ಹಾಸನ

ಎಡಕುಮರಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಚಳಿಯಲ್ಲಿ ನಡುಗಿದ ಪ್ರಯಾಣಿಕರು

Published On :

ಸಕಲೇಶಪುರ: ತಾಲೂಕಿನ ಎಡಕುಮರಿ ಬಳಿ ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಬಂದರಿಗೆ ಗೂಡ್ಸೆ ರೈಲು ತೆರಳುತ್ತಿದ್ದಾಗ ಎಡಕುಮರಿಯ 67ನೇ ಮೈಲುಗಲ್ಲಿನ ಸಮೀಪ ಹಳಿ ತುಂಡಾಗಿದ್ದರಿಂದ ಗೂಡ್ಸೆ ರೈಲಿನ ಎಂಜಿನ್ ಸೇರಿದಂತೆ 3 ಬೋಗಿಗಳು ಹಳಿತಪ್ಪಿದವಾದರು ಯಾವುದೆ ಅನಾಹುತ ಸಂಬವಿಸಿಲ್ಲ. ರೈಲು ಹಳಿ ತಪ್ಪಿದರ ಪರಿಣಾಮವಾಗಿ ಬೆಂಗಳೂರಿನಿಂದ-ಕಾರವಾರಕ್ಕೆ ಸಾಗುತಿದ್ದ ಪ್ರಯಾಣಿಕರ ರೈಲನ್ನು ಸಕಲೇಶಪುರ ರೈಲು ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಹೇಮಾವತಿ ನದಿ ದಂಡೆಯಲ್ಲಿರುವ ಸಕಲೇಶಪುರ ರೈಲು ನಿಲ್ದಾಣದಲ್ಲಿ ಹೆಚ್ಚಿನ ಚಳಿ ಇದ್ದ ಪರಿಣಾಮ ರೈಲು ಪ್ರಯಾಣಿಕರು ಸಾಕಷ್ಟು ಪರದಾಡುವಂತಾಯಿತು.
ಬದಲಿ ವ್ಯವಸ್ಥೆಗಾಗಿ ಪರದಾಟ:  ಪ್ರಯಾಣಿಕರ ರೈಲು ಸಕಲೇಶಪುರದಲ್ಲಿ ನಿಂತು ಎಂಟು ಗಂಟೆ ಕಳೆದರು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. ಈ ವಿಚಾರ ತಿಳಿದು ಮುಂಜಾನೆ 6 ಗಂಟೆಗೆ  ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಗುರುರಾಜ್ ಹಾಗೂ ನಗರ ಹಾಗೂ ಗ್ರಾಮಾಂತರ ಪಟ್ಟಣ ಪೊಲೀಸ್ ಪಿಎಸ್‌ಐಗಳಾದ ಜೀವನ್ ಹಾಗೂ ಭರತ್‌ಗೌಡ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಯಾಣಿಕರ ಮೆಚ್ಚುಗೆ ಗಳಿಸಿದರು.
ಹಳಿಗೆ ಬಂದ ಸಂಚಾರ:  ರೈಲು ಕಂಬಿ ತುಂಡಾಗಿ ಹಳಿ ತಪ್ಪಿದ ರೈಲನ್ನು ಮೇಲತ್ತಲು ಸಾಗರೋಪಾದಿಯಲ್ಲಿ ಮಧ್ಯಾಹ್ನದವರಗೆ ಕ್ರಮ ಕೈಗೊಂಡ ರೈಲ್ವೆ ಇಲಾಖೆ ಅಧಿಕಾರಿಗಳು. ರೈಲು ಹಳಿ ಜೋಡಣೆ ಕಾರ್ಯವನ್ನು ಸಂಪೂರ್ಣಗೊಳಿಸಿದ ನಂತರ ರೈಲು ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.