ಹಾಸನ

ಪತ್ನಿಗೆ ಕಿಡ್ನಿ ವೈಫಲ್ಯ; ಕೈ ಬಿಟ್ಟ ಪತಿರಾಯ

Published On :

ಕ.ಪ್ರ.ವಾರ್ತೆ ,  ಸಕಲೇಶಪುರ ,  ಡಿ.9
ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿ ತನ್ನ ಪತ್ನಿಗೆ ಕಿಡ್ನಿ ವೈಫಲ್ಯ ಉರ್ಟಾಗಿದೆ ಎಂಬುದು ತಿಳಿಯುತ್ತಿದ್ದಂತೆ ಆಕೆಯನ್ನು ತವರಿಗೆ ತಂದು ಬಿಟ್ಟುಹೋದವ ಮತ್ತೆ ತಿರುಗಿ ನೋಡದ ಅಮಾನುಷ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಕ್ಯಾಮನಹಳ್ಳಿ ಕಾಫಿ ಎಸ್ಟೇಟ್ ನಿವೃತ್ತ ವ್ಯವಸ್ಥಾಪಕ ಕಾಳಪ್ಪ ಎಂಬುವರ ಪುತ್ರಿ ಕೃಪಾ (25) ಪತಿಯಿಂದ  ದೂರವಾಗಿರುವ ಗೃಹಿಣಿ.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಕುಶಾಲನಗರದ
ಅಜಿತ್ ಮುತ್ತಪ್ಪ ಎಂಬ ಸಹಪಾಠಿ ಕೃಪಾಳನ್ನು ಪ್ರೀತಿಸಿ ಮೂರು ವರ್ಷ ಹಿಂದೆ ಪೋಷಕರನ್ನು ಒಪ್ಪಿಸಿ ಮದುವೆಯಾಗಿದ್ದ.
ಆದರೆ, ಮದುವೆಯಾಗಿ 2 ವರ್ಷಕ್ಕೆ ಪತ್ನಿಗೆ ಕಿಡ್ನಿ ವೈಫಲ್ಯ ಕಂಡು ಬಂದಿದ್ದರಿಂದಾಗಿ ವಿಶ್ರಾಂತಿ ಪಡೆಯುವಂತೆ ಸೂಚಿಸಿ ತವರು ಮನೆಗೆ ಬಿಟ್ಟು ಹೋಗಿ ಇಲ್ಲಿಗೆ ಆರು ತಿಂಗಳು ಕಳೆದರೂ ಹೆಂಡತಿ ಮುಖ ನೋಡಲು ಬಂದಿಲ್ಲ. ಇದರಿಂದಾಗಿ ನೊಂದಿರುವ ಗೃಹಿಣಿ ಗಂಡನೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನ ನಡೆಸಿದರೂ ಸಾಧ್ಯವಾಗುತ್ತಿಲ್ಲ.
ಕುಶಾಲನಗರ ಸೈನಿಕರ ಶಾಲೆಯಲ್ಲಿ ವಾರ್ಡನ್ ಆಗಿರುವ ಅಜಿತ್ ಮುತ್ತಪ್ಪ ಕುಟುಂಬ ಆರ್ಥಿಕವಾಗಿ ಸದೃಢವಾಗಿದ್ದರೂ, ತನ್ನ ಪತ್ನಿ ನೆರವಿಗೆ ಸ್ಪಂದಿಸುತ್ತಿಲ್ಲ ದೂರವಾಣಿ ಮುಖಾಂತರ ಅಜಿತ್ ಮುತ್ತಪ್ಪ ಅವರ ಪೋಷಕರನ್ನು ಸಂಪರ್ಕಿಸಿದರೆ, ಕಟುವಾಗಿ ಮಾತನಾಡುತ್ತಾರೆ ಎಂಬ ಆಳಲು ತೊಡಿಕೊಳ್ಳುವ ಕೃಪಾ ಕಳೆದ ಆರು ತಿಂಗಳಿನಿಂದ ತನ್ನ ತಂದೆಯೆ ಸಾಲ ಮಾಡಿ ಪ್ರತಿ ತಿಂಗಳಿಗೆ 40 ಸಾವಿರದಂತೆ ಡಯಲೀಸಿಸ್‌ಗಾಗಿ ಖರ್ಚು ಮಾಡುತ್ತಿದ್ದು, ಇದಕ್ಕಾಗಿ ಇದುವರೆಗೆ ಸುಮಾರು ರು. 4 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದು ಸಾಲವೂ ದೊರೆಯದಾಗಿದೆ.
ಚಿಕಿತ್ಸೆಗಾಗಿ ಮುಂದೇನು ಎಂಬ ಚಿಂತೆ ಕಾಡಲಾರಂಭಿಸಿದೆ ಎಂಬ ಅಸಹಾಯಕತೆ ತೋಡಿಕೊಳ್ಳುವ ಇವರು, ನನಗೆ ಬದುಕಬೇಕೆಂಬ ಹಂಬಲವಿದೆ ದಯವಿಟ್ಟು ಕಿಡ್ನಿ ಬದಲಾವಣೆಗಾಗಿ ರು. 5 ಲಕ್ಷ  ಅವಶ್ಯಕತೆ ಇದ್ದು ಉದಾರಿಗಳು ಆರ್ಥಿಕ ನೆರವು ನೀಡುವಂತೆ ಕೈಮುಗಿದು ಕೇಳಿಕೊಂಡಿದ್ದಾರೆ.
ಸಹಾಯ ಮಾಡಲಿಚ್ಛಿಸುವ ದಾನಿಗಳು ಕೃಪಾ ಅವರ ಕಾಪೋರೇಷನ್ ಬ್ಯಾಂಕ್ ಅಕೌಂಟ್ 2614101010432 ಐಎಫ್‌ಎಸ್. ಕೋಡ್. ಸಿಎನ್‌ಆರ್‌ಬಿ 0002614 ಇಲ್ಲಿಗೆ ತಮ್ಮ ನೆರವು ನೀಡುವಂತೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.