ಐಎನ್ಜಿ ವಿಮಾ ಕಂಪನಿಗೆ ಕಾವಲುಪಡೆ ಮುತ್ತಿಗೆ
ಕ.ಪ್ರ.ವಾರ್ತೆ ಬೇಲೂರು ಡಿ. 25
ಐಎನ್ಜಿ ಇನ್ಸೂರೆನ್ ಕಂಪನಿ ವಿದ್ಯಾವಂತ ಮಹಿಳೆಯರಿಗೆ ವೇತನ ನೀಡದೆ ಶೋಷಣೆ ಮಾಡುತ್ತಿದೆಯಲ್ಲದೆ ಗ್ರಾಹಕರಿಗೆ ಮೋಸವೆಸಗಲು ಕಂಪನಿ ಮುಂದಾಗಿದೆ. ಕೂಡಲೆ ಈ ಬಗ್ಗೆ ಕಂಪನಿ ಗಮನಹರಿಸುವಂತೆ ಆಗ್ರಹಿಸಿ ತಾಲೂಕು ಕಾವಲು ಪಡೆ ನೇತೃತ್ವದಲ್ಲಿ ಮಂಗಳವಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ಪಟ್ಟಣದ ಹೋಳೆಬೀದಿಯಲ್ಲಿರುವ ಇಂಜ್ ಇನ್ಸೂರೆನ್ಸ್ ಕಂಪನಿ ವಿದ್ಯಾವಂತ ಮಹಿಳೆಯರಿಗೆ ಕೆಲಸದ ಅಮಿಷ ತೋರಿಸಿ ತಿಂಗಳಿಗೆ 5 ಸಾವಿರ ನೀಡುವುದಾಗಿ ತಿಳಿಸಿ ವೇತನ ನೀಡದೆ ಮಹಿಳೆಯರಿಗೆ ತೀವ್ರ ತೊಂದರೆ ಉಂಟುಮಾಡಿದೆ ಎಂದು ಕಾವಲುಪಡೆ ಅಧ್ಯಕ್ಷ ಪೆಂಟರ್ ರವಿ ದೂರಿದರು.
ಕರವೇ ಮುಖಂಡ ಅಬ್ದುಲ್ಖಾದರ್ ಮಾತನಾಡಿ, ಪಟ್ಟಣದಲ್ಲಿ ಕಚೇರಿ ತೆರೆದಿರುವ ಇಂಜ್ ಕಂಪನಿ ಮುಂಜುರಾಕ್ ಮಾರ್ಕೇಟಿಂಗ್ ಕಂಪನಿಯೊಂದಿಗೆ ಶಾಮೀಲಾಗಿ ಬಡ ವರ್ಗದವರನ್ನು ದೂರವಾಣಿ ಮೂಲಕ ಸಂರ್ಪಕಿಸಿ ಇನ್ಸೂರೆನ್ಸ್ ಮಾಡಿಸುವಂತೆ ಬಲವಂತ ಮಾಡುತ್ತಿದ್ದು ಇದು ಗ್ರಾಹಕರಿಗೆ ಗೊತ್ತಿಲ್ಲದೆ ಮೋಸ ಮಾಡುವ ಉದ್ದೇಶ ಹೊಂದಿರುವ ಶಂಕೆ ಮೂಡುತ್ತಿದೆ ಎಂದು ಹೇಳಿದರು. ಹಾಗೂ ಕಚೇರಿಯಲ್ಲಿ ಯಾವ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ, ಜವಾಬ್ದಾರಿ ಯಾರೂ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಇಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಹಾಗೂ ಗ್ರಾಹಕರಿಗೆ ತುಂಬಾ ಅನಾನೂಕೂಲವಾಗಿದೆ ಎಂದು ತಿಳಿಸಿದರು.
ಕಂಪನಿಯ ಪ್ರಭಾರಿ ಅಧಿಕಾರಿ ರಶ್ಮಿ ಮಾತನಾಡಿ, ಈ ಕಚೇರಿಯಲ್ಲಿ ಪವನ್ ಎಂಬುವರು ಕೆಲಸ ಮಾಡುತ್ತಿದ್ದು, ಈಗ ಒಂದು ತಿಂಗಳಿಂದ ಕೆಲಸಕ್ಕೆ ಬಾರದೆ ಇಲ್ಲಿನ ನೌಕಕರಿಗೆ ವೇತನ ನೀಡದೆ ತೊಂದರೆಯಾಗಿದೆ. ಕೂಡಲೇ ಕಂಪನಿಯೊಂದಿಗೆ ಚರ್ಚಿಸಿ ವೇತನ ನೀಡಲು ಮುಂದಾಗುವುದಾಗಿ ತಿಳಿಸಿದರು.
ಐಎನ್ಜಿ ಉತ್ತಮ ಕಂಪನಿಯಾಗಿದ್ದು, ಇದರಲ್ಲಿ ಯಾವುದೇ ಮೋಸ ನಡೆದಿಲ್ಲ. ಕೆಲ ನೌಕರರು ಎಸಗಿರುವ ಲೋಪಕ್ಕೆ ಕಂಪನಿಯನ್ನು ದೂರುವುದು ಸರಿಯಲ್ಲ ಎಂದು ಮನವಿ ಮಾಡಿದರು. ಜಯಕರ್ನಾಟಕ ತಾ. ಅಧ್ಯಕ್ಷ ಅರುಣ್ಕುಮಾರ್, ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

