ಹಾಸನ

ತೂಕದಲ್ಲಿ ಮೋಸ: ವ್ಯಾಪಾರಿಗಳಿಗೆ ಗೂಸಾ

Published On :

ಸಕಲೇಶಪುರ: ಬತ್ತ ಖರೀದಿ ವೇಳೆ ರೈತರನ್ನು ತೂಕದಲ್ಲಿ ವಂಚಿಸುತ್ತಿದ್ದ ವ್ಯಾಪಾರಿಗಳನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಬಿರಡಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಬೇಲೂರು ಪಟ್ಟಣದ ರಿಯಾಜ್, ಸಿಕಂದರ್, ಅಹಮ್ಮದ್ ಷರೀಫ್ ಅಬ್ಬಾಸ್, ಸಾಯರ್ ಎಂಬುವರು ಸ್ಥಳದಲ್ಲೇ ಹಣ ನೀಡುವ ಭರವಸೆ ನೀಡಿ ಗ್ರಾಮಕ್ಕೆ ಲಾರಿ ತಂದು ಬತ್ತ ತುಂಬಿಸುತ್ತಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಉದಯ್‌ಕುಮಾರ್ ಎಂಬುವರ ಬತ್ತ ತುಂಬುವ ವೇಳೆ ಯಾವುದೇ ವ್ಯತ್ಯಾಸ ಕಂಡು ಬಾರದಿದ್ದರೂ ಉಮಾಶಂಕರ್ ಎಂಬುವರ 104 ಚೀಲ ಮತ್ತು ಪ್ರದೀಪ್ ಎಂಬ ರೈತರ 30 ಚೀಲ ಬತ್ತ ತೂಕದ ವೇಳೆ ರೈತರ ಕಣ್ತಪ್ಪಿಸಿ ತೂಕದಲ್ಲಿ ಮೋಸ ಮಾಡುತ್ತಿರುವುದು ಅರಿವಿಗೆ ಬಂದಿದ್ದರಿಂದ ಮೂಟೆಗಳನ್ನು ಪುನಾ ತೂಕಕ್ಕೆ ಹಾಕಿದ ವೇಳೆ 50 ಕೆ.ಜಿ ಬತ್ತದ ಚೀಲದಲ್ಲಿ ಸುಮಾರು 2 ರಿಂದ 5 ಕೆ.ಜಿ ಬತ್ತವನ್ನು ಮೋಸ ಮಾಡುತ್ತಿರುವುದು ದೃಢಪಟ್ಟಿತು. ಅಲ್ಲದೆ, ಈ ವಿಷಯ ಗ್ರಾಮದಲ್ಲಿ ಹರಡಿ ರೊಚ್ಚಿಗೆದ್ದ ಗ್ರಾಮಸ್ಥರು ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಲಿಸರಿಗೆ ಈ ವ್ಯಾಪಾರಿಗಳನ್ನು ಒಪ್ಪಿಸಿದರು. ಠಾಣೆ ಆವರಣದಲ್ಲಿ ನಡೆದ ಮರು ತೂಕದ ವೇಳೆ ಸುಮಾರು 2 ಕ್ವಿಂಟಾಲ್ ಬತ್ತವನ್ನು ವ್ಯಾಪಾರಿಗಳು ಹೆಚ್ಚಾಗಿ ತುಂಬಿ ಮೋಸ ಮಾಡಿರುವುದಾಗಿ ತಿಳಿದುಬಂದಿದೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.