ಹಾಸನ

ಇಂದು ಅರಳೀಕಟ್ಟೆ ಪ್ರಾರಂಭೋತ್ಸವ

Published On :

ಹಾಸನ: ಕುವೆಂಪುನಗರದ ಜನತಾ ಬಜಾರ್ ಬಳಿ ಜೀರ್ಣೋದ್ಧಾರಗೊಂಡಿರುವ  ಅರಳೀಕಟ್ಟೆಯ ಪ್ರಾರಂಭೋತ್ಸವ ಮತ್ತು  ನವಗ್ರಹ ಮೂರ್ತಿಗಳ ಪ್ರತಿಷ್ಠಾಪನಾ ಸಮಾರಂಭವನ್ನು ಡಿ. 14 ಮತ್ತು 15ರಂದು ಆಯೋಜಿಸಲಾಗಿದೆ.
ಡಿ. 14ರಂದು ಬೆಳಗ್ಗೆ 9ರಿಂದ ಮಂಗಳವಾದ್ಯದೊಂದಿಗೆ ನೂತನ ನವಗ್ರಹ ಮೂರ್ತಿಗಳನ್ನು ಅರಳೀಕಟ್ಟೆಗೆ ತರಲಾಗುವುದು. ಸುವಾಸಿನಿಯರಿಂದ ಗಂಗಾಪೂಜೆ ಮತ್ತು ಗೋಪೂಜೆ ನಡೆಯಲಿದೆ. ಬೆಳಗ್ಗೆ 10ರಿಂದ ಶ್ರೀಗಣಪತಿ ಪೂಜೆ ಪುಣ್ಯಾ ದೇವನಾಂದಿ, ಕಂಕಣಧಾರಣೆ ಹೋಮ, ಪೂರ್ಣಾಹಿತ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ 7ರಿಂದ ನವಗ್ರಹ ಮೂರ್ತಿಗಳ ಅಧಿವಾಸ, ವಾಸ್ತು ಹೋಮಗಳು, ಅಷ್ಟಬಂಧ ಪ್ರತಿಷ್ಠೆ ಬಲಿಪ್ರದಾನ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.
ಡಿ.15 ರಂದು ಬೆಳಗ್ಗೆ 7ಕ್ಕೆ ಹೋಮ, ನವಗ್ರಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಅಶ್ವತ್ಥ ವೃಕ್ಷದ ವಿವಾಹ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಧಕರಿಗೆ ಗೌರವಾರ್ಪಣೆ,  ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 1.30ಕ್ಕೆ ಪ್ರಸಾದ ಭೋಜನ ನಡೆಯಲಿದೆ. ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಡಿ ತಾಲೂಕು ಕಸಾಪ ವತಿಯಿಂದ ಜಾನಪದ, ಭಕ್ತಿ ಗೀತೆ ಗಾಯನ ಏರ್ಪಡಿಸಲಾಗಿದೆ. ಡಿ.15ರ ಬೆಳಗ್ಗೆ 9ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಏರ್ಪಡಿಸಿದ್ದು, ರು. 100 ಪೂಡಾ ಕಾಣಿಕೆ ಪಾವತಿಸಬೇಕು. ಆಸಕ್ತರು  ಸಮಿತಿಯ ಸದಸ್ಯರಿಂದ ಕೂಪನ್ ಪಡೆದು ಸಹಕರಿಸಬೇಕಾಗಿ ಅರಳೀಕಟ್ಟೆ ಜೀರ್ಣೋದ್ಧಾರ  ಸೇವಾ ಸಮಿತಿ ಮನವಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.