ಹಾಸನ

ಜನಮನ ಗೆದ್ದ ಚೌರಿಕೊಪ್ಪಲು ಉತ್ಸವ

Published On :

ಕನ್ನಡಪ್ರಭ ವಾರ್ತೆ , ಹಾಸನ , ಡಿ. 12
ಗ್ರಾಮೀಣ ಸೊಗಡನ್ನೇ ಹೊದ್ದು ಮಲಗಿರುವ ತಾಲೂಕಿನ ಚೌರಿಕೊಪ್ಪಲು ಗ್ರಾಮದಲ್ಲಿ ಇತ್ತೀಚೆಗೆ  ಜಾನಪದ ಕಲಾಸಂಗಮ ಮೇಳೈಸಿತು. ಹಳ್ಳಿಗಾಡಿನ ಹಲವು ಬಗೆಯ ಕಲೆಗಳ ಪ್ರದರ್ಶನ ನೆರೆದಿದ್ದ ನೂರಾರು ಜನರ ಮನಗೆದ್ದಿತು.
ಕನ್ನಡ ಮತ್ತು  ಸಂಸ್ಕತಿ ಇಲಾಖೆ, ಬೆಂಗಳೂರು, ಹೊಯ್ಸಳ  ಜಾನಪದ ಕಲಾ ಸಂಸ್ಥೆ, ಸಿ.ಎಂ.ಎಸ್.ಎ.ಎಸ್. ಸಂಸ್ಥೆ, ಸ್ತ್ರೀಶಕ್ತಿ ಸ್ವಸಹಾಯ ಸಂಘ, ಪುರುಷ ಸ್ವಸಹಾಯ ಸಂಘಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗ್ರಾಮೀಣ ಜಾನಪದ  ಉತ್ಸವ ಚೌರಿಕೊಪ್ಪಲು ಗ್ರಾಮದಲ್ಲಿ ಹೊಸ ವಾತಾವರಣ ಸೃಷ್ಟಿಸಿತು.
ಜಾನಪದ ನೃತ್ಯ, ಕಂಸಾಳೆ, ವೀರಗಾಸೆ, ಸುಗ್ಗಿ ಕುಣಿತ, ಜಾನಪದ ಗೀತೆ, ಕೋಲಾಟ ಮತ್ತಿತರ ಕಲಾತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದವು.
ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರೋತ್ಸಾಹದ ಅಗತ್ಯವಿದೆ: ಅಧ್ಯಕ್ಷತೆ ವಹಿಸಿದ್ದ ಸಿಎಂಎಸ್‌ಎಸ್ ಸಂಸ್ಥೆಯ ಫಾದರ್ ಫಿಲಿಕ್ ಥಾಮಸ್ ರೊಜಾರಿಯೋ ಮಾತನಾಡಿ, ದೇಶದ ಮೂಲ ಸಂಸ್ಕೃತಿ ಜಾನಪದವನ್ನು ಉಳಿಸಿ ಬೆಳಸಬೇಕಿದೆ. ತಾಯಿ ಹಾಗೂ ಪರಿಸರದಿಂದ ಬಳುವಳಿಯಾಗಿ ಬಂದ ಜಾನಪದ ಕಲೆ, ಜಾನಪದ ಗೀತೆಗಳು, ಕೋಲಾಟ, ಕಂಸಾಳೆ ಪದ, ವೀರಗಾಸೆ, ಸೋಬಾನೆ ಪದ ಗೀತೆಗಳು ಗಾಯನದ ಮೂಲಕ ಎಲ್ಲರ ಗಮನ ಸೆಳೆದಿವೆ. ಈ ಕಲೆಗೆ ಪ್ರೋತ್ಸಾಹದ ಅಗತ್ಯವಿದೆ ಎಂದರು.
ಆತಂಕವಿದೆ: ಹಿರಿಯ ತಲೆಮಾರಿನ ಕೊಡುಗೆ ನಮ್ಮ ಜನಪದ. ಅದು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಹಾಗೂ ಯಾಂತ್ರಿಕ ಬದುಕಿನ ಭರದಲ್ಲಿ ಕಣ್ಮರೆಯಾಗುವ ಆಂತಕ ಎದುರಾಗಿದೆ ಎಂದು ಫಾದರ್ ತಿಳಿಸಿದರು.
ಅಪ್ನಾ ದೇಶ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಕೆ.ಎ.ಎಸ್. ಅಧಿಕಾರಿ ರಾಜಾ ನಾಯಕ, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ ಮೂರ್ತಿ, ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್‌ನ ಬಸವರಾಜ್, ವಾರ್ತಾಧಿಕಾರಿ ವಿನೋದ್ ಚಂದ್ರ, ಪ್ರಾದೇಶಿಕ ಸಾರಿಗೆ ಇಲಾಖೆಯ ಪಾಷಾ, ಅನುಗನಾಳು ಕೃಷ್ಣಮೂರ್ತಿ, ಸುರೇಶ್ ಗುರೂಜಿ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಕಲಾವಿದರ ತಂಡ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ   ಆರ್.ಪಿ. ವೆಂಕಟೇಶಮೂರ್ತಿ ಅವರನ್ನು ಸನ್ಮಾನಿಸಿದರು. ಗ್ಯಾರಂಟಿ ರಾಮಣ್ಣ ಕಾರ್ಯಕ್ರಮದ ಮೊದಲು ಪ್ರಾರ್ಥನೆ ನಡೆಸಿಕೊಟ್ಟರು. ಬಿ.ಟಿ.ಮಾನವ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ, ಕೊನೆಯಲ್ಲಿ ಹೊಯ್ಸಳ ಜಾನಪದ ಕಲಾ ಸಂಸ್ಥೆ ಕಾರ್ಯದರ್ಶಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.