ಜಿಲ್ಲಾದ್ಯಂತ ಹನುಮ ಜಯಂತಿ ಸಡಗರ
ಹಾಸನ: ಜಿಲ್ಲೆ ಮತ್ತು ನಗರಾದ್ಯಂತ ನಾನಾ ಹನುಮನ ದೇವಾಲಯಗಳಲ್ಲಿ ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಗಳಿಂದ ಶನಿವಾರ ಆಚರಿಸಲಾಯಿತು.
ಚನ್ನರಾಯಪಟ್ಟಣ, ಹೊಳೆನರಸೀಪುರ, ಬೇಲೂರು, ಸಕಲೇಶಪುರ, ಆಲೂರು ಮತ್ತು ಅರಸೀಕೆಹೆ ತಾಲೂಕುಗಳಲ್ಲಿ ಹನುಮ ಜಯಂತಿ ಆಚರಿಸಲಾಯಿತು. ಹಾಸನದ ಶ್ರೀಮಾರುತಿ ವಿಘ್ನೇಶ್ವರ, ಸುಬ್ರಮಣ್ಯ ಸೇವಾ ಸಮಿತಿಯಿಂದ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನಗರದ ರೇಲ್ವೆ ನಿಲ್ದಾಣದ ಬಳಿ ಇರುವ ಶ್ರೀಮಾರುತಿ ವಿಘ್ನೇಶ್ವರ, ಸುಬ್ರಮಣ್ಯ ಸೇವಾ ಸಮಿತಿಯಿಂದ ಹನುಮ ಜಯಂತಿ ಆಚರಿಸಲಾಯಿತು. ಹನುಮ ಜಯಂತಿ ಅಂಗವಾಗಿ ಬೆಳಗ್ಗಿನಿಂದ ವಿಶೇಷ ಪೂಜೆ, ಹೂವಿನ ಅಲಂಕಾರ ಹಾಗೂ ಹೋಮ ಮಹಾಮಂಗಳಾರತಿ ನೆರವೇರಿಸಲಾಯಿತು.
ಆಂಜನೇಯಸ್ವಾಮಿಗೆ ವಿಶೇಷ ಪೂಜೆ
ಹಾಸನ: ನಗರದ ಹೃದಯ ಭಾಗದಲ್ಲಿ ಇರುವ ನೀರುಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮಜಯಂತಿಯ ಅಂಗವಾಗಿ ವಿಶೇಷ ಅಲಂಕಾರ ಮಾಡಿ ಅಚರಿಸಲಾಯಿತು. ಹನುಮನಿಗೆ ವಿಶೇಷ ಪೂವಿನ ಅಲಂಕಾರ, ಬೆಣ್ಣೆ ಅಲಂಕಾರ ಸೇರಿದಂತೆ ಇತರ ಅಲಂಕಾರಗಳನ್ನು ನೆರವೇರಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಚ್.ಡಿ. ರೇವಣ್ಣನವರು ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಗಿತು.
ಚನ್ನರಾಯ ಪಟ್ಟಣದಲ್ಲಿ...
ಚನ್ನರಾಯಪಟ್ಟಣ: ತಾಲೂಕಿನ ವಿವಿದೆಡೆ ಶ್ರೀ ಹನುಮ ಜಯಂತಿಯನ್ನು ಅದ್ಧೂರಿ ಹಾಗೂ ಸಡಗರದಿಂದ ಆಚರಣೆ ಮಾಡಿ ಹನುಮನಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪಟ್ಟಣದ ವಿನಾಯಕ ಕಾರು ಚಾಲಕರು ಮತ್ತು ಮಾಲಿಕರ ಸಂಘದ ವತಿಯಿಂದ ಪಟ್ಟಣದ 40 ಅಡಿ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಮೂರ್ತಿಯನ್ನು ವಿಶೇಷ ವಾಹನದಲ್ಲಿ ಅಲಂಕರಿಸಿ ಪಟ್ಟಣದಲ್ಲಿ ಮೆರವಣಿಗೆ ಮಾಡಿದರು. ಶುಕ್ರವಾರದಿಂದಲೇ 40 ಅಡಿ ಆಂಜನೇಯ ಸ್ವಾಮಿಗೆ ವಿವಿದ ಪೂಜೆ, ಹೋಮ ಹಾಗೂ ಅನ್ನದಾನ ನೆರವೇರಿಸಿದ ಭಕ್ತರ ತಂಡ ಮೆರವಣಿಗೆ ನಡೆಸಿದರು.
ವೈಭವದ ಹನುಮ ಜಯಂತಿ
ಆಲೂರು: ತಾಲ್ಲೂಕಿನ ತಾಳೂರು ಗ್ರಾಮದಲ್ಲಿರುವ ಪ್ರಸಿದ್ದ ಹನುಮಂತ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯನ್ನು ಶ್ರದ್ದಾ, ಭಕ್ತಿ ಹಾಗೂ ವಿಜೃಂಭಣೆಯಿಂದ ಶನಿವಾರ ಆಚರಿಸಲಾಯಿತು.
ದೇವಾಲಯದಲ್ಲಿ ಪುರಾತನ ಹನುಮಂತ ಸ್ವಾಮಿ ಮೂರ್ತಿಗೆ ವಿಶೇಷವಾಗಿ ಬೆಣ್ಣೆಯ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದ ಹೋಮ, ಹವನಾದಿಗಳು ನಾನಾ ಅಭಿಷೇಕ, ಅರ್ಚನೆಗಳು ನಡೆದವು. ದಿನವಿಡೀ ಭಕ್ತಾದಿಗಳು ಬಿಸಿಲನ್ನು ಲೆಕ್ಕಿಸದೇ ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ನಂತರ ಪ್ರಸಾದ ವಿನಿಯೋಗ ನಡೆಯಿತು.
ಇಲ್ಲಿರುವ ಚೋಳರ ಕಾಲದಲ್ಲಿ ಸ್ಥಾಪಿಸಲಾಗಿರುವ ಮೂರ್ತಿಯ ವಿಶೇಷತೆ ಏನೆಂದರೇ ಮೂರ್ತಿಯ ಎರಡೂ ಕಣ್ಣುಗಳು ಕಾಣುತ್ತಿರುವುದಾಗಿದೆ.
ಅಲ್ಲದೇ, 9 ಅಡಿಗೂ ಹೆಚ್ಚು ಎತ್ತರವಿದೆ. ಬೇರೆ ಯಾವುದೇ ದೇವಾಲಯದಲ್ಲೂ ಈ ರೀತಿ ದೇವರ ಎರಡು ಕಣ್ಣುಗಳು ಕಾಣುವಂತಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿಲ್ಲ. ಮದ್ಯಾಹ್ನ 12.30ರ ನಂತರ ದೇವಸ್ಥಾನದ ಆವರಣದಲ್ಲಿರುವ ಚಂದ್ರಮೌಳೇಶ್ವರ ದೇವಾಲಯದಲ್ಲಿ ನಂದಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

