ಅಧ್ಯಕ್ಷರಾಗಿ ಮುಂದುವರಿಕೆ
ಹಾಸನ: ಜಯ ಕರ್ನಾಟಕ ಸಂಘಟನೆಯ ಬೇಲೂರು ತಾಲೂಕು ಅಧ್ಯಕ್ಷರಾಗಿರುವ ಐ.ಎನ್.ಅರುಣ್ ಕುಮಾರ್ ಅವರನ್ನು ಉತ್ತಮವಾಗಿ ಜನಪರ ಕಾರ್ಯಗಳನ್ನು ಮಾಡುತ್ತಿರುವ ಕಾರಣ ಆ ಸ್ಥಾನದಲ್ಲಿ ಮುಂದುವರಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಸ್. ಉಮೇಶ್ ತಿಳಿಸಿದ್ದಾರೆ. ಬೇಲೂರು ತಾಲೂಕು ಪದಾಧಿಕಾರಿಗಳ, ಪಟ್ಟಣ ಪದಾಧಿಕಾರಿಗಳು, ಜಿಲ್ಲಾ ಉಪಾಧ್ಯಕ್ಷರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿರುವ ಹಿನ್ನೆಲೆಯಲ್ಲಿ ಸಭೆ ಕರೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೊನಲು ಬೆಳಕಿನ ವಾಲಿಬಾಲ್ ಪಂದ್ಯ
ಅರಕಲಗೂಡು: ಅರಕಲಗೂಡು ಯೂತ್ವಾಲಿಬಾಲ್ ಕ್ಲಬ್ ವತಿಯಿಂದ ಜ. 10ರಿಂದ 12ರವರೆಗೆ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ರಾಜ್ಯ ಮಟ್ಟದ ವಾಲಿಬಾಲಲ್ಪಂದ್ಯಾವಳಿ ನಡೆಯಲಿದೆ. ಹೊಸವರ್ಷ ಮತ್ತು ಸಂಕ್ರಾಂತಿ ಹಬ್ಬದ ಅಂಗವಾಗಿ ಆಯೋಜಿಸಿರುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 30 ಸಾವಿರ ರೂಗಳು,ದ್ವಿತೀಯ ಬಹುಮಾನ ರು. 20 ಸಾವಿರ, ತೃತೀಯ ಬಹುಮಾನ ರು. 15 ಸಾವಿರ ಪಾರಿತೋಷಕದ ಜೊತೆಗೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಪತ್ತೆ
ಹಾಸನ: ಚನ್ನರಾಯಪಟ್ಟಣದ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಾಪತ್ತೆಯಾದ ಬಗ್ಗೆ ತನಿಖೆ ನಡೆದಿದ್ದು, ಇವರು ಬಾಂಬೆಯ ಹೋಟೆಲ್ವೊಂದರಲ್ಲಿ ಇದ್ದು ಅವರನ್ನು ಪಟ್ಟಣಕ್ಕೆ ಕರೆತರಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಕೆ. ಪಾಂಡು ತಿಳಿಸಿದ್ದಾರೆ. ಸರ್ಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿ ಅಭ್ಯಾಸ ಮಾಡುತ್ತಿರುವ ದೇವರಾಜ್, ಅರವಿಂದ, ಪವನ್, ಅನಂತ್, ನವೀನ್ ಹಾಗೂ ನವೋದಯ ಪ್ರೌಢ ಶಾಲೆಯ ಪವನ್ ಕಳೆದ ಶುಕ್ರವಾರ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಬಾಂಬೆಗೆ ಹೋಗಿದ್ದರು. ದೇವರಾಜ್ ಎಂಬಾತ ಇವರಿಗೆ ಕೆಲಸ ಕೊಡಿಸುವುದಾಗಿ ಹೇಳಿದ್ದನು. ಇವರ ಬಳಿ ಮೂರು ಸಾವಿರ ಹಣ ಇತ್ತು, ಪೊಲೀಸರ ಬಳಿ ಈ ಬಗ್ಗೆ ದೂರು ದಾಖಲಾಗಿ ಪತ್ತೆ ಮಾಡಿದ್ದಾರೆ. ಆರು ಜನ ವಿದ್ಯಾರ್ಥಿಗಳು ಪಟ್ಟಣಕ್ಕೆ ಹಿಂದಿರುಗಿದ್ದಾರೆ.
ರಾಷ್ಟ್ರಮಟ್ಟಕ್ಕೆ ಆಯ್ಕೆ
ಅರಕಲಗೂಡು: ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂವಯಂ ಕಾಲೇಜುಗಳ ಕ್ರೀಡಾಕೂಟದಲ್ಲಿ ತಾಲೂಕಿನ ದೊಡ್ಡಮಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ಯಾಮು ಎಂ.ಕೆ. 1500 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿರುತ್ತಾನೆ.
ದುದ್ದ ರಸ್ತೆ ಕಾಮಗಾರಿ ಪ್ರಾರಂಭ
ಹಾಸನ: ಕರವೇ ಹೋರಾಟದ ಫಲವಾಗಿ ದುದ್ದ ರಸ್ತೆ ಕಾಮಗಾರಿ ಪ್ರಾರಂಭಿಸುವುದಾಗಿ ಕೆ ಆರ್ ಡಿ ಸಿ ಎಲ್ ಕಾರ್ಯಪಾಲಕ ಎಂಜಿನಿಯರ್ ಅಶೋಕ್ ಅವರು ಭರವಸೆ ನೀಡಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ತಿಳಿಸಿದ್ದಾರೆ.
ಹೋರಾಟದ ಫಲ: ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು 15 ದಿನಗಳೊಳಗೆ ದುದ್ದ- ತಿಪಟೂರು ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ. ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಗುತ್ತಿಗೆದಾರರ ಟೆಂಡರ್ ಅನ್ನು ರದ್ದುಗೊಳಿಸುವಂತೆ ಉಸ್ತುವಾರಿ ಸಚಿವರು ಆದೇಶಿಸಿದ್ದಾರೆ. ಆದ್ದರಿಂದ ಈಗ ಅಭಿಜಿತ್ ಕಂಪನಿಯವರೇ 15 ದಿನಗಳೊಳಗೆ ಕಾಮಗಾರಿ ಪ್ರಾರಂಭಿಸುವುದಾಗಿ ಒಪ್ಪಿಕೊಂಡಿದ್ದಾರೆ. ಇದಕ್ಕೆ ಕರವೇ ಹೋರಾಟದ ಫಲವಾಗಿದೆ ಎಂದರು. ಆದರೆ ಅರಸೀಕೆರೆ ಶಾಸಕರು ಇದನ್ನು ತಿಳಿದೂ ಇಷ್ಟು ವರ್ಷ ಮಾತನಾಡದ ಅವರು ಈಗ ರಸ್ತೆ ಕಾಮಗಾರಿ ನಡೆಸದಿದ್ದರೆ ಸಿಎಂ ಮನೆ ಮುಂದೆ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಶಾಸಕರು ಇದರ ಪ್ರತಿಫಲವನ್ನು ಪಡೆದುಕೊಳ್ಳಬಾರದು ಎಂದರು. ಈ ಸಂದರ್ಭದಲ್ಲಿ ಕರವೇ ನಗರಾಧ್ಯಕ್ಷ ಶಿವು, ಕುಮಾರಸ್ವಾಮಿ, ನಟರಾಜ್ ಹಾಗೂ ಇತರರು ಇದ್ದರು.
ಕಟ್ಟಡ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ
ಅರಕಲಗೂಡು: ನೂತನವಾಗಿ ತಾಲೂಕು ಕಟ್ಟಡ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ ಬಂದಿದೆ.
ಈ ಸಂಬಂಧ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು,ಗೌರವಾಧ್ಯಕ್ಷರಾಗಿ ಮರೀಗೌಡ, ಅಧ್ಯಕ್ಷರಾಗಿ ಟಿ.ಎಲ್.ಯೋಗೇಶ್,ಉಪಾಧ್ಯಕ್ಷರಾಗಿ ಚಿಕ್ಕೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಸ್. ಮಂಜು, ಸಹಕಾರ್ಯದರ್ಶಿ ಹೆಚ್.ಟಿ.ಕುಮಾರ್, ಖಜಾಂಚಿಯಾಗಿ ಮಂಜೇಗೌಡ ಆಯ್ಕೆಯಾಗಿದ್ದಾರೆ.
ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಕ:ಕೇರಿಯ ಉದ್ಘಾಟನಾ ಸಮಾರಂಭ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಶಿಕ್ಷಕರ ಭವನದ ಮುಂಭಾಗ ನಡೆಯಲಿದೆ.
ಸಮಾರಂಭದಲ್ಲಿ ಅರೆಮಾದನಹಳ್ಳಿ ಶ್ರೀಮನ್ಮೂಲ ಮಠದ ಶ್ರೀ ಶಿವ ಸುಜ್ಞಾನ ಮೂರ್ತಿ ಸ್ವಾಮಿಗಳು, ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಶಾಸಕ ಎ. ಮಂಜು ಅವರು ಅಧ್ಯಕ್ಷತೆ ವಹಿಸುವರು. ಸಮಾರಂಭದ ಉದ್ಘಾಟನೆಯನ್ನು ಕಾರ್ಮಿಕ ಅಧಿಕಾರಿ ಕೆ.ಎನ್. ಪ್ರಹ್ಲಾದ್ ನೆರವೇರಿಸುವರು.
ದೇಹದಾರ್ಢ್ಯ ಸ್ಪರ್ಧೆ
ಹಾಸನ: ಕರ್ನಾಟಕ ಅಮೇಚೂರ್ ಬಾಡಿಬಿಲ್ಡರ್ಸ್, ಬೆಂಗಳೂರಿನ ಮೆಟ್ರೋ ಫ್ಲೆಕ್ಸ್ಜಿಮ್ ಸಂಯುಕ್ತಾಶ್ರಯದಲ್ಲಿ 61ನೇ ವರ್ಷದ ರಾಜ್ಯಮಟ್ಟದ ದೇಹದಾರ್ಢ್ಯ ಚಾಂಪಿಯನ್ಷಿಪ್ ಜ. 11ಮತ್ತು 12ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಜಿಲ್ಲೆಯ ದೇಹದಾರ್ಢ್ಯ ಪಟುಗಳು ಡಿ. 30ರೊಳಗೆ ಜಿಲ್ಲಾ ಅಮೇಚೂರ್ ದೇಹದಾರ್ಢ್ಯ ಸಂಸ್ಥೆ ಕಾರ್ಯದರ್ಶಿ ಎ.ವಿ. ಮೋಹನ್ ಕುಮಾರ್ (ಮೊ. 9448868375) ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೊಸಬರಿಗೆ ಕರ್ನಾಟಕ ಉದಯ, 21ವರ್ಷ ಒಳಪಟ್ಟವರಿಗೆ ಕರ್ನಾಟಕ ಕಿಶೋರ, 25 ವರ್ಷ ಒಳಪಟ್ಟವರಿಗೆ ಕರ್ನಾಟಕ ಕುಮಾರ, ಕೈಗಾರಿಕೋದ್ಯಮಿಗಳಿಗೆ ಕರ್ನಾಟಕ ಶ್ರೀ ಇಂಡಸ್ಟ್ರೀಸ್, ಎಲ್ಲಾ ವಿಭಾಗದ ಪ್ರಶಸ್ತಿ ವಿಜೇತರಿಗೆ ಕರ್ನಾಟಕ ಶ್ರೇಷ್ಠ, ವಿಕಲಚೇತನರಿಗೆ ಕರ್ನಾಟಕ ನವಚೇತನ ಸ್ಪರ್ಧೆಗಳು ನಡೆಯಲಿವೆ. ಕಿಶೋರ್, ಕುಮಾರ್ ಮತ್ತು ಕೇಸರಿ ವಿಭಾಗದಲ್ಲಿ ಸ್ಪರ್ಧಿಸುವವರು ಜನ್ಮದಿನಾಂಕ ದೃಢೀಕರಣ ಪತ್ರ ತರಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

