ಹಾಸನ

ಆಧುನಿಕ ಕೃಷಿಯಿಂದ ಅಧಿಕ ಲಾಭ'

Published On :

ಸಕಲೇಶಪುರ: ರೈತರು ಕೃಷಿಯಲ್ಲಿ ಯಾಂತ್ರೀಕರಣ ಅಳವಡಿಸಿಕೊಳ್ಳುವ ಆಧುನಿಕವಾಗಿ ಕೃಷಿ ಮಾಡುವ ಮೂಲಕ ಅಧಿಕ ಲಾಭ ಪಡೆಯಬಹುದಾಗಿದೆ ಎಂದು ತಾಲೂಕು ಪಂಚಾಯ್ತಿ ಸದಸ್ಯ ಮಂಜುನಾಥ ತಿಳಿಸಿದರು.
  ತಾಲೂಕಿನ ಬಾಣಗೇರಿ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ವನಶ್ರೀ ರೈತಶಕ್ತಿ ಗುಂಪು ಜಂಟಿಯಾಗಿ  ಏರ್ಪಡಿಸಿದ್ದ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
 ರೈತಶಕ್ತಿ ಗುಂಪುಗಳ ರಚನೆ ಮೂಲಕ ಸಂಘಟಿತರಾಗಿರುವ ಗುಂಪುಗಳಲ್ಲಿ ರೈತರು ಹಣ ಒಗ್ಗೂಡಿಸಿ ಇಲಾಖೆಯ ನೆರವಿನಿಂದ ಬತ್ತ ನಾಟಿ ಮತ್ತು ಕಟಾವು ಯಂತ್ರಗಳನ್ನು ಖರೀದಿಸಬೇಕು. ಎಲ್ಲರೂ ಯಂತ್ರ ಬಳಸುವುದರಿಂದ ಗ್ರಾಮದಲ್ಲಿರುವ ಕಾರ್ಮಿಕರ ಕೊರತೆ ನೀಗಿಸಿ ಹೆಚ್ಚಿನ ಉತ್ಪಾದನೆ ಪಡೆಯಬಹುದು ಎಂದರು.
 ಸಹಾಯಕ ಕೃಷಿ ನಿರ್ದೇಶಕ  ಜಿ.ಎಚ್.ಯೋಗೇಶ್ ಮಾತನಾಡಿ, ತಾಲೂಕಿನಲ್ಲಿ 25 ರೈತಶಕ್ತಿ ಗುಂಪುಗಳನ್ನು ರಚನೆ ಮಾಡಿ 15 ಬತ್ತ ನಾಟಿ ಯಂತ್ರಗಳನ್ನು ಸಹಾಯಧನದಲ್ಲಿ ವಿತರಿಸಲಾಗಿದೆ. ಈ ಮೂಲಕ 750 ಎಕರೆ ಭತ್ತದಲ್ಲಿ ಯಂತ್ರನಾಟಿ ಮಾಡಿರುವ ರೈತರಿಗೆ ಎಕರೆಗೆ ಸಾವಿರದಂತೆ 7.5 ಲಕ್ಷ ರು. ಪ್ರೋತ್ಸಾಹಧನ ವಿತರಿಸಲಾಗಿದೆ ಎಂದು ತಿಳಿಸಿದರು.
 ಪ್ರಗತಿಪರ ರೈತ ಓಡಳ್ಳಿ ಶಂಬುಗೌಡ ಮಾತನಾಡಿ ಗದ್ದೆಗಳಲ್ಲಿ ಸುಣ್ಣ ಹಾಕಿ ಸೆಣಬು, ಡಯಾಂಚ ಹಸಿರೆಲೆ ಗೊಬ್ಬರ ಬೆಳೆಯುವ ಮೂಲಕ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದರು. ಗ್ರಾಪಂ ಉಪಾಧ್ಯಕ್ಷೆ ಅನಿತಾ, ಸದಸ್ಯೆ ಸರೋಜಾ, ರಮೇಶ್, ಗುಂಡೇಗೌಡ, ಕೃಷಿ ಅಧಿಕಾರಿ ಮೊಹಮದ್ಸಿದ್ದಿಕ್, ರೈತ ಅನುವುಗಾರ ದರ್ಶನ್, ಸಚಿನ್, ಕೃಷ್ಣ ಇದ್ದರು.
ಶಿವರುದ್ರಪ್ಪಗೆ ಶ್ರದ್ಧಾಂಜಲಿ
ಹಾಸನ: ನಗರದ ವಿವೇಕಾನಂದ ಯೋಗಶಿಕ್ಷಣ ಶಾಲೆಯಲ್ಲಿ  ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯೋಗಶಿಕ್ಷಕ ಎಚ್.ಬಿ. ರಮೇಶ್ ಮಾತನಾಡಿ, ಪ್ರಕೃತಿಯಂತೆಯೇ ಕವಿಯ ಮನಸ್ಸು ವಿಪುಲ, ಸಹಜ, ಸುಂದರ ಎಂಬ ಸರಳ ಮಾತುಗಳಲ್ಲಿ ಪದ್ಯ ಬರೆದ ಶಿವರುದ್ರಪ್ಪ ಅದಕ್ಕೆ ಅನ್ವರ್ಥವಾಗಿದ್ದರು ಎಂದರು.
  ಲೇಖಕ ಗೊರೂರು ಶಿವೇಶ್ ಮಾತನಾಡಿ ಕಾವ್ಯ ಮತ್ತು ವಿಮರ್ಶಾ ಕ್ಷೇತ್ರದಲ್ಲಿ ಸಮನಾದ ಸಾಧನೆ ಮಾಡಿದ ಜಿಎಸ್ಎಸ್ ಅತ್ಯುತ್ತಮ ಭಾವಗೀತೆಗಳ ಜೊತೆಗೆ ಸೌಂದರ್ಯ ಸಮೀಕ್ಷೆ, ಕಾವ್ಯಾರ್ಥ ಚಿಂತನದಂತಹ ಉತ್ತಮ ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.
 ಹಿರಿಯ ಶಿಕ್ಷಣಾರ್ಥಿ ಪುಟ್ಟಪ್ಪ, ಧರ್ಮಪ್ಪ, ಶೇಖರ್, ರಾಮಚಂದ್ರ, ಚಂದ್ರೇಗೌಡ, ಪರಮೇಶ್, ಗೋವಿಂದರಾಜು ಮತ್ತು ಕರಾಸ ನೌಕರರ ಸಂಘದ ನಿರ್ದೇಶಕ ಮಂಜುನಾಥ್, ರಾಣಿ, ನಿರ್ಮಲ, ಶೈಲಜ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.