ಮಸೀದಿ ಪುನರ್ ನಿರ್ಮಾಣಕ್ಕೆ ಆಗ್ರಹ
ಕ.ಪ್ರ.ವಾರ್ತೆ ಹಾಸನ ಡಿ. 6
ಬಾಬ್ರಿ ಮಸಿದಿಯನ್ನು ಪುನರ್ ನಿರ್ಮಿಸಬೇಕು, ಧ್ವಂಸ ಆರೋಪಿಗಳನ್ನು ಶಿಕ್ಷಿಸಿ ಮತ್ತು ಲಿಬರ್ಹಾನ್ ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಖಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಉದ್ದೇಶ ಸಾಬೀತು: ಡಿ.6,1992 ರಂದು ಹಿಂದುತ್ವ ಫ್ಯಾಸಿಸ್ಟ್ ವ್ಯಕ್ತಿಗಳು ಅಯೋಧ್ಯೆಯಲ್ಲಿ 463 ವರ್ಷಹಳೆಯದಾದ ಮುಸ್ಲಿಮರ ಆರಾಧಾನಲಯ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದರು. ಇದರೊಂದಿಗೆ ಭಾರತವು ಎತ್ತಿಹಿಡಿದಿದ್ದ ಆದರ್ಶ ಮತ್ತು ಮೌಲ್ಯಗಳೂ ಧ್ವಂಸಗೊಂಡಿದ್ದವು. 420 ವರ್ಷಗಳಿಗಿಂತಲೂ ಅಧಿಕ ಕಾಲ ಮುಸ್ಲಿಮರಿಂದ ಆರಾಧನೆಗೆ ಬಳಸಲ್ಪಡುತ್ತಿದ್ದ ಮಸೀದಿಯನ್ನು ಧ್ವಂಸಗೊಳಿಸುವ ಮೂಲಕ ಶತಕಗಳಿಂದ ಭಾರತಕ್ಕೆ ಅಂಟಿದ್ದ ಕಲೆಯನ್ನು ತಾವು ಅಳಿಸಿದ್ದಾಗಿ ಸಂಘ ಪರಿವಾರ ಪ್ರತಿಪಾದಿಸಿತು. ಅದರರ್ಥ ಮುಸ್ಲಿಮರು ಗಣರಾಜ್ಯದ ಕಲೆ ಎಂದಾಗುತ್ತದೆ. ಹಾಗಾಗಿ ಇದು ಕೇವಲ ಮಸೀದಿಯೊಂದರ ಧ್ವಂಸವಲ್ಲ. ಮುಸ್ಲಿಂ ಸಮುದಾಯಕ್ಕೆ ಪಾಠಮೊಂದನ್ನು ಕಲಿಸಬೇಕೆಂಬ ಅಜೆಂಡಾದ ಭಾಗವಾಗಿತ್ತು. ಧ್ವಂಸದ ಬಳಿಕ ರಾಷ್ಟ್ರಾದ್ಯಂತ ಮುಸ್ಲಿಮರ ವಿರುದ್ಧ ನಡೆದ ದಾಳಿ, ಸಾವು ಮತ್ತು ಹಾನಿಗಳು ಹಿಂದುತ್ವ ಸಂಘಟನೆಗಳ ರಾಜಕೀಯ ಉದ್ದೇಶವನ್ನು ತೋರಿಸುತ್ತದೆ ಎಂದರು.
ಕ್ರಮ ಕೈಗೊಳ್ಳಬೇಕು: ಮಸೀದಿ ಧ್ವಂಸದ ಕುರಿತು ತನಿಖೆ ನಡೆಸಿದ ನ್ಯಾ. ಲಿಬರ್ಹಾನ್ ಆಯೋಗದ ವರದಿಯಲ್ಲಿ ಆರೋಪಿಸಲಾಗಿರುವ ಎಲ್ಲಾ ಅಪರಾಧಿಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐನ ಜಿಲ್ಲಾಧ್ಯಕ್ಷ ಅಮೀರ್ ಜಾನ್, ಪಿಎಫ್ಐ ಜಿಲ್ಲಾಧ್ಯಕ್ಷ ಫೈರೋಜ್ ಪಾಷ, ಕಾರ್ಯದರ್ಶಿ ಸೂಫಿ ಇಬ್ರಾಹಿಂ, ಹಸನ್ ಮುಬಾರಕ್, ದಸಪ ಅಧ್ಯಕ್ಷ ಹೆತ್ತೂರ್ ನಾಗರಾಜ್, ಟಿಪ್ಪುಸುಲ್ತಾನ್ ಸಂಘದ ಅಧ್ಯಕ್ಷ ಮುಬಾಷೀರ್ ಅಹಮದ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

