ಹಾಸನ

ಸುದ್ದಿ ಸಂಕ್ಷೇಪ

Published On :

ಕಾರ್ಯಕರ್ತರ ಹರ್ಷ
ಹಾಸನ: ಜಿಲ್ಲಾ ಜೆಡಿಎಸ್ ನೂತನ ಅಧ್ಯಕ್ಷರನ್ನಾಗಿ ಜಾವಗಲ್ ಜಿಲ್ಲಾ ಪಂಚಾಯ್ತಿ  ಮಾಜಿ ಉಪಾಧ್ಯಕ್ಷ ಎನ್.ಬಿ. ರಾಜಶೇಖರ್ ಅವರನ್ನು ನೇಮಕ ಮಾಡಿರುವುದಕ್ಕೆ ಹೋಬಳಿಯ ಜೆ.ಡಿ.ಎಸ್. ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
ತಾಪಂ  ಮಾಜಿ ಸದಸ್ಯ ಜೆ.ಕೆ. ಸಿದ್ದೇಗೌಡ, ಜೆಡಿಎಸ್ ಮುಖಂಡರಾದ ಜೆ.ಎಸ್.ಲಕ್ಷ್ಮೀ ನಾರಾಯಣ, ಸನಾವುಲ್ಲಾ ಸುದ್ಧಿಗಾರರೊಂದಿಗೆ ಮಾತನಾಡಿ ರಾಜಶೇಖರರವರನ್ನು ನೇಮಕ ಮಾಡಿರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಚಿವ ಹೆಚ್.ಡಿ. ರೇವಣ್ಣರವರನ್ನು ಅಭಿನಂದಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು.
ಜೂಜುಕೋರರ ಸೆರೆ
ಜಾವಗಲ್: ಹೋಬಳಿ ಬಂದೂರು ಗ್ರಾಮದ ರಾಜಣ್ಣ ಎಂಬವರ ತೋಟದಲ್ಲಿ ಅಂದರ್ಬಾಹರ್ಜೂಜಾಟವಾಡುತ್ತಿದ್ದ ಬಂದೂರು ಗ್ರಾಮದ ಮನು, ಸೋಮಶೇಖರ್, ಬೀರೇಗೌಡ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಜಾವಗಲ್ ಪೊಲೀಸ್ ಠಾಣಾಧಿಕಾರಿ ಸಿ.ಪಿ. ನವೀನ್ ಮತ್ತು ಸಿಬ್ಬಂದಿಗಳಾದ ಮಂಜೇಗೌಡ, ಪುರುಷೋತ್ತಮ್, ಆದಿತ್ಯ, ಮಂಜುನಾಥ್, ಕುಮಾರ್ ಅವರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಪಣಕ್ಕೆ ಇಟ್ಟಿದ್ದ ರು. 1160 ನಗದು, 3 ಮೊಬೈಲ್, 2 ಬೈಕ್ ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಲಾಗಿದೆ.
ಇಂದು ನಿರ್ವಾಣ ದಿನ
ಹಾಸನ: ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‌ರವರ 57ನೇ ಪರಿ ನಿರ್ವಾಣ ದಿನದ ಪ್ರಯುಕ್ತ ಡಿ. 6ರಂದು ಬೆಳಿಗ್ಗೆ 10 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇರುವ ಡಾ.ಬಿ.ಆರ್. ಅಂಬೇಡ್ಕರ್‌ರವರ ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮ ಜಿಲ್ಲಾಡಳಿತದಿಂದ ನಡೆಯಲಿದೆ. ಕಾರ್ಯಕ್ರಮಕ್ಕೆ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರು ಮತ್ತು ಸಂಘ ಸಂಸ್ಥೆಯ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕೋರಿದ್ದಾರೆ.
ಲೋಕಾಯುಕ್ತ ಎಸ್ಪಿ ಪ್ರವಾಸ
ಹಾಸನ: ಕರ್ನಾಟಕ ಲೋಕಾಯುಕ್ತ ಎಸ್ಪಿ ಡಾ.ಸಿ.ಬಿ. ವೇದಮೂರ್ತಿ, ಉಪಾಧೀಕ್ಷಕರು ಮತ್ತು ನಿರೀಕ್ಷಕರು ಡಿ. 6 ರಂದು ಬೆಳಿಗ್ಗೆ 9.30 ರಿಂದ ಮ. 2 ರವರೆಗೆ ಸಕಲೇಶಪುರ ತಾಲ್ಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವರು.ನಂತರ ಮಧ್ನಹ್ನ 3 ರಿಂದ 5.30 ರವರೆಗೆ ಆಲೂರು ತಾಲ್ಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ. ಭೇಟಿ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳುನ್ನು ಸಲ್ಲಿಸಬಹುದು ಎಂದು ಕೋರಲಾಗಿದೆ.

'ಸ್ವಸ್ತ ಸಮಾಜದತ್ತ ಗಮನ ಹರಿಸಬೇಕು'
ಜಾವಗಲ್: ಏಡ್ಸ್‌ನಿಂದ ದೂರವಿದ್ದು ಆರೋಗ್ಯವಂತ ರಾಷ್ಟ್ರನಿರ್ಮಾಣ ಮಾಡುವತ್ತ ಯುವಜನತೆ ಗಮನಹರಿಸಬೇಕೆಂದು ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ವಸಂತ್‌ರಾಜ್ ಅರಸ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕ್ಲಬ್‌ನ ಕಾರ್ಯದರ್ಶಿ ಉಪನ್ಯಾಸಕ ಎಚ್.ಕೆ. ಉದಯ್ ಕುಮಾರ್ ಮಾತನಾಡಿ, ಏಡ್ಸ್ ರೋಗದ ಬಗ್ಗೆ ಮಾಹಿತಿ ನೀಡಿದರು.
ಜಾವಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜಪ್ಪ, ಉಪನ್ಯಾಸಕರಾದ ಎನ್. ಉದಯ್ ಕುಮಾರ್, ಲತಾ, ನಾಗರಾಜು, ಮಂಜುನಾಥ್, ಮಾತನಾಡಿದರು. ಶಿವಲಿಂಗಯ್ಯ, ಶ್ರೀನಿವಾಸ್, ಸುಕನ್ಯ, ನಾಗೇಶ್, ಸ್ವಪ್ನ, ತಬಸಂಆರಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.