ಹಾಸನ

ವೈಭವದ ಹುಲಿಕಲ್ಲು ವೀರಭದ್ರೇಶ್ವರ ರಥೋತ್ಸವ

Published On :

ಹಳೆಬೀಡು: ಹಳೆಬೀಡು ಹೋಬಳಿ ಕೇಂದ್ರದಿಂದ ಸರಿ ಸುಮಾರು 9 ಕಿ.ಮೀ ಅಂತರದಲ್ಲಿ ಇರುವ ಶ್ರೀಹುಲಿಕಲ್ಲು ವೀರಭದ್ರೇಶ್ವರ ಸ್ವಾಮಿ ಕಡೆ ಕಾರ್ತಿಕೋತ್ಸವ ಪ್ರಯುಕ್ತ ದಿವ್ಯ ರಥೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ರಾತ್ರಿಯಿಡಿ ನಾನಾ ಉತ್ಸವ ದೀಪ, ಆರತಿ ಹಾಗೂ ಬೆಳಗ್ಗೆ ಗಂಗಾ ಪೂಜೆಯಿಂದ ಆರಂಭವಾಗಿ ಕೆಂಡೋತ್ಸವ ನಡೆಯುತ್ತದೆ. ಈ ಕೆಂಡೋತ್ಸದಲ್ಲಿ ಭಾಗಿಯಾಗಲು ಸುತ್ತಲ 36 ಗ್ರಾಮದ ಭಕ್ತರು ಮಡಿಯಿಂದ ಬೆಟ್ಟ ಹತ್ತಿ ವೀರಭದ್ರಶ್ವರ ಸ್ವಾಮಿ ಕೆಂಡದ ಮೇಲೆ ಹೋದ ನಂತರ ಭಕ್ತರು ತೆರಳುವ ಪದ್ಧತಿ ಇದೆ.
ನಂತರ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ದಿವ್ಯ ರಥೋತ್ಸವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ದೇವಾಲಯ ಸುತ್ತುವರಿದು ದಿವ್ಯ ರಥ ತನ್ನ ಮೂಲ ಸ್ಥಾನಕ್ಕೆ ತೆರಳಿದಾಗ ಭಕ್ತ ವೃಂದ ಬಾಳೆ ಹಣ್ಣು ಎಸೆದು ತಮ್ಮ ಹರಕೆ ಸಲ್ಲಿಸಿದರು. ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಕೆಂಡೋತ್ಸವಕ್ಕೆ ಚಾಲನೆ ನೀಡಿದ ದಾವಣಗೆರೆ ಜಿಲ್ಲಾ ಹರಿಹರ ತಾಲೂಕು ನಂದಿಗುಡಿ ಮಠದ ಶ್ರೀಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಸನಾತನ ಧರ್ಮದಲ್ಲಿ ಅಚರಣೆಗೆ ಬಂದ ಇಂತಹ ಉತ್ಸವ ಹಬ್ಬ ಹರಿದಿನಗಳು ನಂಬಿಕೆಯ ಮೇಲೆ ಇದ್ದರೂ ವೈಜ್ಞಾನಿಕ ಮನೋಭಾವನೆ ಹೊಂದಿವೆ. ಜನರು ವರ್ಷ ಪೂರ್ತಿ ಕೆಲಸ ಕಾರ್ಯ ಮಾಡಿ ದಣಿದ ಮನಸ್ಸಿಗೆ ಜಾತ್ರೆಗಳು ಉಲ್ಲಾಸ ನೀಡುತ್ತವೆ ಎಂದರು.
ದೇವಾಲಯದ ಖಜಾಂಚಿ ಶಿವಗಂಗಾ ಗ್ರಾನೈಟ್ ಮಾಲಿಕ ರಾಜಶೇಖರ್, ರುದ್ರಪ್ಪ ಸಾಣೇನಹಳ್ಳಿ ಇತರರು ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.