ಹಾಸನ

ಕಳಪೆ ಚರಂಡಿ ಕಾಮಗಾರಿ; ಆಕ್ರೋಶ

Published On :

ರಾಮನಾಥಪುರ: ಸಮೀಪದ ಕಟ್ಟೇಪುರದಲ್ಲಿರುವ ಅಂಬೇಡ್ಕರ್ ಭವನದ ಬಳಿ ನಡೆಯುತ್ತಿರುವ ಕಳಪೆ ಚರಂಡಿ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸುವಂತೆ ಅಂಬೇಡ್ಕರ್ ನಗರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.  ಅಂಬೇಡ್ಕರ್ ನಗರ ನಿವಾಸಿ ರವಿ ಮಾತನಾಡಿ, ಈ ಹಿಂದೆ ಅಂಬೇಡ್ಕರ್ ಭವನದ ಬಳಿ ಕಾಂಕ್ರೀಟ್ ಚರಂಡಿ ನಿರ್ಮಿಸಿದ್ದು, ಇದು ಚೆನ್ನಾಗಿತ್ತು. ಆದರೂ ಇಲ್ಲಿನ ಗ್ರಾಪಂ ವತಿಯಿಂದ ಚರಂಡಿ ಕಾಮಗಾರಿ ನಿರ್ವಹಿಸುತ್ತಿರುವ ಸ್ಥಳೀಯ ಪಂಚಾಯ್ತಿ ಸದಸ್ಯ ಜಗದೀಶ್ ಎಂಬಾತ ಹೊಸದಾಗಿ ಕಾಮಗಾರಿ ಮಾಡುವ ದುರುದ್ದೇಶದಿಂದ ಹಳೆಯದನ್ನು ಕಿತ್ತು ಹಾಕಿ ಈ ಜಾಗದಲ್ಲಿ ಕಾಂಕ್ರೀಟ್ನಿಂದ ಚರಂಡಿ ನಿರ್ಮಿಸದೆ ಸೈಜ್ಕಲ್ಲು ಬಳಸಿ ಕಳಪೆ ಗುಣಮಟ್ಟದ ಸಿಮೆಂಟ್ ಬಳಸಿ ಚರಂಡಿ ನಿರ್ಮಿಸಲಾಗುತ್ತಿದೆ. ಈ ವಿಚಾರವಾಗಿ ಎಷ್ಟು ಹೇಳಿದರೂ ಕೇಳದೆ ಉಡಾಫೆಯಿಂದ ವರ್ತಿಸುತ್ತಾ ತನಗಿಷ್ಟ ಬಂದ ರೀತಿ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ಇಲ್ಲಿನ ನಾಗರಿಕರಿಗೆ ಅಸಮಾಧಾನ ಉಂಟಾಗಿದೆ ಎಂದು ತಿಳಿಸಿದರು.  ಯಜಮಾನ್ ಸ್ವಾಮಿ, ಶಂಕರ್, ಹರೀಶ್, ಗೋಪಾಲ, ವೆಂಕಟೇಶ, ಅರುಣ, ಅನು ಇದ್ದರು.
ಯುವಕ ನಾಪತ್ತೆ
ಆಲೂರು: ತಾಲೂಕಿನ ಕೆ.ಹೊಸಕೋಟೆ ಹೋಬಳಿ ಮಗ್ಗೆ ಗ್ರಾಮದ ಅನೂಪ್ ಮಂತೆರೊ(26) ನಾಪತ್ತೆಯಾಗಿದ್ದಾರೆ. ನ.29ರಂದು ತನ್ನ ಬೈಕಿನಲ್ಲಿ ಮನೆಯಿಂದ ಹೊರ ಹೋದವನು ಈವರೆಗೂ ಮನೆಗೆ ಬಾರದ ಕಾರಣ ಅವರ ದೊಡ್ಡಪ್ಪ ಪೆರ್ದು ಮೆಂತೆರೊ ಅವರು ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಆಲೂರು ಠಾಣೆಗೆ ತಿಳಿಸಬೇಕೆಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.