ಹಾಸನ

ಮಳೆ ಭೀತಿ: ರಾಗಿ ಕಟಾವಿನಲ್ಲಿ ನಿರತರಾಗಿರುವ ಮಣ್ಣಿನ ಮಕ್ಕಳು

Published On :

ಕ.ಪ್ರ.ವಾರ್ತೆ ,  ಹಾರನಹಳ್ಳಿ ,  ಡಿ. 10
ಅರಸೀಕೆರೆ ತಾಲೂಕಿನ ಸುಮಾರು 29470 ವಿಸ್ತೀರ್ಣ ಹೆಕ್ಟೇರ್ ಭೂಮಿ ಹೊಲಗದ್ದೆಯಲ್ಲಿ ರಾಗಿ ಬೆಳೆದಿದ್ದ ರೈತರು ಈಗ ಕೊಯ್ದಿದ್ದು ಕಂತೆ ಕಟ್ಟಿ ರಾಗಿ ಗುಪ್ಪೆ ಹಾಕುತ್ತಿದ್ದಾರೆ. ತುಂತುರು ಮಳೆ ಬರುವ ನಿರೀಕ್ಷೆಯಿಂದ ರಾಗಿ ಕಟಾವಿಗೆ ರೈತರು ಹೆಚ್ಚಿನ ಗಮನ ಹರಿಸಿದ್ದಾರೆ.
ಕೃಷಿ ಇಲಾಖೆ ಮಾಹಿತಿ ಪ್ರಕಾರ 20000 ಹೆಕ್ಟರ್ ರಾಗಿ ಬೆಳೆ ಗುರಿ ಇಟ್ಟಿದ್ದರು. ಈ ಬಾರಿ 9470 ಹೆಕ್ಟರ್‌ನಲ್ಲಿ ಹೆಚ್ಚಿನ ರಾಗಿ ಬೆಳೆಯ ಅಭಾವದಿಂದ ರಾಗಿ ಬೆಳೆಯೂ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ರಾಗಿ ಬೆಳೆ ಆದಾಯಕ್ಕಿಂತ ಖರ್ಚು ಹೆಚ್ಚು ಹಾಗಾಗೀ ರಾಗಿ ಬೆಳೆ ಬೆಳೆಯುವುದನ್ನು ಕೆಲವು ರೈತರು ನಿಲ್ಲಿಸಿದ್ದಾರೆ.
ರೈತ ನಂಜುಂಡಪ್ಪ ಈ ಹಿಂದೆ 1 ಎಕರೆ 10 ಕ್ವಿಂಟಾಲ್ ರಾಗಿ ಬೆಳೆಯುವುದಕ್ಕೆ ಇತ್ತೀಚಿನ ಮಳೆ ಅಭಾವದಿಂದ ಎಕೆರೆಗೆ 3 ರಿಂದ 5 ಚೀಲ ಬೆಳೆಯುವುದೇ ಕಷ್ಟಕರವಾಗಿದೆ. ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕನಕಚೇನಹಳ್ಳಿ ಪ್ರಸನ್ನಕುಮಾರ್ ಹೇಳುವಂತೆ, 1 ಅಕಡಿ ರಾಗಿ ಕೊಯ್ಯಲು ರು. 350  ವೆಚ್ಚವಾಗುತ್ತದೆ. 1 ಎಕರೆ ರಾಗಿ ಬೆಳೆ ಕೊಯ್ಯಲು 2000-2500 ರು ವೆಚ್ಚ ತಗಲುತ್ತದೆ. ರಾಗಿ ಬೆಳೆ ಬೆಳೆದು ಬರುವ ಆದಾಯ ಕೂಲಿಗೆ ಕೊಡುವ ಹಣಕ್ಕೆ ಸಮವಾಗುತ್ತದೆ. ದನಕರುಗಳ ಮೇವಿಗೋಸ್ಕರ ರಾಗಿ ಬೆಳೆಯುತ್ತಿದ್ದೇವೆ ಹೊರತು ಈಗಿನ ಗೊಬ್ಬರ ಕೂಲಿಗೆ ಅಂಗಡಿಯಿಂದ ರಾಗಿ ಕೊಂಡು ತರುವುದೇ ಒಳ್ಳೆಯದು. ಇತ್ತೀಚಿನ ಮಾರುಕಟ್ಟೆಯಲ್ಲಿ 1 ಕ್ವಿಂಟಾಲ್ ಕೆಂಪು ರಾಗಿ ರು. 2000 ಇದೆ. ಮಾರುಕಟ್ಟೆಯಲ್ಲಿ ಎಲ್ಲಾ ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಹೋಗಿವೆ. ಆದರೆ, ರಾಗಿ ದರ ಮಾತ್ರ ಹೆಚ್ಚಾಗಿಲ್ಲ ಎನ್ನುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.