ಹಾಸನ

ನಿರಂತರ ಸಾಧನೆಯಿಂದ ಶಾಂತಿ

Published On :

ಅರಕಲಗೂಡು: ಇಷ್ಟ ಲಿಂಗಾರ್ಚನೆಯಿಂದ ಶ್ರೇಷ್ಠ ಶಿವಯೋಗ ಸಾಧಿಸಲು ಸಾಧ್ಯ, ಶಿವಯೋಗದ ನಿತಂತರ ಸಾಧನೆ ಸಿದ್ದಿಯಿಂದ ಮನುಷ್ಯನಿಗೆ ಶಾಂತಿ, ಸಮಾಧಾನ, ನೆಮ್ಮದಿ, ಆತ್ಮಾನಂದ ಪ್ರಾಪ್ತಿಯಾಗುತ್ತದೆ ಎಂದು  ಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
  ತಾಲೂಕಿನ ದೊಡ್ಡಮಗ್ಗೆ ಹೋಬಳಿ ತಟ್ಟವಾಳು ಗ್ರಾಮದಲ್ಲಿ ನೂತನ ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ  ಕಾರ್ತೀಕ ಮಾಸದ ಪ್ರಯುಕ್ತ ನಡೆದ ಪಾದ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಮಾತನಾಡುತ್ತಿದ್ದರು.  ಯೋಗಗಳಲ್ಲಿ ಶಿವಯೋಗ ಶ್ರೇಷ್ಠವಾಗಿದೆ. ಇದು ಅಚರಣೆಯೂ ತುಂಬ ಸರಳವಾಗಿದೆ. ಜೀವನದ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ವೀರಶೈವ ಧರ್ಮ ಇಂದು ಒಳ ಪಂಗಡಗಳ ಕಾರಣ ಯಾವ ಕ್ಷೇತ್ರದಲ್ಲೂ ಉನ್ನತಿ ಸಾಧಿಸಲು ಸಾಧ್ಯವಾಗುತ್ತಿಲ್ಲ, ಅದ್ದರಿಂದ ಮುಂದಿನ ದಿನಗಳಲ್ಲಿ ಭಕ್ತರು ನಡೆ, ನುಡಿ, ಭಕ್ತಿಭಾವ, ಸಹಕಾರ, ಸಂಸ್ಕಾರದಲ್ಲಿ ಮುಂದೆ ಬರುವಂತೆ ಕರೆ ನೀಡಿದರು.                                                                     ಕೆ.ಅರ್.ನಗರ ತಾಲ್ಲೂಕು ಕರ್ಪೂರವಳ್ಳಿ  ಜಂಗಮ ಮಠದ  ಚಂದ್ರಶೇಖರ ಶಿವಚಾರ್ಯಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.                                                                     ಕರ್ತಾಳು ಹಿರೇಮಠ ಶ್ರೀ ರೇಣುಕಾ ರಾಜಶೇಖರ ಶಿವಚಾರ್ಯಸ್ವಾಮೀಜಿ, ಮಳವಳ್ಳಿ ಮಠದ ಶಾಂತಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಜಿ, ಚುಲುಮೆ ಮಠ ಜಯದೇವಸ್ವಾಮೀಜಿ, ಕೆಸವತ್ತೂರು ಸಿದ್ದಲಿಂಗೇಶ್ವರ ಮಠ ಬಸವರಾಜೇಂದ್ರಸ್ವಾಮೀಜಿ, ದಾನ ಚಿಂತಾಮಣಿ ಟಿ.ಡಿ. ತಮ್ಮಯ್ಯಶೆಟ್ಟಿ ಹಾಗೂ ದಾನಿ ಮುಕ್ಕಣ್ಣಶೆಟ್ಟಿ, ವಾಣಿಜೋದ್ಯಮಿ ಮೈಸೂರು ಟಿ.ಟಿ. ಮಹೇಶ್, ಪುರೋಹಿತ ದಿನೇಶ ಶಾಸ್ತ್ರಿ, ಸಮಾಜ ಸೇವಕಿ ಸರ್ವಮಂಗಳಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.