ಬೆಳಕು ಕಾಣದ ಗ್ರಾಮದಲ್ಲಿ ನೀರಿಗೂ ಬರ
ಕನ್ನಡಪ್ರಭವಾರ್ತೆ , ಅರಕಲಗೂಡು , ಡಿ. 22
ಸ್ವಾತಂತ್ರ್ಯ ಬಂದು ಅರ್ಧ ಶತಮಾನವನ್ನೇ ಕಳೆದು ವರ್ಷಗಳು ಮುನ್ನುಗ್ಗುತ್ತಿದ್ದರೂ ನಮ್ಮ ಗ್ರಾಮಗಳ ದುರವಸ್ಥೆಯಂತೂ ಮಾಸಿಲ್ಲ. ಅಂದು ಇದ್ದ ಕಗ್ಗತ್ತಲು ಇಂದಿಗೂ ಮುಂದುವರೆದಿದೆ ಎಂದರೆ ನೀವು ನಂಬಲೇಬೇಕು. ಬೆಳಕನ್ನೇ ಕಾಣದ ಗ್ರಾಮ ಇಲ್ಲಿದೆ. ಅದೇ ಇಬ್ಬಡಿ ಕೊಪ್ಪಲು.
ವಿದ್ಯುತ್ ಇಲ್ಲ: ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಗ್ರಾಮಪಂಚಾಯಿಗೆ ಸೇರಿದ ಈ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ವಾಸವಿದೆ. ಬಹುತೇಕ ದಲಿತ ಕುಟುಂಬಗಳೇ ಇರುವ ಈ ಗ್ರಾಮದ ಜನರ ಬದುಕೇ ದುಸ್ತರವಾಗಿದೆ. ಕೂಲಿ ನಾಲಿ ಬದುಕು ಸಾಗಿಸುವ ಈ ಕುಟುಂಬಗಳು ಎಲ್ಲಾ ರೀತಿಯ ಮೂಲ ಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಸರ್ಕಾರ ಜಾರಿಗೊಳಿಸುವ ಯೋಜನೆಗಳು ಏನಾಗುತ್ತಿವೆ ಎಂಬ ಪ್ರಶ್ನೆಗೂ ಕಾರಣವಾಗಿದೆ.
ಸುಮಾರು 20 ವರ್ಷಗಳ ಹಿಂದೆ ನಿರ್ಮಾಗೊಂಡಿರುವ ಇಬ್ಬಡಿಕೊಪ್ಪಲು ಗ್ರಾಮ ಇಬ್ಬಡಿ ಗ್ರಾಮದಿಂದ ಇರುವುದು ಕೇವಲ ಒಂದು ಕಿಲೋ ಮೀಟರ್ ದೂರದಲ್ಲಿ. ಆದರೆ ಇಬ್ಬಡಿ ಗ್ರಾಮದಲ್ಲಿ ಇರುವ ವಿದ್ಯುತ್ ಸಂಪರ್ಕ ಈ ಕೊಪ್ಪಲಿಗೆ ಇಲ್ಲ. ವಿದ್ಯುತ್ ಕೊಡಿ ಎಂದರೆ ಕಂಬ ಇಲ್ಲ ಎನ್ನುವ ಕಾರಣ ನೀಡುವ ಅಧಿಕಾರಿಗಳು ವಿದ್ಯುತ್ ಕಲ್ಪಿಸಲು, ಹಣ ಹಾಕಿ, ಗುತ್ತಿಗೆದಾರರನ್ನು ಕರೆದುತನ್ನಿ ಎನ್ನುತ್ತಾರೆ ಅಧಿಕಾರಿಗಳು ಎಂದು ಗ್ರಾಮಸ್ಥರು ಚೆಸ್ಕಾಂ ಅಧಿಕಾರಿಗಳ ವಿರುದ್ಧ ಆರೋಪಿಸುತ್ತಾರೆ.
ಸೀಮೆಎಣ್ಣೆಯೇ ಆಧಾರ: ಹಾಗಾದರೆ, ಸರ್ಕಾರದ ಬಡವರ ಪರ ರೂಪಿಸಲಾದ ಭಾಗ್ಯಲಕ್ಷ್ಮಿ ಯೋಜನೆ, ರಾಜೀವ್ ಗಾಂಧಿ ಯೋಜನೆ, ನಿರಂತರ ಜ್ಯೋತಿ ಯೋಜನೆಗಳು ಆದದ್ದಾದರೂ ಏನು ? ಒಂದು ತಿಂಗಳಿಗೆ 3 ಲೀಟರ್ ಸೀಮೆಎಣ್ಣೆ ನೀಡಲಾಗುತ್ತದೆ. ಇದು ಸರ್ಕಾರ ನೀಡುತ್ತಿರುವ ಸೌಲಭ್ಯ. ಇದು 30 ದಿನಗಳು ಈ ಮನೆಗಳನ್ನು ಬೆಳಕಿನಲ್ಲಿ ಇಡುವ ಸಾಧನ. ಸೀಮೆ ಎಣ್ಣೆ ಬುಟ್ಟಿಯಲ್ಲೇ ಬದುಕು ಬೆಳಕಿನ ಬದುಕು ಸಾಗಿಸುವ ಈ ಕುಟುಂಬಗಳ ಈ ಗ್ರಾಮದಲ್ಲಿ 20-30 ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಿದ್ದಾರೆ. ಇವರೆಲ್ಲರೂ ರಸ್ತೆ ಇಲ್ಲದ ಹಾದಿಯಲ್ಲಿ ಇಬ್ಬಡಿ ಗ್ರಾಮಕ್ಕೆ ಹೋಗುತ್ತಿದ್ದಾರೆ.
ಭೀತಿಯಲ್ಲಿ ಜನ: ಇನ್ನು ಈ ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಡಿ ಎಂಬ ಬೇಡಿಕೆಗೆ ಕಳೆದ ನಾಲ್ಕು ಚುನಾವಣೆಗಳಿಂದ ಭರವಸೆಗಳಷ್ಟೇ ಉತ್ತರವಾಗಿದೆ. ಈ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲವಾಗಿದೆ. ಈ ಗ್ರಾಮದ ಜನರ ಮತ್ತೊಂದು ಸಮಸ್ಯೆ ಎಂದರೆ ಚಿರತೆ ಕಾಟ. ಎಲ್ಲಿ ಹೋದರೂ ಸೂರ್ಯಾಸ್ತವಾಗುವುದರೊಳಗೆ ಮನೆ ಸೇರಬೇಕು. ಇಲ್ಲವಾದರೆ ಎಲ್ಲಿ ಚಿರತೆಯ ದಾಳಿಗೆ ತುತ್ತಾಗುತ್ತೇವೋ ಎಂಬ ಜೀವಭಯ. ಈ ಎಲ್ಲದರ ನಡುವೆ ಜೀವನ ನಡೆಸುತ್ತಿರುವ ಮಂದಿಗೆ ಕುಡಿವ ನೀರಿಗೂ ಹಾಹಾಕಾರ.
ಈ ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಡಿ ಎಂಬ ಬೇಡಿಕೆಗೆ ಕಳೆದ ನಾಲ್ಕು ಚುನಾವಣೆಗಳಿಂದ ಭರವಸೆಗಳಷ್ಟೇ ಉತ್ತರವಾಗಿದೆ. ಈ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲವಾಗಿದೆ. ಈ ಗ್ರಾಮದ ಜನರ ಮತ್ತೊಂದು ಸಮಸ್ಯೆ ಎಂದರೆ ಚಿರತೆ ಕಾಟ. ಎಲ್ಲಿ ಹೋದರೂ ಸೂರ್ಯಾಸ್ತವಾಗುವುದರೊಳಗೆ ಮನೆ ಸೇರಬೇಕು. ಇಲ್ಲವಾದರೆ ಎಲ್ಲಿ ಚಿರತೆಯ ದಾಳಿಗೆ ತುತ್ತಾಗುತ್ತೇವೋ ಎಂಬ ಜೀವಭಯ.
ಏಕೈಕ ಪಂಪು
ಇಬ್ಬಡಿ ಗ್ರಾಮದಿಂದ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆಯೂ ಭರವಸೆಯಾಗಿಯೇ ಉಳಿದಿದೆ. ಇಡೀ ಗ್ರಾಮದಲ್ಲಿ ಇರುವುದು ಏಕೈಕ ಕೈ ಪಂಪು ಕೊಳವೆ ಬಾವಿ.ಒಂದು ಗಂಟೆ ಒತ್ತಿದರೆ ಒಂದಷ್ಟು ನೀರು ಬರುತ್ತದೆ. ಇಲ್ಲಿನ ನೀರೆಯರಿಗೆ ನೀರು ಒತ್ತುವುದೇ ಒಂದು ಕಾಯಕವಾಗಿ ಬಿಟ್ಟಿದೆ. ಇಷ್ಟಾದರೂ ನಮ್ಮ ಚುನಾಯಿತ ಸದಸ್ಯರುಗಳು,ಅಧಿಕಾರಿ ವರ್ಗದವರಿಗೆ ಮಾತ್ರ ಇದಾವುದೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ನಿಜಕ್ಕೂ ಅಚ್ಚರಿ ಹುಟ್ಟಿಸುವುದೇ ಆಗಿದೆ.
-ಅ.ರಾ. ಸುಬ್ಬರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

