ಹಾಸನ

ಕೋಡಿಮಠ ಶ್ರೀ ವಿರುದ್ಧ ಕಾಂಗ್ರೆಸ್ ಟೀಕೆ: ಖಂಡನೆ

Published On :

ಕ.ಪ್ರ.ವಾರ್ತೆ   ಹಾಸನ   ಡಿ.5
ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿರುವ ಕೋಡಿಮಠದ ಶ್ರೀ  ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಬಗ್ಗೆ ಅವಹೇಳನ ಮಾಡಿರುವ ಕಾಂಗ್ರೆಸ್ ಹಿಂದುಳಿದ ವರ್ಗದ ಮುಖಂಡ ಎಂ.ಕೆ. ಶೇಷಗೌಡ ಅವರ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಖಂಡಿಸಿದ್ದಾರೆ.
ಸ್ವಾಮೀಜಿ ಅವರನ್ನು ಅವಹೇಳನ ಮಾಡಿದ್ದಲ್ಲದೆ ಕೋಡಿಮಠಕ್ಕೆ ಹೋಗುವವರು ಅಯೋಗ್ಯರು ಎಂದು ಹೇಳಿರುವ ಹೇಳಿಕೆ ಸರ್ವಾಧಿಕಾರದಿಂದ ಕೂಡಿದೆ. ಇದನ್ನು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ ಎಂದಿದ್ದಾರೆ.
ಸ್ವಾಮೀಜಿಯವರನ್ನು, ಮಠ- ಮಂದಿರಗಳನ್ನು ಟೀಕಿಸುವ, ಅವಹೇಳನ ಮಾಡಿರುವ ಶೇಷೇಗೌಡರು ಕ್ಷಮೆ ಯಾಚಿಸಬೇಕು. ಒಬ್ಬ ಮುಖಂಡರಾಗಿ ಬಾಯಿಗೆ ಬಂದ  ಹೇಳಿಕೆ ನೀಡಿರುವುದು ಸರಿಯಲ್ಲ. ಇಂತಹ ಹೇಳಿಕೆಯಿಂದ ಧಾರ್ಮಿಕ ಗುರುಗಳನ್ನು ಅಪಮಾನಿಸುವ ಪ್ರವೃತ್ತಿ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಠ- ಮಾನ್ಯಗಳು ಸ್ವಾಮೀಜಿಯವರು ಅನ್ನದಾಸೋಹ, ವಿದ್ಯಾದಾನ, ಧರ್ಮದ ವಿಚಾರ ಪ್ರಚಾರ ನೀಡುವ ಮೂಲಕ ಹಿಂದೂ ಧರ್ಮದ ಧಾರ್ಮಿಕತೆ ಉಳಿವಿಗೆ ಸಹಕಾರಿಯಾಗಿದೆ ಎಂದಿದ್ದಾರೆ.
ಅನೇಕ ಹಿರಿಯ ರಾಜಕೀಯ ಮುಖಂಡರು, ಗಣ್ಯ ವ್ಯಕ್ತಿಗಳು, ಅಧಿಕಾರಿಗಳು, ಭಕ್ತರು ಕೋಡಿಮಠದ ಪವಿತ್ರ ಗದ್ದುಗೆಯ ದರ್ಶನ ಮಾಡಲು ಬರುತ್ತಾರೆ ಹಾಗೂ ಪವಿತ್ರ ಗ್ರಂಥದ ವಿಚಾರವನ್ನು ತಿಳಿದುಕೊಳ್ಳಲು ಬರುತ್ತಾರೆ. ಅವರೆಲ್ಲರನ್ನೂ ಅಯೋಗ್ಯರು ಎಂದು ಹೇಳಿರುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.