ಹಾಸನ

ವ್ಯಾಪಾರಿಗಳ ತೆರವಿಗೆ ಆಗ್ರಹ

Published On :

ಕ.ಪ್ರ.ವಾರ್ತೆ  ಬೇಲೂರು  ಡಿ.5
ಕೆಲ ವ್ಯಾಪಾರಸ್ಥರು ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಗೆ ಹೋಗದೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದು, ಅವರನ್ನು ತೆರವುಗೊಳಿಸುವಂತೆ ಒತ್ತಾಯಿಸಿ ತಾಲೂಕು ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಹೂವಿನ ವ್ಯಾಪಾರಿಗಳು ಇತ್ತೀಚೆಗೆ ಪುರಸಭೆಯ ಮುಖ್ಯಾಧಿಕಾರಿಗಳಲ್ಲಿ ಮನವಿ ಮಾಡಿದರು.
ಪಟ್ಟಣದ ಸೌಂದರ್ಯದ ದೃಷ್ಟಿಯಿಂದ ಮುಖ್ಯಾಧಿಕಾರಿ ಬಸವರಾಜು ನೇತೃತ್ವದಲ್ಲಿ ಪಟ್ಟಣದೆಲ್ಲಡೆ ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ ಇಲ್ಲಿನ ಐ.ಡಿ.ಎಸ್.ಎಂ.ಟಿ ವಾಣಿಜ್ಯ ಮಳಿಗೆಯ ಅವರಣದಲ್ಲಿ ಫುಟ್‌ಪಾತ್ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ 83 ಕಟ್ಟೆಗಳನ್ನು ನಿರ್ಮಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟತ್ತು .
ಆದರೆ ಕೆಲವು ತರಕಾರಿ ಮತ್ತು ಹೂವಿನ ವ್ಯಾಪಾರಿಗಳು ಖಾಲಿ ಮಾಡಿದ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅರುಣ್ ಕುಮಾರ್ ಮಾತನಾಡಿ, ಪುರಸಭೆ ಪಟ್ಟಣದ ಅಂದ ಹೆಚ್ಚಿಸುವ ನಿಟ್ಟಿನಲ್ಲಿ ಪುಟ್‌ಪಾತ್ ಖಾಲಿ ಮಾಡಿಸಿದ್ದು ಸಂತಸ ತಂದಿದೆ. ಆದರೆ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಯಲ್ಲಿ ಇರುವ ಹೂವಿನ ವ್ಯಾಪಾರಿಗಳಿಗೆ ದಿನ ನಿತ್ಯ ಯಾವ ವ್ಯಾಪಾರವಿಲ್ಲದೆ ತೀವ್ರ ತೊಂದರೆಯಾಗಿದೆ.
ಕಾರಣ, ಖಾಲಿ ಮಾಡಿಸಿದ ಫುಟ್‌ಪಾತ್‌ನ ಮೇಲೆ ಕೆಲ ಅಂಗಡಿ ಮಾಲೀಕರ ಸಹಕಾರದಿಂದ ಹೂವಿನ ವ್ಯಾಪಾರ ಮಾಡುತ್ತಿದ್ದು, ವಾಣಿಜ್ಯ ಮಳಿಗೆ ಯಾರೂ ಬರುವುದಿಲ್ಲ. ಕಾರಣದಿಂದ ಬೇಲೂರು ಪುರಸಭೆ ಶೀಘ್ರ ಬಸ್ ನಿಲ್ದಾಣದ ಎದುರು ಇರುವ ಹೂವಿನ ವ್ಯಾಪಾರಿಗಳನ್ನು ಖುಲ್ಲಾ ಮಾಡಿಸಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಬಸವರಾಜು ಬಸ್ ನಿಲ್ದಾಣದ ಮುಂಭಾಗವಿರುವ ಹೂವಿನ ವ್ಯಾಪಾರಿಗಳು ಸಂಜೆ ಒಳಗೆ ಖಾಲಿ ಮಾಡಬೇಕು. ಈ ಸಂಬಂಧ ನಾನು ಜಿಲ್ಲಾಧಿಕಾರಿಗಳಲ್ಲಿ ಮಾತನಾಡಿದ್ದೇನೆ. ಸಾರ್ವಜನಿಕರು ಸ್ವಚ್ಛ ಪಟ್ಟಣಕ್ಕೆ ಒತ್ತು ನೀಡಬೇಕು ಎಂದರು. ಈ ಸಂದರ್ಭದಲ್ಲಿ ಹೂವಿನ ವ್ಯಾಪಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.