ಬೇಲೂರಿನಲ್ಲಿ ನಾನಾ ಸಂಘಟನೆಗಳಿಂದ ಸಂತಾಪ
ಕ.ಪ್ರ.ವಾರ್ತೆ ಬೇಲೂರು ಡಿ.24
ಕನ್ನಡ ನಾಡಿನ ಮಹಾನ್ ಚೇತನ, ಹಿರಿಯ ಕವಿ, ವಿಮರ್ಶಕ ಹಾಗೂ ಸಂಶೋಧಕ ಜಿಎಸ್ಎಸ್ ನಿಧನಕ್ಕೆ ತಾಲೂಕು ಕಸಾಪ ಸೇರಿದಂತೆ ಇತರೆ ಸಂಘ ಸಂಸ್ಥೆ ಸಂತಾಪ ಸಭೆ ನಡೆಸಿದವು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕಚೇರಿಯಲ್ಲಿ ಮಂಗಳವಾರ ನಡೆದ ರಾಷ್ಟ್ರಕವಿ ಶಿವರುದ್ರಪ್ಪ ನಿಧನಕ್ಕೆ ಸಂತಾಪ ಸೂಚಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಜಯಕರ್ನಾಟಕ ಸಂಘಟನೆ, ಲಯನ್ಸ್ ಕ್ಲಬ್, ಡಾ.ರಾಜ್ ಅಭಿಮಾನಿ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವಾರು ಸಂಘಟನೆ ಮುಖಂಡರು, ಸಾಹಿತಿಗಳು, ವಿಮರ್ಶಕರು, ಪತ್ರಕರ್ತರು, ವರ್ತಕರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಆನಂದ್ ಮಾತನಾಡಿ, ಕುವೆಂಪು ಶಿಷ್ಯರಾಗಿದ್ದ ಶಿವರುದ್ರಪ್ಪನವರು ಕುವೆಂಪು ಅವರ ಬರಹ, ಬದುಕಿನಿಂದ ಪ್ರೇರಿತರಾಗಿದ್ದರು. ಕುವೆಂಪು ಅವರಂತೆ ಇವರಿಗೂ ರಾಷ್ಟ್ರಕವಿ ಪ್ರಶಸ್ತಿ ದೊರಕಿದ್ದು ಕನ್ನಡ ನಾಡಿನ ಪುಣ್ಯವಾಗಿದ್ದು ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳು ಇವರಿಗೆ ಸಂದಿದ್ದು ಇವರ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕ ಬರಡಾದಂತಾಗಿದೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಟಿ.ಡಿ ತಮ್ಮಣ್ಣಗೌಡ, ಅನಂತರಾಜು ಅರಸ್, ಸಾಹಿತಿ ಶ್ರೀವತ್ಸ ಎಸ್ವ್ಟಿ, ನವಾಬಬ್ಬೇಲೂರು, ಕುಮಾರಸ್ವಾಮಿ, ಸಾರಾ ಮಹೇಶ್, ಮಾ.ನ ಮಂಜೇಗೌಡರು, ತೀರ್ಥಂಕರ್, ಚಂದ್ರಶೇಖರ್, ಅರುಣಕುಮಾರ್, ಶಿವಾಜಿ, ಲಯನ್ಸ್ ಅಧ್ಯಕ್ಷ ಪೂವಯ್ಯ, ಡಾ.ಚಂದ್ರಮೌಳಿ, ಕೆ, ಸುದರ್ಶನ್ ಇತರರು ಮಾತನಾಡಿದರು.
ಬಹುದೊಡ್ಡ ನಷ್ಟ: ಕವಿ, ಸಾಹಿತ್ಯ ವಿಮರ್ಶಕ ಜಿಎಸ್ಎಸ್ ನಿಧನದಿಂದ ಕನ್ನಡ ಸಾಹಿತ್ಯ ಸೋಕಕ್ಕೆ ಬಹುದೊಡ್ಡ ನಷ್ಟವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬೆಣ್ಣೂರು ರೇಣುಕುಮಾರ್ ಹೇಳಿದರು.
ಕನ್ನಡ ಸಾರಸ್ವತ ಲೋಕದಲ್ಲಿ ಎದೆ ತುಂಬಿ ಹಾಡಿದ ಸಾಹಿತಿ ವಿಮರ್ಶಕ ಜಿಎಸ್ಎಸ್ ಕನ್ನಡದ ಹೆಸರಾಂತ ಕವಿಗಳಲ್ಲಿ ಒಬ್ಬರಾಗಿದ್ದು ಕಥೆ ಕವನ, ವಿಮರ್ಶೆ, ಪ್ರವಾಸ ಕಥನ ಸೇರಿದಂತೆ ಆಡು ಮುಟ್ಟಿದ ಸೊಪ್ಪಿಲ್ಲ ಎಂಬೆತೆ ಎಲ್ಲಾ ಕಡೆಯೂ ತಮ್ಮದೇ ಆದ ಛಾಪು ಮೂಡಿಸಿದ್ದು ಇವರ ನಿಧನ ರಾಜ್ಯಕ್ಕೆ, ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.
ಆದರ್ಶ ಮೈಗೂಡಿಸಿಕೊಳ್ಳಿ: ನಾಡಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ರಾಷ್ಟ್ರಕವಿ ಜಿ.ಎಸಸ್ಶಿವರುದ್ರಪ್ಪ ಅವರ ಆದರ್ಶವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಾಲೂಕು ಅಭ್ಯುದಯ ಸಂಘದ ಅಧ್ಯಕ್ಷ ಬಿ.ವಿ ಉಮೇಶ್ ತಿಳಿಸಿದರು.
ಇಲ್ಲಿನ ಸೀತಾರಾಮಾಂಜನೇಯ ದೇಗುಲದಲ್ಲಿ ನಡೆದ ಸಂತಾಪ ಸಭೆಯಲ್ಲಿ ಮಾತನಾಡಿ ಜಿ ಎಸ್ ಎಸ್ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾದಂತಾಗಿದೆ ಎಂದರು.
ಅಂಗವಿಕಲರ ಸಂಘದ ಗೌರವಾಧ್ಯಕ್ಷ ಮ.ಶಿವಮೂರ್ತಿ ಮಾತನಾಡಿ, ಜಿಎಸ್ಎಸ್ ನಿಧನದಿಂದಾಗಿ ಮಂಗಳವಾರ ನಡೆಯಬೇಕಿದ್ದ ವಿಶ್ವ ಅಂಗವಿಕಲ ದಿನಾಚರಣೆಯನ್ನು ಮುಂದಿನ ಮಂಗಳವಾರ ಡಿ.31 ರಂದು ವೀರಶೈವ ಸಮುದಾಯ ಭವನದಲ್ಲಿ ಬೆಳಿಗ್ಗೆ 11 ಕ್ಕೆ ನಡೆಸಲಾಗುವುದು ಎಂದರು. ಸಭೆಯಲ್ಲಿ ಜಗದೀಶ, ಸಿದ್ದೇಶ, ಲಿಂಗಾಚಾರ್, ಸೋಮಯ್ಯ, ಮೋಹನ್, ಸುಧಾಮಣಿ, ಲತಾಮಣಿ, ರಾಜ, ರುದ್ರೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

