ಹಾಸನ

ಕನ್ನಡಿಗರಿಗೆ ಅಪಮಾನ ಮಾಡಿದರೆ ಗಡಿಪಾರು ಮಾಡಿ

Published On :

ಕ.ಪ್ರ.ವಾರ್ತೆ ,  ಆಲೂರು ,  ಡಿ.22
ರಾಜ್ಯದ ಕನ್ನಡಿಗರಿಗೆ ಅಪಮಾನ ಮಾಡುವರನ್ನು ಗಡಿ ಪಾರು ಮಾಡಬೇಕೆಂದು ಕಸಾಪ ಅಧ್ಯಕ್ಷ ಗುಲಾಂ ಸತ್ತಾರ್ ತಿಳಿಸಿದರು.
ಅವರು ಪಟ್ಟಣದಲ್ಲಿ ಕನ್ನಡ ಪರ ಸಂಘಗಳ ಸಹಯೋಗದೊಂದಿಗೆ  ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶಾರದಾಂಬರವರಿಗೆ ಮನವಿ ಸಲ್ಲಿಸಿ ಮಾತನಾಡಿ, ಕನ್ನಡ ನಾಡು ನುಡಿ ಹಾಗು ಭಾಷೆಗೆ ಅಡ್ಡಿ  ಆತಂಕಗಳನ್ನು ಉಂಟುಮಾಡುವ ರೀತಿಯಲ್ಲಿ ಇತ್ತೀಚೆಗೆ  ಬೆಳಗಾವಿಯಲ್ಲಿ ಶಾಸಕ ಸಂಭಾಜಿ ರಾವ್ ಪಾಟೀಲ್ ರಾಜ್ಯ ಸರ್ಕಾರದ ಶವಯಾತ್ರೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ಒತ್ತಾಯ: ಕನ್ನಡಿಗರನ್ನು ಅಪಮಾನ ಮಾಡುವಂತಹ ಹೇಳಿಕೆಗಳನ್ನು ನೀಡುವ ಶಾಸಕನನ್ನು ಬಂಧಿಸಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು. ಕಸಾಪ ಕಾರ್ಯದರ್ಶಿ ಎ.ಟಿ. ಮಲ್ಲೇಶ್, ಕೋಶಾಧ್ಯಕ್ಷ ವೃಥ್ವಿ, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಹನುಮಂತೇಗೌಡ, ಕರವೇ ಅಧ್ಯಕ್ಷ ನಟರಾಜ್, ನಗರಾಧ್ಯಕ್ಷ ಮಧು, ಲಯನ್ಸ್ ಕ್ಲಬ್ ಅಧ್ಯಕ್ಷ ನೀಲೇಶ್, ಟಿಪ್ಪು ಸಂಘದ ಅಧ್ಯಕ್ಷ ಕಬೀರ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ತೌಫಿಕ್, ಬಿಲಿವರ್ಸ್ ಚರ್ಚ್ ಫಾದರ್ ಡಿ.ಸಿ. ಬಸವರಾಜ್, ಶಾಂತಕೃಷ್ಣ, ಎ.ಎಚ್. ಲಕ್ಷ್ಮಣ್, ನಾಗರಾಜ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.