ಡಿ.22ರಂದು ಕ್ರಿಸ್ತ ಜನನ ರಿಯಾಲಿಟಿ ಶೋ
ಕ.ಪ್ರ.ವಾರ್ತೆ , ಹಾಸನ , ಡಿ. 20
ಕ್ರಿಸ್ಮಸ್ ಅಂಗವಾಗಿ ಕ್ರಿಸ್ತ ಜನನ ರಿಯಾಲಿಟಿ ಶೋ ವನ್ನು ನಗರದಲ್ಲಿ ಡಿ.22ರಂದು ಜಿಲ್ಲಾ ಸಂಯುಕ್ತ ಕ್ರೈಸ್ತ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿದೆ ಎಂದು ನಿರ್ದೇಶಕ ಮಂಡಳಿ ಅಧ್ಯಕ್ಷ ರೆ. ಫಾದರ್ ಜಾರ್ಜ್ ಅಂದ್ರಾದೆ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರಿಸ್ಮಸ್ ಸೌಹಾರ್ದ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 5 ಸ್ಥಬ್ಧ ಚಿತ್ರಗಳಾದ ರೋಮನ್ ಕ್ಯಾಥೋಲಿಕ್ ಚರ್ಚ್, ಸಿಎಸ್ಐ ವೆಸ್ಲಿ ಚರ್ಚ್, ಆರ್.ಸಿ. ಚರ್ಚ್ ಆಲ್ಪೋನ್ಸ್ ನಗರ, ಆರ್.ಸಿ.ಚರ್ಚ್ ಮಗ್ಗೆ ಮತ್ತು ಆರ್.ಸಿ. ಚರ್ಚ್ ಮಹಿಯ ನಗರ ಬರಲಿವೆ. ಜೊತೆಗೆ ಎರಡು ಕೋಲಾಟ ತಂಡಗಳು, ಕ್ರಿಸ್ಮಸ್ ನೃತ್ಯದ ತಂಡಗಳು, ಕ್ರಿಸ್ಮಸ್ ಗೀತೆಗಳನ್ನಾಡುವ ತಂಡಗಳು, ಕ್ರಿಸ್ಮಸ್ ಸಂದೇಶಗಳನ್ನು ನೀಡುವವರು ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಲಿದ್ದಾರೆ ಎಂದರು.
ಕಾರ್ಯಕ್ರಮ ವಿವರ: ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಟಿ. ಅಂತೋಣಿ ಸ್ವಾಮಿ ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅಧ್ಯಕ್ಷತೆವಹಿಸಲಿದ್ದಾರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ್ ಮಂಜುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರೈಮಂಡ್ ಡಿ ಅಲ್ಮೇಡಾ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ. ಮಥಾಯಿ, ಸಂತ ಅಂತೋಣಿ ಚರ್ಚ್ ನ ಧರ್ಮಗುರು ವಂ. ಜಾರ್ಜ್ ಅಂದ್ರಾದೆ, ಸಿಎಸ್ಐ ವೆಸ್ಲಿ ಚರ್ಚ್ ಸಭಾಪಾಲಕ ರೆ ಜಾರ್ಜ್ ವಿನೋದ್ ಕುಮಾರ್, ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮೆರವಣಿಗೆಯೂ ಸಂತ ಆಂತೋನಿಯವರ ದೇವಾಲಯದಿಂದ ಪ್ರಾರಂಭವಾಗಿ ಹೇಮಾವಾತಿ ಪ್ರತಿಮೆ, ಮಹಾವೀರ ಸರ್ಕಲ್, ಸಹ್ಯಾದ್ರಿ ಸರ್ಕಲ್, ಸ್ಲೇಟರ್ಸ್ ಮೆಮೋರಿಯಲ್ ಹಾಲ್, ಸಿಎಸ್ಐ ವೆಸ್ಲಿ ಚರ್ಚ್ ರಸ್ತೆ ಮೂಲಕ ಸಂತ ಅಂತೋನಿಯವರ ದೇವಾಲಯಕ್ಕೆ ಸಾಗಲಿದ್ದು, ಸುಮಾರು 3 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ, ರೆ. ಫಾದರ್ ಆರೋಗ್ಯ ರಾಜ್, ಒಕ್ಕೂಟದ ಅಧ್ಯಕ್ಷ ಬಿ.ಎಸ್.ತೋಮಸ್, ಉಪಾಧ್ಯಕ್ಷ ಜಾರ್ಜ್ ವಿಲ್ಸನ್, ಖಜಾಂಚಿ ಎಂ. ಅಂತೋಜಿರಾವ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

