ರಾಷ್ಟ್ರ ಮಟ್ಟದ ವಿಜ್ಞಾನ ಸಮಾವೇಶಕ್ಕೆ ನಿತೀಶ್ ಆಯ್ಕೆ
ಅರಸೀಕೆರೆ: ಮಧ್ಯಪ್ರದೇಶದ ಭೂಪಾಲ್ನಲ್ಲಿ ಡಿ.27ರಂದು ನಡೆಯಲಿರುವ ಅಖಿಲ ಭಾರತ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಅರಸೀಕೆರೆ ಆದಿಚುಂಚನಗಿರಿ ಆಂಗ್ಲ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಕೆ.ಆರ್.ನಿತೀಶ್ ಆಯ್ಕೆಯಾಗಿದ್ದಾನೆ ಎಂದು ರಾಜ್ಯ ವಿಜ್ಞಾನ ಪರಿಷತ್ನ ಪುಸ್ತಕ ಪ್ರಕಟಣಾ ಸಮಿತಿ ಅಧ್ಯಕ್ಷ ಎಚ್.ಆರ್.ಸ್ವಾಮಿ ತಿಳಿಸಿದರು.
ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ನವದೆಹಲಿಯ ಎನ್ಸಿಎಸ್ಟಿಸಿ ನೆಟ್ವರ್ಕ್ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನಡೆದ 21ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಹಾಸನ ಜಿಲ್ಲೆಯನ್ನು ಪ್ರತಿನಿಧಿಸಿದ್ದ. ನಿತೀಶ್ ಉಪನ್ಯಾಸಕ ಅರುಣ್ಕುಮಾರ್ ಮತ್ತು ಶುಭ ಅವರ ಮಾರ್ಗದರ್ಶನದಲ್ಲಿ ಗಜ್ಠಡ್ಝ್ಛಿಛಟ ಛ್ಢ್ಝಡ ಢ್ಝಿಟಿಜ ಡಿಜ್ಠಛ್ಝಿಟಿಜ ಎಂಬ ವಿಷಯದ ಮೇಲೆ ವಿಮರ್ಶಾತ್ಮಕ ಅವಲೋಕನ, ವೈಜ್ಞಾನಿಕ ಚಿಂತನೆ, ಹಾಗೂ ಕೌಶಲ್ಯ ಪೂರ್ಣವಾಗಿ ಯೋಜನಾ ವರದಿ ಸಿದ್ಧಪಡಿಸಿ ಮಂಡಿಸಿದ್ದು, ರಾಷ್ಟ್ರ ಮಟ್ಟದಲ್ಲಿ ನಡೆಯುವ ಸಮಾವೇಶಕ್ಕೆ ಆಯ್ಕೆಯಾಗಿದ್ದಾನೆ ಎಂದು ತಿಳಿಸಿದರು.
ಕೂಡಲಸಂಗಮದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಾಸನ ಜಿಲ್ಲಾ ಸಂಯೋಜಕ ಸಂತೋಷ್ಕುಮಾರ್, ಶಿಕ್ಷಕಿ ರೇಣುಕಾ, ವಿದ್ಯಾರ್ಥಿಗಳಾದ ಸೈಯದ್ ಇಬ್ರಾಹಿಂ, ಕೃಷ್ಣಮೂರ್ತಿ, ದಿವ್ಯ, ವೈಶಾಲಿ, ಗೌತಮ್, ನವಾಜ್ ಇದ್ದರು. ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಭೂತಾನ್, ಅಂಡಮಾನ್, ನಿಕೋಬಾರ್, ನೇಪಾಳ, ಮಾಲ್ಡೀವ್ಸ್ ಮುಂತಾದೆಡೆಯಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

