ಹಾಸನ

ಮಸೀದಿ ನೆಲಸಮ ದಿನ: ವಿಜಯೋತ್ಸವ

Published On :

ಸಕಲೇಶಪುರ: ಪಟ್ಟಣದ ಹಳೇ ಬಸ್‌ನಿಲ್ದಾಣದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಅಯೋಧ್ಯೆ ಬಾಬ್ರಿ ಕಟ್ಟಡ ಒಡೆದು ಹಾಕಿ 21ವರ್ಷ ಸಂದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಇದೇ ವೇಳೆ ತಾಲೂಕು ಸಂಘ ಪರಿವಾರದ ಮುಖಂಡ ರಘು ಮಾತನಾಡಿ, ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿದ್ದ ಬಾಬರಿ ಕಟ್ಟಡವನ್ನು 1992ರ ಡಿ. 6 ರಂದು ನೆಲಸಮ ಮಾಡಿದೆವು. ಇಂದಿಗೆ ಆ ಕಟ್ಟಡವನ್ನು ಒಡೆದು ಸುಮಾರು 20 ವರ್ಷಗಳಾದವು. ಆದರೆ ಕೇವಲ ನಾವು ಆ ಕಟ್ಟಡವನ್ನು ಒಡೆದು ಹಾಕಿದ್ದಕ್ಕೆ ಸಂತೋಷ ಪಡುತ್ತಿದ್ದೇವೆ. ನಮಗೆ ಇಂದಿಗೂ ಆ ಜಾಗದಲ್ಲಿ ಶ್ರೀರಾಮ ಮಂದಿರ ಸಾಧ್ಯವಾಗಿಲ್ಲ.
ಶೀಘ್ರದಲ್ಲೇ ರಾಮಮಂದಿರ ಕಟ್ಟಲು ಸಂಕಲ್ಪ ತೊಡೋಣ ಎಂದು ಆಶಿಸಿದರು. ಬಜರಂಗ ದಳ ಜಿಲ್ಲಾ ಸಂಚಾಲಕ ವಿಜಯಕುಮಾರ್, ಬಜರಂಗದಳ ತಾಲೂಕು ಸಂಚಾಲಕ ಧರ್ಮೇಶ್,  ಬಜರಂಗದಳ ವಿದ್ಯಾರ್ಥಿ ಪ್ರಮುಖ್ ಕಾರ್ತಿಕ್, ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷ ದುಷ್ಯಂತ್, ಸಂಘಟನೆಯ ಪ್ರಮುಖರಾದ ರಾಜಣ್ಣ, ಹರೀಶ, ಪರಮೇಶ್, ಶಿವಪ್ರಸಾದ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.