ಅಕ್ರಮ ಸಾಮಿಲ್ ಮೇಲೆ ದಾಳಿ; ಮೂವರ ಬಂಧನ
ಹಾಸನ: ಅರಣ್ಯಾಧಿಕಾರಿಗಳು ಅಕ್ರಮ ಸಾಮಿಲ್‌ಗಳ ಮೇಲಿನ ದಾಳಿ ಮುಂದುವರೆಸಿದ್ದು, ಸೋಮವಾರ ಮತ್ತೊಂದು ಸಾಮಿಲ್ ಸೀಜ್ ಮಾಡಿ ಮೂವರನ್ನು ಬಂಧಿಸಿದ್ದಾರೆ.
ಹಾಸನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಪ್ಪುರಾವ್ ನೇತೃತ್ವದ ತಂಡ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಗ್ರೀನ್‌ವುಡ್ ಟ್ರೇಡರ್ ಮೇಲೆ ದಾಳಿ ನಡೆಸಿ ಸಾಮಿಲ್ ಹಾಗೂ ಪೀಲಿಂಗ್ ಯಂತ್ರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾಸನ ವಾಸಿ ನಶ್ವಿರ್, ಸಾಗರ್ ಪ್ರಧಾನ್ ಮತ್ತು ಅರ್ಜುನ್‌ನಾಯಕ್ ಎಂಬ ಮೂವರನ್ನು ಬಂಧಿಸಿದ್ದು, 2 ಲಕ್ಷಕ್ಕೂ ಅಧಿಕವಾದ ಸುಮಾರು 2 ಲೋಡ್‌ನಷ್ಟು ಮರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಡುಮರಗಳನ್ನು ಅಕ್ರಮವಾಗಿ ತಂದು ಇಲ್ಲಿ ಕಟ್ ಮಾಡಲಾಗುತ್ತಿತ್ತು. ಜೊತೆಗೆ ಈ ಸಾಮಿಲ್‌ಗೆ ಪರವಾನಗಿ ಇಲ್ಲ. ಇದು ವೀರಭದ್ರಾಚಾರಿ ಎಂಬವರ ಮಾಲೀಕತ್ವದಲ್ಲಿ ನಡೆಯುತ್ತಿತ್ತು ಎಂದು ಡಿಎಫ್‌ಒ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 125 ಸಾಮಿಲ್‌ಗಳಿಗೆ ಮಾತ್ರ ಪರವಾನಗಿ ನೀಡಲಾಗಿದೆ. ಇತ್ತೀಚೆಗೆ ಯಾವುದೇ ಪರವಾನಗಿ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಅಕ್ರಮವಾಗಿ 14 ಪೀಲಿಂಗ್ ಯಂತ್ರಗಳಿದ್ದು, ಅದನ್ನು ಅಕ್ರಮ ಸಾಮಿಲ್‌ಗಳಲ್ಲಿ ಬಳಸಲಾಗುತ್ತಿದೆ. ಜಿಲ್ಲೆಯಲ್ಲಿ ಅಕ್ರಮ ಸಾಮಿಲ್‌ಗಳನ್ನು ಸಂಪೂರ್ಣವಾಗಿ ಮುಚ್ಚುವ ಮೂಲಕ ಅಕ್ರಮ ಮರದಂಧೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ.
- ಅಪ್ಪುರಾವ್, ಡಿಎಫ್‌ಒ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

