ಅಭಿವೃದ್ಧಿಗೆ ಶ್ರಮಿಸಲು ಅವಕಾಶ ಕಲ್ಪಿಸಿ'
ಕನ್ನಡಪ್ರಭ ವಾರ್ತೆ ಹಾಸನ ಡಿ. 26
ಒಕ್ಕಲಿಗ ಸಮುದಾಯದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡುವಂತೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನದ ಅಭ್ಯರ್ಥಿ ಬಿ.ಪಿ. ಮಂಜೇಗೌಡ ಹೇಳಿದರು.
ನಗರದ ಚೆಲುವಮ್ಮ ಚೆಲುವಯ್ಯ ಕಲ್ಯಾಣ ಮಂಟಪದಲ್ಲಿ ಗುರುವಾರ ಕರೆಯಲಾಗಿದ್ದ ಒಕ್ಕಲಿಗರ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಿನ ರೀತಿಯಲ್ಲಿ ಇರುವುದರಿಂದ ಬೆಂಗಳೂರಿಗೆ ಹೋಗಿ ಮಕ್ಕಳನ್ನು ವಿದ್ಯಾಭ್ಯಾಸ ಮಾಡಲು ಸಾಧ್ಯವಿಲ್ಲ. ನಮ್ಮ ಜಿಲ್ಲೆಯಲ್ಲಿ ಅಂತಹ ವಿದ್ಯಾಭ್ಯಾಸವನ್ನು ಕೊಡುವುದರ ಮೂಲಕ ಅವರಿಗೆ ಉತ್ತೇಜನ ನೀಡಬೇಕು ಎಂದು ಕಿವಿಮಾತು ಹೇಳಿದರು.
ಐಎಎಸ್. ಕೆಎಎಸ್. ಸೇರಿದಂತೆ ಉನ್ನತ ವಿದ್ಯಾಭ್ಯಾಸ ಕಲಿತು ಮುಂದೆ ಬಂದವರಲ್ಲಿ ನಮ್ಮ ಸಮುದಾಯದ ಸಂಖ್ಯೆಯು ಕಡಿಮೆ ಇದೆ. ಒಕ್ಕಲಿಗ ಸಮುದಾಯದವರ ಒಗ್ಗಟಿನಲ್ಲಿ ಕೆಲಸ ಮಾಡುವುದರ ಮೂಲಕ ಹೇಳಿಗೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ಈ ಭಾರಿ ಮೂರು ಮತಗಳಲ್ಲಿ ಕ್ರಮ ಸಂಖ್ಯೆ 14ರ ನನ್ನ ಗುರುತು ನಂದಿ ಹಾಗೂ ಕ್ರಮ ಸಂಖ್ಯೆ 2ರ ಕೆ.ಎಚ್. ಅಣ್ಣೇಗೌಡ ಜೋಡಿ ಎತ್ತುಗಳ ಚಿಹ್ನೆಗೆ ಮತ ನೀಡುವ ಮೂಲಕ ಸಮಾನ ಮನಸ್ಕರ ವೇದಿಕೆಯ ಇಬ್ಬರನ್ನು ಒಕ್ಕಲಿಗ ಜನಾಂಗದವರಿಗೆ ಗೆಲುವು ಕೊಡುವುದರ ಮೂಲಕ ತಮ್ಮ ಸೇವೆ ಮಾಡಲು ಸಹಕರಿಸುವಂತೆ ಕರೆ ನೀಡಿದರು.
ಕ್ರಮ ಸಂಖ್ಯೆ 2 ಜೋಡಿ ಎತ್ತುಗಳ ಚಿಹ್ನೆ ಗುರುತಿನ ಅಭ್ಯರ್ಥಿ ಕೆ.ಎಚ್. ಅಣ್ಣೇಗೌಡ ಮಾತನಾಡಿ, ಒಕ್ಕಲಿಗ ಸಮುದಾಯದವರು ಸೇವೆಗೆ ಅವಕಾಶ ಕೊಟ್ಟರೇ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನುಡಿದರು. ಈ ತಾಲೂಕಿನಲ್ಲಿ ಸಲ್ಪ ಗೊಂದಲ ಇದ್ದು, ಎಲ್ಲಾರ ಸಹಕಾರದೊಂದಿಗೆ ಕೆಲಸ ಮಾಡುವುದಾಗಿ ಹೇಳಿದರು.
ವಾಸುದೇವ್ ಮಾತನಾಡಿ, ಮೊದಲು ಒಕ್ಕಲಿಗ ಸಂಘವನ್ನು 35 ಜನ ನಿರ್ದೇಶಕರು ಸೇರಿ ಒಂದು ಮಟ್ಟಕ್ಕೆ ತಂದಿದ್ದಾರೆ. ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನೂಕೂಲ ಮಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.
ಒಕ್ಕಲಿಗ ಸಂಘದಲ್ಲಿಯೇ 172 ಉಪ ಜಾತಿಗಳಿವೆ. ಅದರಲ್ಲಿ ಕೆಲ ಜಾತಿಗಳು ನಾವು ಒಕ್ಕಲಿಗ ಅಲ್ಲ ಎಂದು ಬೇರೆ ಆಗುವ ಪ್ರಯತ್ನ ನಡೆಸಲಾಗುತ್ತಿದ್ದು, ಒಟ್ಟು ಗೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ವಕೀಲ ಶ್ರೀನಿವಾಸಗೌಡ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಎಂ. ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

