ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಿ: ಶಾಸಕ ಕೆಎಂಎಸ್ ಸಲಹೆ
ಕ.ಪ್ರ.ವಾರ್ತೆ ಅರಸೀಕೆರೆ ಡಿ. 25
ಸತತ ಮಳೆಯ ಅಭಾವದಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಸಹಾಯಧನ ನೀಡುವ ಬದಲು ತಾಲೂಕಿನ ಕೆರೆ-ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಪಟ್ಟಣದ ಪುರಸಭಾ ಸಮುದಾಯ ಭವನದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಜಲಾನಯನ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆ ಆಶ್ರಯದಲ್ಲಿ ರೈತ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಬರ ಪರಿಸ್ಥಿತಿಯಿಂದ ಬೇಸತ್ತು ಜನ ಕೂಲಿ ಹರಿಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಪರಿಸ್ಥಿತಿಯನ್ನು ಅರಿತು ಸರ್ಕಾರ ರೈತರ ನೆರವಿಗೆ ಧಾವಿಸುವ ಅಗತ್ಯವಿದೆ ಎಂದರು.
ರೈತರ ಪರನಿಂತ ಮಾಜಿ ಪ್ರಧಾನಿ ಚರಣ್ಸಿಂಗ್ ಹೋರಾಟದ ಮನೋಭಾವ ರೈತರ ಹಿತಕ್ಕಾಗಿ ನಬಾರ್ಡ್ ಸ್ಥಾಪನೆಗೆ ಕಾರಣರಾದ ಅವರು ರೈತರಿಗೆ ಬೆಂಬಲವಾಗಿ ಕೆಲಸ ಮಾಡಿದ್ದನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ ಮಾತನಾಡಿ, ಬರಗಾಲದಿಂದ ಬೆಳೆ ಒಣಗಿ ನಿಂತಿದ್ದು ರೈತರ ಪರಿಸ್ಥಿತಿ ಹೀನಾಯ ಸ್ಥಿತಿ ತಲುಪಿದ್ದು ಸರ್ಕಾರ ಈಗಲಾದ್ರೂ ಎಚ್ಚೆತ್ತು ಅನ್ನದಾತನ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.
ಕೃಷಿ ತಜ್ಞ ಡಾ.ಬೋರಯ್ಯ ಖುಷ್ಕಿ ಬೇಸಾಯ ಪದ್ಧತಿಗಳ ಬಗ್ಗೆ ತೋಟಗಾರಿಕೆ ತಜ್ಞ ಡಾ. ಪ್ರಶಾಂತ್ ತೆಂಗಿನ ಸುಧಾರಿತ ಬೆಳೆ ಪದ್ಧತಿಯ ಬಗ್ಗೆ ಉಪನ್ಯಾಸ ನೀಡಿದರು. ಪ್ರಗತಿಪರ ರೈತ ಮಂಜುನಾಥ್ ಸಮಗ್ರ ಕೃಷಿ ಪದ್ಧತಿಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ನಾನಾ ಕ್ಷೇತ್ರಗಳಲ್ಲಿ ಸಾವಯವ ರೇಷ್ಮೆ, ಧಾಳಿಂಬೆ, ಹೈನುಗಾರಿಕೆ ಇತರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ರೈತರಾದ ಯಾದಾಪುರ ಚಂದ್ರಪ್ಪ, ಬೆಂಡೇಕೆರೆ ಶೇಖರಪ್ಪ, ಅರಸೀಕೆರೆ ವಿಶ್ವನಾಥ್, ಬಾಗೂರು ರಾಮಕೃಷ್ಣೇಗೌಡ, ಎಪಿಎಂಸಿ ವೆಂಕಟೇಶ್, ಶ್ಯಾನೇಗೆರೆ ಮಹೇಶ್ವರಪ್ಪ, ಮಾದಾಪುರ ಮಲ್ಲಿಕಾರ್ಜುನ, ಹಿರೇಸಾದರಹಳ್ಳಿ ಗಂಗಾಧರಪ್ಪ ಇವರನ್ನು ಸನ್ಮಾನಿಸಲಾಯಿತು. ರೇಷ್ಮೆ, ತೋಟಗಾರಿಕೆ ಹಾಗೂ ಪಶು ಸಂಗೋಪನಾ ಇಲಾಖಾ ವತಿಯಿಂದ ಫಲಾನುಭವಿಗಳಿಗೆ ವಿವಿಧ ಚೆಕ್ ವಿತರಿಸಲಾಯಿತು.
ತಾಪಂ ಅಧ್ಯಕ್ಷ ಶಿವಮೂರ್ತಿ, ಪುರಸಭೆ ಅಧ್ಯಕ್ಷ ಮೋಹನ್ಕುಮಾರ್, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪಾರ್ವತಮ್ಮ, ರತ್ಮಮ್ಮ, ತಾಪಂ ಸದಸ್ಯ ಬಿ.ಆರ್. ಜಯಣ್ಣ, ಪುಟ್ಟನಕಟ್ಟೆ ದಿನೇಶ್, ಜಯಮ್ಮ, ವಸಂತ, ನಂಜುಂಡಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸೋಮಶೇಖರ್, ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್, ಸಹಾಯಕ ಕೃಷಿ ಅಧಿಕಾರಿ ಕೆಂಪುಚೌಡಪ್ಪ, ಗಂಡಸಿ ರೈತ ಸಂಪರ್ಕ ಕೇಂದ್ರದ ಎ.ಓ.ಹರೀಶ್, ಯಳವಾರೆ ಕೃಷಿ ಕೇಂದ್ರದ ಡಾ.ಪ್ರಶಾಂತ್, ಡಾ.ಬೋರಯ್ಯ, ಡಿ.ಎಂ.ಕುರ್ಕೆ ರೈತ ಸಂಪರ್ಕ ಕೇಂದ್ರದ ಮಂಜುನಾಥ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

