ಹಾಸನ

350 ವರ್ಷಗಳ ಇತಿಹಾಸದ ಕುಂದೂರು ಮಠ ಹಸ್ತಾಂತರ

Published On :

ಚನ್ನರಾಯಪಟ್ಟಣ: ಒಕ್ಕಲಿಗರ ಪ್ರಥಮ ಮಠವೆಂದು ಕರೆಯಲ್ಪಡುವ, 350ಕ್ಕೂ ವರ್ಷಗಳ ಇತಿಹಾಸವಿರುವ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕುಂದೂರು ಮಠವನ್ನು ಶ್ರೀ ಆದಿಚುಂಚನಗಿರಿ ಮಠದ ಆಧೀನದಲ್ಲಿರುವ ಆದಿಶಕ್ತಿ ಮೆಳಿಯಮ್ಮ ಟ್ರಸ್ಟ್‌ಗೆ ಗುರುವಾರ ಹಸ್ತಾಂತರಿಸಲಾಯಿತು.
ಗುರುವಾರ ಮಧ್ಯಾಹ್ನ ಕುಂದೂರು ಮಠದ ರಾಮಯ್ಯ ಪರದೇಶಿ ಸ್ವಾಮೀಜಿ ಅವರು ಮಠ ಸೇರಿದಂತೆ 240ಕ್ಕೂ ಹೆಚ್ಚು ಎಕರೆ ಭೂಮಿ ಹಾಗೂ ದೇವಾಲಯದ ಉಸ್ತುವಾರಿಯನ್ನು ಟ್ರಸ್ಟ್‌ಗೆ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಹಸ್ತಾಂತರಿಸಿದರು.
ಆದಿಚುಂಚನಗಿರಿ ಮಠಾದೀಶರಾದ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಶಾಖಾಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ ಈ ಸಂದರ್ಭದಲ್ಲಿ ಹಾಜರಿದ್ದರು. ಕುಂದೂರು ಗ್ರಾಮದ ಜನತೆ ರಾಮಯ್ಯ ಪರದೇಶಿ ಸ್ವಾಮೀಜಿ ಅವರೊಂದಿಗೆ ಆಗಮಿಸಿ ಮಠದ ಉಸ್ತುವಾರಿಯನ್ನು ಆದಿಚುಂಚನಗಿರಿ ಮಠಕ್ಕೆ ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.