ಕಾವಿಧಾರಣೆ ಪರಿವರ್ತನೆಗೆ ಸಹಕಾರಿ
ಬೇಲೂರು: ಸಮಾಜದಲ್ಲಿನ ಅಂಧಕಾರ, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಪರಿವರ್ತನೆಯನ್ನು ಜನರಿಗೆ ನೀಡುವಲ್ಲಿ ಕಾವಿಧಾರಿಗಳು ಪ್ರಯತ್ನಿಸಬೇಕು. ಕಾವಿಧಾರಣೆ ನಾಟಕದ ವೇಷವಲ್ಲ, ಅದು ಪರಿವರ್ತನೆಗೆ ಸಹಕಾರಿ ಎಂದು ಸಿರಿಗೆರೆ ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ತಾಲೂಕಿನ ಯಲಹಂಕ ಗ್ರಾಮದಲ್ಲಿ ಬುಧವಾರ ಶ್ರೀ ವೀರಭದ್ರಸ್ವಾಮಿ ಕಾರ್ತೀಕೋತ್ಸವ ಹಾಗೂ ಸರ್ವ ಶರಣರ ಸಮ್ಮೇಳನ ಉದ್ಘಾಟನೆ ನಡೆಸಿ ಮಾತನಾಡಿದ ಅವರು, ನಡೆ-ನುಡಿಯಲ್ಲಿ ಶುದ್ಧತೆ ಇಲ್ಲದೆ ಪರಿಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯವಿಲ್ಲ ಎಂದರು.
ಇನ್ನೊಬ್ಬರಿಗೆ ಹೇಳುವ ಪ್ರಥಮದಲ್ಲಿ ತನ್ನ ಜೀವನ ಹೇಗೆ ಇದೆ ಎಂದು ಒಂದು ಕ್ಷಣ ಅತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ನಮ್ಮ ಮುಂದೆ ಇದೆ ಎಂದ ಅವರು, ದೇಶದ ಪ್ರಗತಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ. ಇಂದಿನ ಶಿಕ್ಷಣ ವ್ಯಕ್ತಿಯ ವಿಕಾಸನಕ್ಕೆ ಅಡ್ಡಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿ, ಜಾತಿರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ನಾವು ಕಂಕಣಬದ್ಧರಾಗಬೇಕುಎಂದರು.
ಚಿಕ್ಕಮಗಳೂರು ಬಸವಮಂದಿರದ ಶ್ರೀ ಜಯಬಸವಾನಂದ ಸ್ವಾಮೀಜಿ ಮಾತನಾಡಿ, ಇಂದಿನ ಯುವಕರು ಗುರು ಮತ್ತು ಗುರಿ ಇಲ್ಲದ ಮಾರ್ಗದಲ್ಲಿ ಸಾಗುತ್ತಿದ್ದು, ಭವ್ಯ ಭಾರತಕ್ಕೆ ಹಿನ್ನಡೆಯಾಗುತ್ತದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಡಿ. ಚಂದ್ರೇಗೌಡ, ತಾಲೂಕು ಪಂಚಾಯ್ತಿ ಸದಸ್ಯ ರವಿಕುಮಾರ್, ಸಮಾಜದ ಮುಖಂಡ ಹಳೇಬೀಡು ಕಾಂತರಾಜು, ಕಡಿದಾಳು ಮಂಜಪ್ಪ, ಸಾಹಿತಿ ಚಟ್ನಳ್ಳಿ ಮಹೇಶ್, ಬೇಲೂರು ಪಿಎಸ್ಐ ಅಶ್ವಿನ್ ಕುಮಾರ್, ಕನನಾಯಕನಹಳ್ಳಿ ಮಹಾದೇವ್, ಕೊರಟಿಗೆರೆ ರಾಜಣ್ಣ, ಎಪಿಎಂಸಿ ಸದಸ್ಯ ಪಂಚಾಕ್ಷರಯ್ಯ, ಎಚ್.ಜಿ.ಭುವನೇಶ್, ವಕೀಲ ರಾಜಶೇಖರ್, ಎಲ್.ವಿ.ಬಸವರಾಜು ಇನ್ನು ಮುಂತಾದವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಪುಟಾಣಿ ಪೃಥ್ವಿಯಿಂದ ಭರತನಾಟ್ಯ ಹಾಗೂ ಶ್ರೀ ಅಕ್ಕಮಹಾದೇವಿ ಮಹಿಳಾ ಸಂಘ ಚಿಕ್ಕಮಗಳೂರು ಇವರಿಂದ ವಚನ ಗಾಯನ, ಸಾಣೇನಹಳ್ಳಿ ನಾಟಕ ಕಲಾವೃಂದ ಇವರಿಂದ ಮಹಾಬೆಳಗು ಎಂಬ ನಾಟಕ ಪ್ರದರ್ಶನ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

