ಸೂಕ್ತ ಸ್ಥಳ ನೀಡಿದರೆ ಔಟ್ಪೋಸ್ಟ್
ಬೇಲೂರು: ಇಲ್ಲಿನ ಚನ್ನಕೇಶವ ದೇವಾಲಯ ಭದ್ರತೆ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯಿಂದ ಸೂಕ್ತ ಸ್ಥಳ ನೀಡಿದರೆ ಪೊಲೀಸ್ ಔಟ್ಪೋಸ್ಟ್ ತೆರೆಯಲಾಗುವುದು ಎಂದು ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್ ಹೇಳಿದ್ದಾರೆ.
ನಿಯೋಜನೆ: ಇಲ್ಲಿನ ಪೊಲೀಸ್ ಠಾಣೆಗೆ ಪರಿಶೀಲನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ದೇವಾಲಯ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ ಸೂಕ್ತ ಸ್ಥಳ ನೀಡಿದರೆ ಔಟ್ ಪೋಸ್ಟ್ ಆರಂಭಿಸಲಾಗುವುದು ಮತ್ತು ಅತಿ ಮಲೆನಾಡು ಪ್ರದೇಶವಾದ ಗೆಂಡೇಹಳ್ಳಿಯಲ್ಲಿ ಗ್ರಾಮ ಪಂಚಾಯ್ತಿಯಿಂದ ಸ್ಥಳ ದೊರೆತರೆ ಅಲ್ಲಿಯೂ ಔಟ್ ಪೋಸ್ಟ್ ಆರಂಭಿಸಲಾಗುವುದು. ಗೆಂಡೇಹಳ್ಳಿಗೆ ಎಂಟು ದಿನದ ನಂತರ ತಾತ್ಕಾಲಿಕವಾಗಿ ಒಬ್ಬ ಸಹಾಯಕ ಸಬ್ ಇನ್ಸ್ಪೆಕ್ಟರ್ ಹಾಗೂ ಒಬ್ಬ ಪೇದೆಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಬೇಲೂರು ಪಟ್ಟಣದ ಮುಖ್ಯ ರಸ್ತೆಯು ಕಿರಿದಾಗಿದ್ದು, ವಾಹನಗಳ ಹೆಚ್ಚಳದಿಂದಾಗಿ ಅಪಘಾತಕ್ಕೆ ಅವಕಾಶವಾಗುತ್ತಿದೆ. ಈಗಾಗಲೆ ಒಬ್ಬ ಎಎಸ್ಐ ಮತ್ತು ಒಬ್ಬ ಪೇದೆಯನ್ನ ನೇಮಿಸಿದ್ದರೂ ಹೆಚ್ಚುವರಿಯಾಗಿ 5 ಜನ ಪೇದೆಯನ್ನು ನಿಯೋಜಿಸಲಾಗುವುದು. ಜೊತೆಗೆ ಅಗತ್ಯ ಸಂದರ್ಭದಲ್ಲಿ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು. ಬೇಲೂರಿನಲ್ಲಿ ಅಪಘಾತ ಮತ್ತು ಹೊಡೆದಾಟದ ಪ್ರಕರಣಗಳು ಹೆಚ್ಚಿವೆ. ಇದನ್ನು ಬಿಟ್ಟರೆ ಹೆಚ್ಚಿನ ಆತಂಕಕಾರಿ ಪರಿಸ್ಥಿತಿ ತಾಲೂಕಿನಲ್ಲಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

