ಹಾಸನ

ಶಾಲೆ ತಡೆಗೋಡೆಗೆ ಗೇಟ್ ಅಳವಡಿಕೆ

Published On :

ಕ.ಪ್ರ.ವಾರ್ತೆ    ರಾಮನಾಥಪುರ    ಡಿ.4
ಇಲ್ಲಿನ ಸರ್ಕಾರಿ ಶಾಲೆಯ ಆಸುಪಾಸಿನಲ್ಲೇ ಮೀನು ಕಬಾಬು ಅಂಗಡಿ ತೆರವಿಗೆ ಯಾರೂ ಕಿವಿಗೊಡುತ್ತಿಲ್ಲ ಎಂದು ನ.22ರ ಕನ್ನಡಪ್ರಭ 4ನೇ ಪುಟದಲ್ಲಿ ಸುದ್ದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಗ್ರಾಮಪಂಚಾಯ್ತಿಯವರು ಶಾಲೆಯ ತಡೆಗೋಡೆಗೆ ಗೇಟ್ ಅಳವಡಿಸಿ ತಡೆಗೋಡೆ ಒಳಭಾಗ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿಸಿದ್ದಾರೆ.
ಇನ್ನು ತಡೆಗೋಡೆಗೆ ಹೊಂದಿಕೊಂಡಂತಿರುವ ಮೀನು ಕಬಾಬು ಅಂಗಡಿ ಇನ್ನಿತರೆ ಅಂಗಡಿಗಳನ್ನು ತೆರವುಗೊಳಿಸಲು ಮುಂದಾದಾಗ ಅಂಗಡಿಯವರು ಕೆಲ ದಿನಗಳವರೆಗೆ ಸಮಯ ಪಡೆದಿದ್ದು, ನಂತರ ಕ್ರಮ ಜರುಗಿಸುವುದಾಗಿ ಗ್ರಾಮ ಪಂಚಾಯಿತಿ ಪಿಡಿಓ ತಿಳಿಸಿದ್ದಾರೆ.
ರಾಮನಾಥಪುರದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ ಜಾತ್ರೆ ಇನ್ನೇನು ಶುರುವಾಗಲಿದ್ದು, ಪಟ್ಟಣದ ಸ್ವಚ್ಛತೆ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಲು ಪೊಲೀಸ್ ಇಲಾಖೆ ಸಹಾಯದಿಂದ  ಗ್ರಾಮ ಪಂಚಾಯ್ತಿ ಪಿಡಿಓ  ಮುಂದಾದಾಗ ಕೆಲವು ಪುಡಾರಿಗಳು, ಬುದ್ಧಿಜೀವಿಗಳು ಸೇರಿ ತೆರವುಗೊಳಿಸದಂತೆ ಒತ್ತಡ ಹೇರಿದ್ದರಿಂದ ಪಟ್ಟಣದ ಸ್ವಚ್ಛತೆಗೆ ಅಡ್ಡಿಯುಂಟಾಗುತ್ತಿದೆ ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.