ಮಾಡುತ್ತಿರುವ ಸಂಘಟನೆಗಳ ಜತೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಹೆಮ್ಮಿಗೆ ಮೋಹನ್, ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಮಲ್ಲಿಕಾರ್ಜುನ್, ರಾಮೇಗೌಡ, ಪರಿಸರ ಪ್ರೇಮಿ ಅಶೋಕ್ ಉಪಸ್ಥಿತರಿದ್ದರು.
ತಾಲೂಕು ಘಟಕದ ಅಧ್ಯಕ್ಷರಾಗಿ ಪ್ರಕಾಶ್ ಜೈನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಹೆಮ್ಮಿಗೆ ಮೋಹನ್ ಪ್ರಕಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

