ಹಾಸನ

ಚನ್ನರಾಯಪಟ್ಟಣದಲ್ಲಿ ತಾ.ನಲ್ಲಿ ಶ್ರದ್ಧಾಂಜಲಿ

Published On :

ಚನ್ನರಾಯಪಟ್ಟಣ: ನಾಡು ಕಂಡ ಶ್ರೇಷ್ಠ ಸಾಹಿತಿ ಜಿಎಸ್ಎಸ್ ನಿಧನಕ್ಕೆ ತಾಲೂಕಿನಲ್ಲೆಡೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಾಲೂಕಿನ ಸಾಹಿತಿಗಳು, ಚಿಂತಕರು ಅಪಾರ ಕಂಬನಿ ಮಿಡಿದಿದ್ದಾರೆ.
ತಾಲೂಕು ಕಸಾಪದಿಂದ ಕಚೇರಿ ಮುಂಭಾಗದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಜಿಎಸ್ಎಸ್ ಭಾವಗೀತೆಗಳನ್ನು ಹಾಡುವ ಮುಖೇನ ಶ್ರದ್ಧಾಂಜಲಿ ಅರ್ಪಿಸಿದರು.
ತಹಸೀಲ್ದಾರ್ ಡಾ.ನಾಗರಾಜು ಮಾತನಾಡಿ ಜಿಎಸ್ಎಸ್ ಸಾಹಿತ್ಯ ಯುವಕರಿಂದ ವೃದ್ಧರವರೆಗೆ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಅವರ ನಿಧನದಿಂದ ಒಂದು ಆಸ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದರು.
ಯುವ ಸಾಹಿತಿಗಳು, ಕನ್ನಡಪರ ಸಂಘಟಕರಿಗೆ ನಾಡಿನ ಕುರಿತು ಹೆಚ್ಚಿನ ವಿಷಯಗಳನ್ನು ನೀಡಿ ಪಿತಾಮಹರಂತೆ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಕನ್ನಡದ ಜನತೆ ಅವರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಎನ್. ಲೋಕೇಶ್ ಮಾತನಾಡಿ ಜಿಎಸ್ಎಸ್ ನಿಧನದಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು. ಜಿಲ್ಲಾ ಬಿಜೆಪಿ ಮುಖಂಡ ಪಟೇಲ್ ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ಸಿದ್ದೇಗೌಡ, ಚಿಂತಕ ನಾರಾಯಣ್, ಜಿಲ್ಲಾ ಸಮರಸೇನೆ ಅಧ್ಯಕ್ಷ ಭರತ್ಗೌಡ, ಕಸಾಪ ಪದಾಧಿಕಾರಿ ಶಿವನಗೌಡ ಪಾಟೀಲ್, ಶಿವರಾಂ, ಪ್ರಕಾಶ್ ಕನ್ನಡ ವಾಸು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.