ಹಾಸನ

ಅರಸೀಕೆರೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ

Published On :

ಅರಸೀಕೆರೆ: ಪಟ್ಟಣದ ಸಂತಮೇರಿ ಪ್ರೌಢಶಾಲಾ ಆವರಣದಲ್ಲಿ ಬ್ಲಾಕ್ ಹಂತದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.  ದಿನಾಚರಣೆಯನ್ನು ತಾಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್.ಟ. ಶಿವಮೂರ್ತಿ ಮಾತನಾಡಿ, ವಿಕಲಚೇತನರು ಕೂಡ ಇತರರಂತೆ ಜೀವನ ಸಾಗಿಸಲು ವಿಫುಲ ಅವಕಾಶಗಳಿವೆ.  ಅಂಗವೈಕಲ್ಯವನ್ನು ನ್ಯೂನ್ಯತೆ ಎಂದು ಭಾವಿಸದೆ ಉತ್ಸಾಹದಿಂದ ಜೀವನ ನಿರ್ವಹಣೆಗೆ ಮುಂದಾಗಬೇಕು. ಜಿಲ್ಲೆಯ ಗಿರೀಶಶ್ವಿಕಲಚೇತನರಾಗಿದ್ದು ಕೂಡ ಪ್ಯಾರಾ ಒಲಂಪಿಕ್ಸ್‌ನಲ್ಲಿ ದೇಶಕ್ಕೆ ಕೀರ್ತಿ ತಂದುಕೊಟ್ಟಿರುವುದನ್ನು ಯಾರೂ ಮರೆಯುವಂತಿಲ್ಲ ಎಂದು ಪ್ರಶಂಸಿಸಿದರು. ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್, ಬಿ.ಇ.ಓ ನಟರಾಜ್ ಮಾತನಾಡಿದರು. ಶಾಲೆಯ ಸಿಬ್ಬಂದಿ ಹಾಜರಿದ್ದರು. ಬಿಆರ್‌ಪಿ ಪಂಚಾಕ್ಷರಿ ಸ್ವಾಗತಿಸಿ ಲಕ್ಷ್ಮಿದೇವಮ್ಮ ನಿರೂಪಿಸಿ, ಶ್ಯಾನೆಗೆರೆ ಶೇಖರ್ ವಂದಿಸಿದರು. ಇದೇ ವೇಳೆ ಆಟೋಟಗಳಲ್ಲಿ ವಿಜೇತರಾದ ವಿಕಲಚೇತನ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.