900 ಕ್ವಿಂಟಾಲ್ ಮೆಕ್ಕೆಜೋಳ ಖರೀದಿ
ಕ.ಪ್ರ.ವಾರ್ತೆ , ಬೇಲೂರು , ಡಿ. 8
ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರದಲ್ಲಿ ಆರಂಭಿಸಿರುವ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜೋಳ ಕಳೆದ 6 ದಿನದಲ್ಲಿ 900 ಕ್ವಿಂಟಾಲ್ಗೂ ಹೆಚ್ಚು ಮೆಕ್ಕೆ ಜೋಳ ಬಂದಿದೆ.
ಖರೀದಿ ಕೇಂದ್ರ ಆರಂಭವಾದ 6 ದಿನದಲ್ಲಿ ಒಟ್ಟು 18 ರೈತರು 914 ಕ್ವಿಂಟಾಲ್ ಜೋಳ ಮಾರಾಟ ಮಾಡಿದ್ದು, ವಹಿವಾಟು ನಡೆಸಿದ್ದಾರೆ. ಜೋಳದ ತೇವಾಂಶ ಕಂಡು ಹಿಡಿಯಲು ಮಾಯ್ಟರ್ ಯಂತ್ರ ಬಳಸಲಾಗುತ್ತಿದ್ದು. ಶೇ.14 ಕ್ಕಿಂತ ಹೆಚ್ಚು ತೇವಾಂಶ ಇದ್ದರೆ ಅಂತಹ ಜೋಳವನ್ನು ತಿರಸ್ಕರಿಸಲಾಗುತ್ತದೆ. ಜಿಲ್ಲೆಯಲ್ಲೆ ಅರಕಲಗೂಡು ಬಿಟ್ಟರೆ ಬೇಲೂರಿನ ಎಪಿಎಂಸಿಯಲ್ಲಿರುವ ಜೋಳ ಖರೀದಿ ಕೇಂದ್ರದಲ್ಲಿ ಹೆಚ್ಚು ಜೋಳ ಬರುತ್ತಿದೆ.
ಎಲೆಕ್ಟ್ರಾನಿಕ್ ಯಂತ್ರದಲ್ಲಿ ತೂಕ: ರೈತರು ತಾವು ಬೆಳೆದ ಜೋಳವನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ಖರೀದಿ ಕೇಂದ್ರಕ್ಕೆ ಬರುವಾಗ ಪಾಣಿ, ಸರ್ವೆ ನಂಬರ್ ಹಾಗೂ ಜೋಳ ಬೆಳೆದಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯಿಂದ ಗುರುತಿನ ಪತ್ರವನ್ನು ಕಡ್ಡಾಯವಾಗಿ ತರಬೇಕು.
ರೈತರು ತರುವ ಜೋಳದ ಗುಣಮಟ್ಟವನ್ನು ನೋಡಲು ವಿಶೇಷ ಸಿಬ್ಬಂದಿ ನೇಮಕ ಮಾಡಲಾಗಿದ್ದು ಅವರು ಪರಶೀಲಿಸಿ ಖಾತ್ರಿ ಪಡಿಸಿದ ನಂತರ ಜೋಳ ಕೊಳ್ಳಲಾಗುತ್ತದೆ.
ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹ: ಜೋಳವನ್ನು ಸರ್ಕಾರ 1310 ರು. ಬೆಂಬಲ ಬೆಲೆಯಲ್ಲಿ ಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಆದರೆ ರೈತರು ಕಷ್ಟಪಟ್ಟು ಸಾಲಸೋಲ ಮಾಡಿ ಪ್ರಕೃತಿಯ ವಿಕೋಪದ ನಡುವೆ ಬೆಳೆದ ಜೋಳಕ್ಕೆ ಕನಿಷ್ಟ 1500 ರು. ಬೆಂಬಲ ಬೆಲೆಯನ್ನು ಸರ್ಕಾರ ನೀಡಿದ್ದರೆ ಇನ್ನೂ ಹೆಚ್ಚಿನ ಉಪಯೋಗವಾಗುತ್ತಿತ್ತು ಎಂದು ರೈತ ಸಂಘದ ಗೌರವಾಧ್ಯಕ್ಷ ಸ್ವಾಮಿಗೌಡ ಹೇಳುತ್ತಾರೆ.
ಹಮಾಲಿಗಳಿಗೆ ಖುಷಿ: ಜೋಳ ಖರೀದಿ ಕೇಂದ್ರ ತೆರೆದಿರುವ ಹಿನ್ನಲೆಯಲ್ಲಿ ಹಮಾಲಿಗಳಿಗೆ ಇನ್ನು 2 ರಿಂದ 3 ತಿಂಗಳು ಮಾರುಕಟ್ಟೆಯಲ್ಲೇ ಕೆಲಸ ಸಿಗುವುದರಿಂದ ಖುಷಿಯಾಗಿದ್ದಾದ್ದಾರೆ. ರೈತರು ಎಪಿಎಂಸಿ ಪ್ರಾಂಗಣಕ್ಕೆ ಬಂದು ಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವದರಿಂದ ಹಮಾಲಿಗಳಿಗೆ ಕಟ್ಟೆಯಲ್ಲೇ ಮೂಟೆಯನ್ನು ಇಳಿಸುವ ಏರಿಸುವ ಕೆಲಸ ಸಿಕ್ಕಿದೆ. ಇಲ್ಲವಾದರೆ ಲಾರಿಯಲ್ಲಿ ಹಳ್ಳಿಗಳಿಗೆ ವರ್ತಕರೊಂದಿಗೆ ಬೆಳಗಿನಿಂದ ತಡರಾತ್ರಿವರೆಗೆ ಸುತ್ತಬೇಕಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

