ಹಾಸನ

ಸಮಾನತೆಗೆ ಎಚ್ಐವಿ ಸೋಂಕಿತರು ಹೊರತಲ್ಲ: ನ್ಯಾ. ಮಹೇಶ್ಬಾಬು

Published On :

ಆಲೂರು: ಸಮಾನತೆ ಎಂಬ ಸಂವಿಧಾನದ ಆಶಯ ಎಲ್ಲರಿಗೂ ಅನ್ವಯಿಸಲಿದ್ದು ಅದರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದು ನ್ಯಾಯಾಧೀಶ ಎಂ.ಮಹೇಶ್ಬಾಬು ಹೇಳಿದರು.
ಕಣತೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಮತ್ತು ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಏಡ್ಸ್ ಬಾಧಿತರಿಗೆ ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಡಬೇಕು. ಅಂಗವಿಕಲರ ಪ್ರತಿಭೆ ಹೊರಬರಲು ಅವರಿಗೆ ಆತ್ಮವಿಶ್ವಾಸ ತುಂಬಬೇಕು ಎಂದರು.
ವಕೀಲ ಎಚ್.ಡಿ.ಮಧು ಮಾತನಾಡಿ, ಏಡ್ಸ್ ಬಾಧಿತರು ಕೂಡ ಸಾಮಾನ್ಯರಂತೆ ಹಕ್ಕುಳ್ಳವರಾಗಿದ್ದು ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಹೋರಾಡಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಜಗದೀಶ್ ಮಾತನಾಡಿ, ನ್ಯಾಂಯಾಂಗವೊಂದೇ ಪ್ರಸ್ತುತನಂಬಿಕೆ ಉಳಿಸಿಕೊಂಡಿದ್ದು, ಶಾಸಕಾಂಗ, ಕಾರ್ಯಾಂಗಕ್ಕಿಂತ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಮಹೇಂದ್ರ, ವಕೀಲರಾದ ಎಂ.ಎಸ್.ಮಹೇಶ್, ಕೆ.ಎನ್.ನಾಗರಾಜು, ಪ್ರೇಮಕುಮಾರ್, ಸಿ.ಪಿ.ಉಮೇಶ್ ಉಪನ್ಯಾಸಕರಾದ ಸತೀಶ್ಕುಮಾರ್, ಜೀವನ್ಪ್ರಸಾದ್, ಶ್ರೀನಿವಾಸ್ ಇದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎನ್ಎಚ್ಪಿಎಸ್ ಶಾಲಾ ವಿದ್ಯಾರ್ಥಿಗಳು ಟ್ಯಾಬ್ಲೊಗಳ ಸಹಿತ ಅರಿವು ಜಾಥಾ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.