ಹಾಸನ

ಜಂಬೂರು ಗ್ರಾಪಂ ಅಧ್ಯಕ್ಷರಾಗಿ ನಂಜಪ್ಪ

Published On :

ಚನ್ನರಾಯಪಟ್ಟಣ: ನುಗ್ಗೇಹಳ್ಳಿ ಹೋಬಳಿ ಜಂಬೂರು ಗ್ರಾಪಂಗೆ ನೂತನ ಅಧ್ಯಕ್ಷರಾಗಿ ನಂಜಪ್ಪ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಂಜಪ್ಪ ಆಯ್ಕೆಯಾಗಿದ್ದಾರೆ.  ಲಿಂಗರಾಜು ಅತ್ತಿಹಳ್ಳಿ ಅವರ ರಾಜಿನಾಮೆಯಿಂದ ಸ್ಥಾನ ತೆರವಾಗಿತ್ತು. ಜಿಪಂ ಸದಸ್ಯ ಎಂ.ಎ.ರಂಗಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಲಿಂಗರಾಜು, ಕೆ.ಮಹಲಿಂಗ, ಗ್ರಾಪಂ ಸದಸ್ಯರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕೇಂದ್ರ
ಹಾಸನ: ಮುಕ್ತ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕುಸಿದಿರುವುದರಿಂದ ಸರ್ಕಾರದ ಆದೇಶದಂತೆ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ 1800  ದರದಲ್ಲಿ ಖರೀದಿಸಲು ಈ ಕೆಳ ಕಂಡ ಸ್ಥಳದಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ಈಗಾಗಲೇ ತೆರೆಯಲಾಗಿದೆ. ಹಾಸನ ಎಪಿಎಂಸಿ ಯಾರ್ಡ್, ಹೊಳೆನರಸೀಪುರ ಎಪಿಎಂಸಿ ಯಾರ್ಡ್, ಚನ್ನರಾಯಪಟ್ಟಣ ಎಪಿಎಂಸಿ ಯಾರ್ಡ್, ಅರಸೀಕೆರೆ ತಾಲೂಕಿನಲ್ಲಿ ಗಂಡಸಿ ಎಪಿಎಂಸಿ ಯಾರ್ಡ್ ಮತ್ತು ಜಾವಗಲ್ ಎಪಿಎಂಸಿ ಯಾರ್ಡ್‌ಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ಖರೀದಿ ಕೇಂದ್ರಗಳಿಗೆ ರಾಗಿ ಮಾರಾಟ ಮಾಡಲು ತಾವು ರೈತರು ಎಂಬುದಕ್ಕೆ ಸಂಬಂಧಿಸಿದ ತಹಸೀಲ್ದಾರರಿಂದ ದೃಢೀಕೃತ ಫಹಣಿಯನ್ನು ಹಾಜರುಪಡಿಸಲು ತಿಳಿಸಿದೆ. ವಿಚಾರಣೆಗಳಿದ್ದಲ್ಲಿ ಸಂಬಂಧಿಸಿದ ತಹಸೀಲ್ದಾರರನ್ನು ಸಂಪರ್ಕಿಸಲು ಡಿಸಿ ಕೋರಿದ್ದಾರೆ.
ನ್ಯಾಯಬೆಲೆ ಅಂಗಡಿ ಪ್ರಾಧಿಕಾರ ನವೀಕರಣ
ಹಾಸನ: ನ್ಯಾಯಬೆಲೆ ಅಂಗಡಿ ಪ್ರಾಧಿಕಾರಗಳ ಅವಧಿಯು ಡಿ.31ಕ್ಕೆ ಕೊನೆಗೊಳ್ಳಲಿದೆ. ಈ ಪ್ರಾಧಿಕಾರಗಳನ್ನು ಮುಂದಿನ 3 ವರ್ಷದ ಅವಧಿಗೆ ನವೀಕರಿಸಬೇಕಾಗಿರುವುದರಿಂದ ನಿಗದಿತ ಶುಲ್ಕ 125 ಪಾವತಿಸಿ ಪ್ರಾಧಿಕಾರಗಳನ್ನು ನವೀಕರಿಸಿಕೊಳ್ಳಲು ನ್ಯಾಯಬೆಲೆ ಅಂಗಡಿ ಮಾಲೀಕರು/ ಕಾರ್ಯದರ್ಶಿಗಳಿಗೆ ಈ ಮೂಲಕ ತಿಳಿಯಪಡಿಸಿದೆ. ಡಿ.31ರೊಳಗೆ ನವೀಕರಿಸದ ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ರದ್ದುಪಡಿಸಲು ಕ್ರಮ ವಹಿಸಲಾಗುವುದು.
ಆರ್‌ಎಸ್‌ಎಸ್ ನೂತನ ಕಾರ್ಯಾಲಯ ಉದ್ಘಾಟನೆ
ಅರಸೀಕೆರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂತನ ಕಾರ್ಯಾಲಯವನ್ನು ಭಾನುವಾರ ಹಿರಿಯ ಸ್ವಯಂ ಸೇವಕ ದಂಪತಿ ವಿಶೇಷ ಹೋಮ ಹಾಗೂ ಪೂಜಾ ಕಾರ್ಯ ನೆರವೇರಿಸುವ ಮೂಲಕ ಉದ್ಘಾಟಿಸಿದರು.
ತಾಲೂಕಿನಲ್ಲಿ ಕಳೆದ 40 ವರ್ಷಗಳಿಂದ ಆಸ್ತಿತ್ವದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸ್ವಂತ ಕಟ್ಟಡದ ಕಾರ್ಯಾಲಯ ಇರಲಿಲ್ಲ.  ಇದೀಗ ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿರುವ ಕೇಂದ್ರ ಅಂಚೆ ಕಚೇರಿ ಮುಂಭಾಗ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಭಾನುವಾರ ಸಂಘದ ಹಿರಿಯ ಸ್ವಯಂಸೇವಕರಾದ ತಾಲೂಕಿನ ಕರಗುಂದ ನಾಗರಾಜು, ಬೆಂಡೇಕೆರೆ ಗಂಗಾಧರ್, ಗಂಡಸಿ ರಾಜಣ್ಣ, ಪಟ್ಟಣದ ಗುರುರಾಜ ಹೆಬ್ಬಾರ್ ಮತ್ತು ಮಾದಪ್ಪ ದಂಪತಿ ನೂತನ ಕಾರ್ಯಾಲಯದಲ್ಲಿ ಗಣಪತಿ ಹೋಮ, ನವಗ್ರಹ ಹೋಮ ಮತ್ತು ಕಳಸ ಪೂಜೆ ನಡೆಸಿದರು.  ಆರ್‌ಎಸ್‌ಎಸ್‌ನ ಮೈಸೂರು ವಿಭಾಗದ ಸೇವಾ ಪ್ರಮುಖ ಕೆ.ಎನ್.ಸತ್ಯನಾರಾಯಣ್, ಜಿಲ್ಲಾ ಪ್ರಚಾರಕ ಉಮೇಶ್, ತಾಲೂಕು ಸಂಘ ಚಾಲಕ ಕೊ.ರಾ. ಶ್ರೀನಿವಾಸಮೂರ್ತಿ, ಹಿರಿಯ ಸ್ವಯಂ ಸೇವಕರಾದ ಸಿ.ರಾಮಚಂದ್ರ, ಕೆ.ಆರ್.ಶ್ರೀಧರ್, ರಾಮಣ್ಣ, ನಾಗರಾಜ ಹೆಬ್ಬಾರ್, ಪ್ರಕಾಶ್ ತಗ್ಗಿನಮನಿ, ಶಿವಶಂಕರ್, ವಿಹಿಂಪ ಮುಖಂಡ ಟಿ.ವಿ ಅರುಣ್‌ಕುಮಾರ್, ಪುರುಷೋತ್ತಮ, ಎ.ವಿ.ಚಂದ್ರಶೇಖರ್, ಫಾರಸ್ ಮಲ್‌ಜೈನ್ ಇತರರು ಇದ್ದರು.
'ಸಾಂಸ್ಕೃತಿಕ ಚಟುವಟಿಕೆಯಿಂದ ರಚನಾತ್ಮಕ ಬೆಳವಣಿಗೆ'
ಬೇಲೂರು: ಯಾವುದೇ ವ್ಯಕ್ತಿಯ ಸಾಹಿತ್ಯ, ಕಲೆ, ರಾಜಕೀಯ ಹಾಗೂ ಸಾಮಾಜಿಕ ರಂಗದ ಬೆಳವಣಿಗೆಗೆ ಸಾಂಸ್ಕೃತಿಕ ಚಟುವಟಿಕೆಗಳು ಪೂರಕವಾಗಲಿದೆ ಎಂದು ಜಿಪಂ ಸದಸ್ಯೆ ಹೇಮಾವತಿ ಮಂಜುನಾಥ್ ಹೇಳಿದರು.
ಪಟ್ಟಣದ ಯುನೈಟೆಡ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಶೈಕ್ಷಣಿಕ ರಂಗಕ್ಕೆ ಸರ್ಕಾರ ಸಾವಿರಾರು ಕೋಟಿ ವೆಚ್ಚ ಮಾಡುತ್ತದೆ. ಅದರೆ ವೆಚ್ಚವಾದ ಹಣ ಸಮರ್ಪಕ ವಿನಿಯೋಗವಾಗುತ್ತಿದೆಯೇ ಎಂಬ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು. ಯುನೈಟೆಡ್ ಶಾಲಾ ಕಾರ್ಯದರ್ಶಿ ಭೋಜೇಗೌಡ ಮಾತನಾಡಿದರು.ಜಿಪಂ ಸದಸ್ಯ ಬಿ.ಡಿ.ಚಂದ್ರೇಗೌಡ, ಜಿ.ಟಿ.ಇಂದಿರಾ ಧರ್ಮಪ್ಪ, ಬಿಇಒ ವೈ.ಬಿ.ಸುಂದ್ರೇಶ್, ದೈಹಿಕ ಮುಖ್ಯಸ್ಥ ರಂಗಸ್ವಾಮಿ ಚಂದ್ರಶೇಖರ್ ಆರಾಧ್ಯ ಇತರರು ಇದ್ದರು.
ಸೆಸ್ಕ್ ನೌಕರರಿಂದ ರಾಜ್ಯೋತ್ಸವ ಆಚರಣೆ
ರಾಮನಾಥಪುರ: ಇಲ್ಲಿನ ಚಾಮುಂಡೇಶ್ವರಿ ವಿದ್ಯುತ್ ಇಲಾಖೆ ನೌಕರರು 59ನೇ ಕನ್ನಡ ರಾಜ್ಯೋತ್ಸವ ಆಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕಾರ್ಯಪಾಲಕ ಕೆ.ಪಿ.ಜಯಪ್ಪ ಅವರು ಭುವನೇಶ್ವರಿ ಚಿತ್ರಪಟಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ, ಕನ್ನಡದ ನೆಲ, ಜಲ, ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬರಿ ರಾಜ್ಯೋತ್ಸವ ಅಚರಿಸಿದರೆ ಸಾಲದು, ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.ನಿವೃತ್ತಿ ಹೊಂದಿದ ಸಹಾಯಕ ಎಂಜಿನಿಯರ್ ಮಂಜೇಗೌಡ ಮತ್ತು ನೌಕರರಾದ ತಮ್ಮಯ್ಯ, ಜಗದೀಶ್, ಬೋರೆಗೌಡ ಹಾಗೂ ಚನ್ನರಾಯಪಟ್ಟಣಕ್ಕೆ ವರ್ಗಗೊಂಡಿರುವ ಕಿರಿಯ ಎಂಜಿನಿಯರ್ ಶಂಕರ್, ಚಾಮರಾಜನಗರಕ್ಕೆ ವರ್ಗಾವಣೆಗೊಂಡಿದ್ದ ಮತ್ತೊಬ್ಬ ಕಿರಿಯ ಎಂಜಿನಿಯರ್ ಮೆಹಬೂಬ್ ಪೀರ್ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಿರಿಯ ಎಂಜಿನಿಯರ್ ಮಹೇಶ, ಈರಣ್ಣ, ಮಂಜುನಾಥ್, ಕೆ.ಜೆ.ರಾಜು, ಸುಂದರ ಮಣಿ, ಆಂಜನೇಯ, ನೌಕರ ಸಂಘದ ಅಧ್ಯಕ್ಷ ಪರಮೇಶ್, ಕಾರ್ಯದರ್ಸಿ ಚನ್ನಬಸವ ಇದ್ದರು.
ರೇವಣ್ಣ ಹುಟ್ಟುಹಬ್ಬ; ಇಂದು ಪೂಜೆ
ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ 57ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಗಾಂಧಿ ಬಜಾರ್‌ನ ನೀರುವಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಡಿ.17ರಂದು ಬೆಳಗ್ಗೆ 9ಕ್ಕೆ ಜೆಡಿಎಸ್ ಕಾರ್ಯಕರ್ತರಿಂದ  ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಮುಖಂಡರು, ಜಿಪಂ, ತಾಪಂ, ಗ್ರಾಪಂ, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ನಾನಾ ಸಂಘ ಸಂಸ್ಥೆಗಳ ಸದಸ್ಯರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸುವಂತೆ ರಾಜ್ಯ ಯುವ ಜೆಡಿಎಸ್ ಕಾರ್ಯದರ್ಶಿ ಹೊಂಗೆರೆ ರಘು ಮನವಿ ಮಾಡಿದ್ದಾರೆ. ಮಧ್ಯಾಹ್ನ 12ಕ್ಕೆ ಹೊಳೆನರಸೀಪುರದ ಎಚ್.ಡಿ.ರೇವಣ್ಣನವರ ಮನೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು  ಬೃಹತ್ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುವರು ಎಂದು ತಿಳಿಸಿದ್ದಾರೆ.
ಅಪ್ರೆಂಟೀಸ್ ತರಬೇತಿ; ಅರ್ಜಿ ಆಹ್ವಾನ
ಹಾಸನ: ಬೆಂಗಳೂರಿನ ಎಚ್‌ಎಎಲ್‌ನವರು ಫಿಟ್ಟರ್/ಟರ್ನರ್/ಮೆಶಿನಿಸ್ಟ್/ಎಲೆಕ್ಟ್ರಿಷಿಯನ್/ವೆಲ್ಡರ್ ಶೀಟ್ ಮೆಟಲ್ ವರ್ಕರ್/ಕಾರ್ಪೆಂಟರ್ /ಪಾಸ (ಕಿಆಖಆಆ) ವೃತ್ತಿಯಲ್ಲಿ ಶಿಶಿಕ್ಷು ತರಬೇತಿಗಾಗಿ ಎಸ್ಸೆಸ್ಸೆಲ್ಸಿಯೊಂದಿಗೆ ಐಟಿಐ ಪಾಸಾದ 18ರಿಂದ 35 ವರ್ಷ ವಯೋವುತಿಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ. ಆಸಕ್ತರು ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ಖುದ್ದು ಭೇಟಿ ಮಾಡಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಮರು ಸಲ್ಲಿಸುವಂತೆ ಕೋರಲಾಗಿದೆ. ಡಿ.26 ಕೊನೆ ದಿನ. ಹೆಚ್ಚಿನ ಮಾಹಿತಿಗೆ ಉದ್ಯೋಗಾಧಿಕಾರಿ ಜೆ.ಬಿ. ವಿಜಯಲಕ್ಷ್ಮಿ(08172-268374)  ಸಂಪರ್ಕಿಸಲು ಕೋರಲಾಗಿದೆ.
ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ
ಹಾಸನ: ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ 2012ನೇ ಸಾಲಿನಲ್ಲಿ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಿದ್ದ ಕರ್ನಾಟಕದ ಕ್ರೀಡಾಪಟುಗಳಿಗೆ 50,000  ನಗದು ಬಹುಮಾನವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲಾಗುವುದು. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ. ಅರ್ಜಿ ನಮೂನೆ, ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಸನ, ದೂರವಾಣಿ 08172-246056 ಇವರನ್ನು ಸಂಪರ್ಕಿಸಬಹುದು.2012ನೇ ವರ್ಷದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳಿಗೆ ವಿಶೇಷವಾಗಿ ಹಾಸನ ಜಿಲ್ಲೆಯ ಕ್ರೀಡಾಪಟುಗಳಿಗೆ ಚಿನ್ನದ ಪದಕ ಗೆದ್ದವರಿಗೆ ರು. 1 ಲಕ್ಷ, ಬೆಳ್ಳಿ ಪದಕ ವಿಜೇತರಿಗೆ ರು. 50,000 ಮತ್ತು ಕಂಚಿತ ಪದಕ ಗೆದ್ದವರಿಗೆ ರು. 25,000 ನಗದು ಬಹುಮಾನವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲಾಗುವುದು. ಈ ಬಗ್ಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಡಿ. 31 ಕೊನೆಯ ದಿನವಾಗಿದೆ. 2013-14ನೇ ಸಾಲಿನಲ್ಲಿ ಜ.1ರಿಂದ ಡಿ. 31ರವರೆಗೆ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಅಥವಾ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ  ಮಾಧ್ಯಮಿಕ, ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ವಾರ್ಷಿಕ ರು. 3000  ಕ್ರೀಡಾ ವಿದ್ಯಾರ್ಥಿ ವೇತನವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜ.15 ಕಡೇ ದಿನ.ಅರ್ಜಿ ನಮೂನೆ, ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಸನ, ದೂರವಾಣಿ 08172-246056 ಸಂಪರ್ಕಿಸಬಹುದು.
ಹುಲಿ ಗಣತಿ ಆರಂಭ
ಹಾಸನ: ಜಿಲ್ಲೆಯಲ್ಲೂ ಹುಲಿಗಣತಿಯನ್ನು ಪ್ರಾರಂಭಿಸಿದ್ದು, ಡಿ.23ರವರೆಗೆ ಗಣತಿ ನಡೆಯಲಿದೆ. ಸಕಲೇಶಪುರ, ಆಲೂರು ಸೇರಿದಂತೆ 70 ಬೀಟ್‌ಗಳಿದ್ದು, ಅಲ್ಲಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಹಿಂದಿನ ಗಣತಿಯ ಪ್ರಕಾರ ಸಕಲೇಶಪುರ ತಾಲೂಕಿನ ಕೆಂಪುಹೊಳೆ ವ್ಯಾಪ್ತಿಯಲ್ಲಿ 3 ಹುಲಿಗಳು ಕಾಣಿಸಿಕೊಂಡಿದ್ದವು ಎಂದರು. ಸಿಬ್ಬಂದಿ 2 ಕಿಮೀವರೆಗೆ ಸ್ಟ್ರೆಚ್‌ಲೈನ್‌ಗಳನ್ನು ಹಾಕಿಕೊಂಡು ಹುಲಿ ಗಣತಿ ನಡೆಸಲಿದ್ದಾರೆ. ಇದರ ಜೊತೆಗೆ ಇತರೆ ಪ್ರಾಣಿಗಳ ಗಣತಿಯನ್ನು ನಡೆಸಲಿದ್ದಾರೆ.
ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಹಾಸನ: ಒಂದೇ ಹೆಣ್ಣುಮಗುವಾಗಿದ್ದರೆ ಇಂದಿರಾಗಾಂಧಿ ವಿದ್ಯಾರ್ಥಿವೇತನ (ಐಟಿಜ್ಝ್ಠಛ ಎಛಟಿಝ್ಝ ಖ್ಝಟ್ಜಿಟಜ ಎ್ಝ್ಠಟ ಝ್ಝಟಜ ಝ್ಛ್ಟಟಛ್ಠಝ್ಝಠ) ನೀಡಲಾಗುವುದು. ವಿವಿ ಧನಸಹಾಯ ಆಯೋಗ, ನವದೆಹಲಿ ಇವರು ಪ್ರಥಮ ವರ್ಷದ ಎಂಎ, ಎಂಎಸ್ಸಿ, ಮತ್ತು ಎಂಕಾಂ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ತಿಂಗಳಿಗೆ 2000ದಂತೆ  ಎರಡು ವರ್ಷಗಳಿಗೆ 40,000 ವಿದ್ಯಾರ್ಥಿ ವೇತನ ನೀಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ. ಅರ್ಜಿ ಸಲ್ಲಿಸಲು ಡಿ.31 ಕೊನೆ ದಿನ. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ  ಉಪಮುಖ್ಯಸ್ಥರು, ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ ಇವರನ್ನು ಸಂಪರ್ಕಿಸಿ,  ಢಿಢಿಢಿ.್ಡ್ಜ್ಛ.ಛ್ಛ.್ಝಟಿ ಇದರಲ್ಲಿ ಮಾಹಿತಿ ಪಡೆದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ದೂ. 0821-2516844.
ಅರ್ಜಿ ಆಹ್ವಾನ
ಹಾಸನ: ಕೇಂದ್ರ ಸರ್ಕಾರವು ಸ್ತ್ರೀಶಕ್ತಿ ಪುರಸ್ಕಾರ-2013 ಪ್ರಶಸ್ತಿಗಾಗಿ ಅರ್ಹ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ದೇವಿ ಅಹಲ್ಯಾಬಾಯಿ ಹೋಲ್ಕರ್, ಕನ್ನಗಿ, ಮಾತಾ ಜೀಜಾಬಾಯಿ, ರಾಣಿ ಗೈಡಿನ್ಲ್ಯೂ ಜಿಲಿಯಾಂಗ್, ರಾಣಿ ಲಕ್ಷ್ಮೀಬಾಯಿ, ರಾಣಿ ರುದ್ರಮ್ಮದೇವಿ ಈ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ ನಿರ್ದಿಷ್ಟ ಅರ್ಜಿ ನಮೂನೆಯನ್ನು ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಸನ ಇವರಿಂದ ಪಡೆದು ಭರ್ತಿ ಮಾಡಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂ. 267218ನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.