ಹಾಸನ

'ಭಕ್ತಿ, ಶ್ರದ್ಧೆಯಿಂದ ಹಚ್ಚುವ ದೀಪವೇ ಲಕ್ಷ ದೀಪೋತ್ಸವ'

Published On :

ಕ.ಪ್ರ.ವಾರ್ತೆ   ಚನ್ನರಾಯಪಟ್ಟಣ   ಡಿ.5
ಭಕ್ತಿ ಎಂಬ ಶ್ರದ್ಧೆಯಿಂದ ಹಚ್ಚುವ ದೀಪವೇ ಲಕ್ಷ ದೀಪೋತ್ಸವ, ಜ್ಞಾನದಿಂದ ಹಚ್ಚುವ ದೀಪಕ್ಕೆ ಸಮನಾಗಿರುತ್ತದೆ. ಎಲ್ಲರೂ ತನು-ಮನ- ಧನದಿಂದ ಭಕ್ತಿಯಿಂದ ಹಚ್ಚುವುದು ಎಂದರ್ಥ ಎಂದು ನುಗ್ಗೇಹಳ್ಳಿ ಪುರವರ್ಗದ ಶ್ರೀ ಮಹೇಶ್ವರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ಶ್ರೀ ಕ್ಷೇತ್ರ ಪುಣ್ಯ ಧಾಮ ಧರ್ಮಜ್ಯೋತಿ ಶ್ರೀ ಶನೇಶ್ವರ ಶ್ರೀ ಮುನೇಶ್ವರ ಟ್ರಸ್ಟ್ ಮಂಜುನಾಥಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ 15ನೇ ವರ್ಷದ ಲಕ್ಷ ದೀಪೋತ್ಸವ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನುಷ್ಯನು ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು. ಆ ಸಾಧನೆ ಸಮಾಜಕ್ಕೆ ಕೊಡುಗೆಯಾಗಿರುವ ಕೆಲಸವಾಗಿರಬೇಕು. ಮನುಷ್ಯನಿಗೆ ಆಸೆ ಇರಬೇಕು. ಅದು ಅತಿ ಆಸೆ ಇರಬಾರದು. ಹಾಗಿದ್ದಲ್ಲಿ ಭೂಲೋಕದಲ್ಲಿ ಮಳೆ ಬೆಳೆ ಕಡಿಮೆಯಾಗುತ್ತದೆ. ಮನುಷ್ಯನು ಹುಟ್ಟಿದಾಗಲೂ ಬೆತ್ತಲೆ. ಹೋಗುವಾಗಲೂ ಬೆತ್ತಲೆ. ಎರಡರ ಮಧ್ಯದಲ್ಲಿ ನಾವು ಮಾಡುವ ಸಾಧನೆ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಶ್ರೀ ಶ್ರೀಧರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಇಲ್ಲಿ ಹಚ್ಚಿರುವ ದೀಪದ ಬೆಳಕು ಪ್ರತಿಯೊಬ್ಬರ ಮನೆಯಲ್ಲಿ ಮನದಲ್ಲಿ ಮತ್ತು ನಾಡಿನಾದ್ಯಂತ ಪ್ರಕಾಶಿಸಲಿ ಎಂದು ಹಾರೈಸಿದರು.
ದೇವರ ಹೆಸರಿನಲ್ಲಿ ಮಾಡುವ ಕೆಲಸ ಸತ್ಯವಾಗಿರಬೇಕು. ಆ ಕೆಲಸಕ್ಕೆ ನೆಮ್ಮದಿ ಸಿಗುತ್ತದೆ. ಆಸ್ತಿ ಮಾಡಿದರೆ ನೆಮ್ಮದಿ ಇರುವುದಿಲ್ಲ. ನಾವು ಮಾಡುವ ಆಸ್ತಿ ಶಾಶ್ವತವಲ್ಲ. ಕಷ್ಟ ಎಂಬ ರಾಶಿಯನ್ನು ಗುಡಿಸಿ ಸ್ವಚ್ಛತೆ ಮಾಡುವುದರಿಂದ ನಮ್ಮೆಲ್ಲರ ಕಷ್ಟ ಬಗೆಹರಿಯುವುದು ಎಂದು ಹೇಳಿದರು.
ಮನುಷ್ಯನು ಜ್ಞಾನ ಭಕ್ತಿ, ಶ್ರದ್ಧೆ ಹೊಂದಿ, ತಂದೆ- ತಾಯಿ, ಗುರು ಹಿರಿಯರನ್ನು ಗೌರವಿಸುವುದು, ಇದರಿಂದ ಮನಃತೃಪ್ತಿ ಸಿಗುತ್ತದೆ. ಲೋಕ ಕಲ್ಯಾಣಕ್ಕಾಗಿ ಹಾಗೂ ಬಡ ವಿದ್ಯಾರ್ಥಿಗಳಿಗಾಗಿ ಈ ಟ್ರಸ್ಟ್ ತೆರೆದಿದ್ದೇವೆ. ಲೋಕ ಕಲ್ಯಾಣದ ಕಾರ್ಯವನ್ನು ನೆರವೇರಿಸಲು ಭಕ್ತರು ಸಹಕರಿಸಬೇಕೆಂದು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಜಯದೇವಯೋಗಿರಾಜೇಂದ್ರ ಸ್ವಾಮೀಜಿ, ರೇಖಾಬಾಯಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾರಾಮಕೃಷ್ಣ, ಮಂಡ್ಯ ಜಿಲ್ಲಾ ಪಂಚಾಯ್ತಿ  ಉಪಾಧ್ಯಕ್ಷ ಪ್ರಭಾಕರ್, ನುಗ್ಗೇಹಳ್ಳಿ ಸಬ್ ಇನ್‌ಸ್ಪೆಕ್ಟರ್ ಜಗದೀಶ್, ಹರೀಸಾವೆ ಸಬ್ ಇನ್ಸ್‌ಪೆಕ್ಟರ್, ಕೆಂಪೇಗೌಡ ವೇದಿಕೆ ಅಧ್ಯಕ್ಷ ಆನಂದ್ ಕಾಳೇನಹಳ್ಳಿ, ರಾಜೇಗೌಡ, ಮುತ್ತಪ್ಪ, ರವೀಶ್ ಇದ್ದರು.
ಶಿವಾನಂದ ಸ್ವಾಗತಿಸಿದರು. ಮೂರ್ತಿ ನಿರೂಪಿಸಿದರು. ಹೆಚ್. ಎನ್. ಪರಮೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.