ಹಾಸನ

ವೈಷಮ್ಯ: ಕಿಡಿಗೇಡಿಗಳಿಂದ ಆಟೋ ಭಸ್ಮ

Published On :

ಕ.ಪ್ರ.ವಾರ್ತೆ   ರಾಮನಾಥಪುರ   ಡಿ. 26
ಮನೆಯ ಮುಂದೆ ನಿಲ್ಲಿಸಿದ ಆಟೋಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಆಟೋ ಸಂಪೂರ್ಣ ಭಸ್ಮವಾಗಿರುವ ಘಟನೆ ರಾಮನಾಥಪುರದಲ್ಲಿ ಬುಧವಾರ ತಡ ರಾತ್ರಿ ನಡೆದಿದೆ.
ಪಟ್ಟಣದ ನಾಗೇಶ್ ಪ್ಲೇನಿಂಗ್ ಮಿಷನ್ ಹಿಂಭಾಗದ  ಬಡಾವಣೆಯ ಎಚ್.ಜೆ ಮಹದೇವ ಎಂಬುವರು ಸುಮಾರು 9 ವರ್ಷಗಳಿಂದ ಆಟೋ ಓಡಿಸುವ ಮೂಲಕ ಜೀವನ ನಡೆಸುತ್ತಿದ್ದು, ಎಂದಿನಂತೆ ಅವರು ರಾತ್ರಿ ಮನೆಯ ಬಳಿ ನಿಲ್ಲಿಸಿದ್ದ ಆಟೋ ಮೇಲಿನ ಹೊದಿಕೆಯನ್ನು ಇತ್ತೀಚೆಗೆ ಬ್ಲೇಡ್ನಿಂದ ಕೊಯ್ದು ಹಾಕಲಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸದೆ ಆಟೋ ಮೇಲಿನ ಹೊದಿಕೆಯನ್ನು ಹೊಲಿಸಲಾಗಿತ್ತು. ಆದರೆ ಮತ್ತೆ ಬುಧವಾರ ಮತ್ತೆ ತಡ ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಆಟೋಗೆ ಬೆಂಕಿ ಹಚ್ಚಲಾಗಿದೆ.
ಆಟೋದಲ್ಲಿದ್ದ 6 ಸಾವಿರ ರು. ಬೆಲೆಬಾಳುವ ಆಡಿಯೋ ಸಿಸ್ಟಮ್ ಇನ್ನಿತರೆ ಬೆಲೆ ಬಾಳುವ ವಸ್ತುಗಳು ಸಂಪೂರ್ಣ ಭಸ್ಮವಾಗಿದೆ. ಆಟೋ ಅವಲಂಬಿಸಿಕೊಂಡು ಮಹದೇವ್ ಕುಟುಂಬ ಸಾಕುತ್ತಿದ್ದು, ಈ ಘಟನೆಯಿಂದಾಗಿ ಬರಸಿಡಿಲು ಬಡಿದಂತಾಗಿದೆ. ತಮ್ಮ ಕುಟುಂಬ ಅತಂತ್ರ ಸ್ಥಿತಿಗೆ ತಲುಪುವಂತಾಗಿದೆ ಎಂದು  ದು:ಖಿತರಾಗಿ ನುಡಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ನೊಂದ ಚಾಲಕನಿಗೆ ಸಾಂತ್ವನ ಹೇಳಿ, ಈ ಘಟನೆ ಆಕಸ್ಮಿಕವಲ್ಲ, ಏಕೆಂದರೆ ಈ ಅವಘಡ ನಡೆದಿರುವ ಮನೆಯ ಅಕ್ಕ ಪಕ್ಕ ಮನೆಗಳ ಮುಂದೆ ಕೂಡಾ ಬೈಕುಗಳು ಓಮ್ಮಿ ವ್ಯಾನ್ಗಳನ್ನು ನಿಲ್ಲಿಸಿದ್ದು ಇವುಗಳ ತಂಟೆಗೆ ಹೋಗದೆ ಕಳೆದ ಐದಾರು ದಿನಗಳಿಂದ ಇದೇ ಆಟೋಗೆ ಮಾತ್ರ ಈ ರೀತಿ ಉಪದ್ರವ ನೀಡುತ್ತಿರುವುದು ಗಮನಿಸಿದರೆ ಇದು ಯಾರೋ ದುಷ್ಕರ್ಮಿಗಳು ವೈಯಕ್ತಿಕ ದ್ವೇಷ, ಅಸೂಯೆಯಿಂದ ಇಂಥ ಹೇಯ ಕೃತ್ಯ ಎಸಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಹೇಳಿದರು.
ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದು ಆದಷ್ಟು ಬೇಗ ಆರೋಪಿಗಳನ್ನು ಪತ್ತೆಹಚ್ಚುವಂತೆ ಇಲಾಖೆಯನ್ನು ಒತ್ತಾಯಿಸಿದ ಅವರು, ಹಗಲಿರುಳು ನಾಗರಿಕರ ಸೇವೆಯಲ್ಲಿ ತೊಡಗಿರುವ ಆಟೋ ಮತ್ತು ಚಾಲಕರಿಗೆ ಸಮಾಜದಲ್ಲಿ ಸರಿಯಾದ ರಕ್ಷಣೆ ಇಲ್ಲದಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ನೊಂದ ಚಾಲಕನಿಗೆ ನೆರವು ನೀಡುವಂತೆ ಮನವಿ ಮಾಡಿದರು. ಆಟೋ ಚಾಲಕ ಆಪಲ್ಸ್ವಾಮಿ, ಮನು, ವೇಣು ಹಾಗೂ ನಿಂಗರಾಜು, ಕೃಷ್ಣ, ಕುಮಾರ, ಗಿರೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.