ಹಾಸನ

ಅಪರಿಚಿತ ವ್ಯಕ್ತಿಯಿಂದ ಪಂಗನಾಮ

Published On :

ಹಾಸನ: ಮೋಸ ಹೋಗೋರು ಇರೋತನಕ ಮೋಸ ಮಾಡೋರು ಇದ್ದೇ ಇರ್ತಾರೆ ಅನ್ನೋದಕ್ಕೆ ಇದೊಂದು ನಿದರ್ಶನ.
ದೆಹಲಿ ಮೂಲದವನೊಬ್ಬ ಆಟೋಮೊಬೈಲ್ ಮಾಲೀಕರಿಗೆ ಪಂಗನಾಮ ಹಾಕಿರೋ ಘಟನೆ ನಗರದಲ್ಲಿ ಶನಿವಾರ ನಡೆದಿದೆ. ಹಾಸನದ ಸಾಲಗಾಮೆ ರಸ್ತೆಯಲ್ಲಿರೋ 2 ಆಟೋಮೊಬೈಲ್ ಅಂಗಡಿಯವರಿಗೆ ಈತ ಪಂಗನಾಮ ಹಾಕಿದ್ದಾನೆ.
ಅಜಾದ್ ಎಂದು ಹೇಳಿಕೊಂಡ ಅಪರಿಚಿತ ವ್ಯಕ್ತಿ ಪಂಗನಾಮ ಹಾಕಿದ್ದಾನೆ. ಹೋಲ್ ಸೇಲ್ ದರದಲ್ಲಿ ಆಟೋ ಮೊಬೈಲ್ ನೀಡುವುದಾಗಿ ನಂಬಿಸಿದ್ದಾನೆ. ನಗರದ ಸಾಲಗಾಮೆ ರಸ್ತೆಯಲ್ಲಿರೋ ಶ್ರೀ ಗುರುಕಾರ್ ಡೆಕೋರ್ ಮತ್ತು ಶ್ರೀ ಕೃಷ್ಣ ಕಾರ್ ಡೆಕೋರ್ ಅಂಗಡಿಯ ಮಾಲೀಕರಿಂದ ಸುಮಾರು ರು. 2 ಲಕ್ಷ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ಕೇವಲ 5 ಸಾವಿರ ಮೌಲ್ಯದ ವಸ್ತುಗಳನ್ನು ವಿಆರ್‌ಎಲ್‌ನಲ್ಲಿ ಕಳುಹಿಸಿ ಪರಾರಿಯಾಗಿದ್ದಾನೆ.
ಗಾಬರಿಗೊಳಗಾದ ಮಾಲೀಕರು ಆತನನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ತನ್ನೆಲ್ಲಾ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾನೆ. ಆತ ಯಾರು ಏನು ಎಂಬುದು ಇದುವರೆವಿಗೂ ತಿಳಿದಿಲ್ಲ. ಈ ಎರಡು ಅಂಗಡಿಯ ಮಾಲೀಕರಿಗೆ ಪಂಗನಾಮ ಹಾಕಿ ನಗರದಿಂದ ಕಾಲು ಕಿತ್ತಿದ್ದಾನೆ. ಪ್ರಕರಣ ಸದ್ಯ ಹಾಸನ ನಗರ ಠಾಣೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.