ಸುದ್ದಿ ಸಂಕ್ಷೇಪ
ಪೇಜಾವರ ಶ್ರೀಗಳಿಗೆ ಪಾದಪೂಜೆ
ಕ.ಪ್ರ.ವಾರ್ತೆ ಅರಸೀಕೆರೆ ಡಿ. 25
ನಗರದಲ್ಲಿ ನೂತನವಾಗಿ ಪ್ರಾರಂಭವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯಕ್ಕೆ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ ಪಾದಪೂಜೆಯನ್ನು ಮೈಸೂರು ವಿಭಾಗ ಸಂಪರ್ಕ ಪ್ರಮುಖ
ಸತ್ಯನಾರಾಯಣ ಹಾಗೂ ಅರಸೀಕೆರೆ ಸಂಘ ಚಾಲಕರಾದ ಕೋ.ರಾ. ಶ್ರೀನಿವಾಸಮೂರ್ತಿ, ಅರುಣ ದಂಪತಿಯಿಂದ ಪಾದಪೂಜೆ ನೆರವೇರಿಸಲಾಯಿತು. ಶ್ರೀಗಳು ಮಾತನಾಡಿ, ಸಂಘ ಕಾರ್ಯ ಮಹಾಕಾರ್ಯ ತಾಲೂಕಿನಲ್ಲಿ ಎಷ್ಟು ಶಾಖೆಗಳಿವೆ, ಸಂಸ್ಕಾರ ಆದರ್ಶಗಳ ಧರ್ಮಜಾಗರಣಾಗೊಳಿಸುವ ಮಹತ್ತರ ಕಾರ್ಯ ಸ್ವಯಂ ಸೇವಕರಿಂದ ಆಗಬೇಕಾಗಿದೆ ಎಂದು ನುಡಿದರು. ಸಮಾರಂಭದಲ್ಲಿ ನೂರಾರು ಸ್ವಯಂ ಸೇವಕರು, ಮಾತೆಯರು ಭಾಗವಹಿಸಿದ್ದರು.
ಬಾಲಕಿ ಮೇಲೆ ಅತ್ಯಾಚಾರ
ಹಾಸನ: ಬಾಲಕಿ ಮೇಲೆ ಸಂಬಂಧಿಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಹೊಳೆನರಸೀಪುರ ತಾಲೂಕಿನಲ್ಲಿ ಅಪ್ರಾಪ್ತೆ ಮೇಲೆ ಸಂಬಂಧಿಕನೇ ಅತ್ಯಾಚಾರ ನಡೆಸಿದ್ದಾನೆ. ಈ ಸಂಬಂಧ ಆರೋಪಿ ವೆಂಕಟೇಶ್ ಎಂಬಾತನನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದ್ದು, 7 ನೇ ತರಗತಿ ಓದುತ್ತಿರುವ 13 ವರ್ಷದ ಬಾಲಕಿಯ ಮನೆಗೆ ಯಾರೂ ಇಲ್ಲದ ವೇಳೆ ಬಂದ ಕಾಮುಕ ವೆಂಕಟೇಶ್ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
'ರಾಮಾನುಜಂ ಶ್ರೇಷ್ಠ ಗಣಿತಜ್ಞ'
ಜಾವಗಲ್: ಶ್ರೀನಿವಾಸ ರಾಮಾನುಜಂ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಗಣಿತಜ್ಞರು. ಅವರು ಗಣಿತದಲ್ಲಿ ಅನನ್ಯ ಪ್ರತಿಭೆ ಹೊಂದಿದ್ದರು ಎಂದು ಟೆಕ್ವಾಂಡೋ ತರಬೇತಿದಾರ ಉದಯಕುಮಾರ್ ತಿಳಿಸಿದರು. ಟೆಕ್ವಾಂಡೋ ತರಬೇತಿ ಶಾಲೆ ಮತ್ತು ಬನಶಂಕರಿ ಸಂಘದವರು ಏರ್ಪಡಿಸಿದ್ದ ಶ್ರೀನಿವಾಸ ರಾಮಾನುಜಂ ಅವರ ಜನ್ಮ ದಿನಾಚರಣೆಯ ಮಾತನಾಡಿದ ಅವರು, ರಾಮಾನುಜಂ ಅವರಿಗೆ ಸಂಖ್ಯೆಗಳ ಬಗ್ಗೆ ಚಿರಪರಿಚಿತ ನಂಟಿತ್ತು. ಮತ್ತು ವಿಶೇಷವಾಗಿ ಸಂಖ್ಯಾ ಸಿದ್ದಾಂತದ ಬಗ್ಗೆ ಉತ್ಕೃಷ್ಟವಾದ ತಿಳಿವಳಿಕೆ ಹೊಂದಿದ್ದರು ಎಂದರು. ಬನಶಂಕರಿ ಸಂಘದ ಅಧ್ಯಕ್ಷೆ ಶಾಂತಮ್ಮ ಮತ್ತು ವಿದ್ಯಾರ್ಥಿಗಳು ಇದ್ದರು.
ಜಿಎಸ್ಎಸ್ಗೆ ಸಂತಾಪ ಸೂಚಕ ಸಭೆ
ಜಾವಗಲ್: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾಗಿ ಸೇವೆ ಅರಂಭಿಸಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ್ದರು ಎಂದು ನಿವೃತ್ತ ಶಿಕ್ಷಕ ಜೆ.ಕೆ.ವಿಶ್ವೇಶ್ವರಯ್ಯ ತಿಳಿಸಿದರು. ಪ್ರವಾಸಿ ಮಂದಿರದ ಮುಂಭಾಗದಲ್ಲಿ ತಾಲೂಕು ಜಾನಪದ ಪರಿಷತ್, ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತಹೋಬಳಿ ಘಟಕ, ಅಮ್ಮ ಅಕಾಡೆಮಿ, ಹೋಬಳಿ ಕಸಾಪ ಘಟಕ, ವಾಹನ ಚಾಲಕರು ಮತ್ತು ಆಟೋ ಚಾಲಕರ ಹಾಗೂ ನಿರ್ವಾಹಕರ ಸಂಘ, ಹೋಬಳಿ ಕರವೇ ಘಟಕ ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡಿದರು. ಲಕ್ಷ್ಮೀರವಿಶಂಕರ್, ಜಾವಗಲ್ ವಸಂತಕುಮಾರ್, ಸೋಮೇಗೌಡ, ಡಾ. ಕೆ.ಬಾಷಾ, ಜಾವಗಲ್ ಪ್ರಸನ್ನಕುಮಾರ್, ದಯಾನಂದ್, ಶಿಕ್ಷಕ ಸಿ.ಬಿ.ಕುಮಾರ್ ಮಾತನಾಡಿದರು. ಜೆ.ಎಂ. ಅನಿಲ್ಕುಮಾರ್, ನೇರ್ಲಿಗೆ ಕರುಣಾಕರ, ತಿಮ್ಮಶೆಟ್ಟಿ, ಧರ್ಮೇಂದ್ರ, ಶಾಂತಮ್ಮ, ಯೋಗ ಶಿಕ್ಷಕ ರಂಗಸ್ವಾಮಿ, ಭಾನುಪ್ರಕಾಶ್ ಇದ್ದರು.ಎನ್.ಬಿ.ರಾಜಶೇಖರ್, ಕಲ್ಲಹಳ್ಳಿ ನಾಗರಾಜು ರಾಜೇಶ್ವರಿ ,ಲಕ್ಷ್ಮೀ, ಲೋಲಾಕ್ಷಮ್ಮ, ಈಶ್ವರಹಳ್ಳಿ ಲಕ್ಷ್ಮಣ್, ಶ್ರೀಕಂಠಯ್ಯ, ಕವಿತಾಮಂಜುನಾಥ್, ರಂಗಸ್ವಾಮಿ, ನರಸಿಂಹಸ್ವಾಮಿ ಸಂತಾಪ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

