ಹಾಸನ

ಭ್ರಷ್ಟಾಚಾರದ ಕೂಪದಲ್ಲಿ ಜಿಲ್ಲಾ ಆರ್ಟಿಓ

Published On :

ಕನ್ನಡಪ್ರಭ ವಾರ್ತೆ೤ ಬೇಲೂರು೤ ಡಿ.26
ಜಿಲ್ಲೆಯಲ್ಲಿ ಆರ್ಟಿಓ ಇಲಾಖೆ ಭ್ರಷ್ಟಾಚಾರದಿಂದ ಕೂಡಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಕಿಡಿಕಾರಿದರು. ಪಟ್ಟಣದ ಪ್ರವಾಸಿ ಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೆಂದಿಗೂ ಮರಳು ದಂಧೆ ಮಾಡುವರಿಗೆ ಬೆಂಬಲ ನೀಡುತ್ತಿಲ್ಲ. ಈ ಸಂಬಂಧ ನನ್ನ ಜೀವನದಲ್ಲಿ ಯಾವೊಬ್ಬ ಅಧಿಕಾರಿಗೂ ಕಿರುಕುಳ ನೀಡಿಲ್ಲ, ಆರೋಪ ಮಾಡುವರು ನಿಜಾಂಶ ತಿಳಿದು ಮಾತನಾಡಲಿ ಎಂದು ತಿರುಗೇಟು ನೀಡಿದರು.
 ಬೇಲೂರು ಪಟ್ಟಣಕ್ಕೆ ಬೈಪಾಸ್ ಬೇಕಾಗಿದೆ. ಮುಂದಿನ ಹತ್ತು ವರ್ಷದಲ್ಲಿ ಜನದಟ್ಟಣೆಗೆ ಅನುಗುಣವಾಗಿ ಬೈಪಾಸ್ ಅಗತ್ಯವಿದೆ ಎಂದು ಅರಿತು ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಸಚಿವ ಫರ್ನಾಂಡೀಸ್ ಅವರಿಗೆ ಪತ್ರ ಬರೆದಿದ್ದಾರೆ, ಅದರೆ ಕೆಲ ವರ್ತಕರಿಗೆ ನಾವು ಬೆಂಬಲ ನೀಡುತ್ತಿದ್ದಾರೆ ಎಂದು ತಪ್ಪು ತಿಳಿಯುವುದು ಬೇಡ ಎಂದರು.
 ಬೇಲೂರು ಮೂಲಕ ಹಾಯ್ದಹೋಗುವ ವಿಲ್ಲುಪುರಂನಿಂದ ಮಂಗಳೂರು ಸುಮಾರು 730 ಕೀ ಮೀ ರಾಷ್ಟ್ರೀಯ ಹೆದ್ದಾರಿ ನಮ್ಮ ಅವಧಿಯಲ್ಲಿ ಮಂಜೂರು ಪಡೆದಿದೆ, ಕಾಮಾಗಾರಿ ಸದ್ಯ ಕುಂಠಿತವಾಗಿದೆ ಎಂದು ಕೇಳಿ ಬಂದಿದೆ. ಅದರೆ ಗುತ್ತಿಗೆದಾರ ಬದಲಾವಣೆ ಹೊಂದಿದ್ದು, ಕಾಮಗಾರಿ ಕೆಲಸ ಮುಕ್ತಾಯ ಮಾಡುವಂತೆ ಒತ್ತಾಯ ಮಾಡಿದ ಅವರು ರಸ್ತೆ ಬದಿಯಲ್ಲಿ ಮನೆ ಮತ್ತು ಅಂಗಡಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ತಿಳಿಸಿದರು.
ಒಂದೇ ನಾಣ್ಯದ ಎರಡು ಮುಖಗಳಂತೆ:   ಜಿಲ್ಲೆಯಲ್ಲಿ ಕಾಂಗ್ರೆಸ್ - ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಂತೆ. ಆ ಪಕ್ಷಗಳ ಮುಖಂಡರು ಯಾವ ನೈತಿಕತೆಯಿಂದ ಜನರ ಬಳಿಗೆ ತೆರಳಿ ಓಟು ಕೇಳುತ್ತಾರೆ ಎಂದು ಛೇಡಿಸಿದ ಅವರು, ಜಿಲ್ಲೆಯಲ್ಲಿ ಅಭಿವೃದ್ಧಿ ಎಂದರೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು. ಅವರು ಕೈಗೊಂಡ ಜನಪರ ಮತ್ತು ಸಮಾಜಮುಖಿ ಅಭಿವೃದ್ಧಿ ಯೋಜನೆಗಳು ಕಾಂಗ್ರೆಸ್ - ಬಿಜೆಪಿ ಮುಖಂಡರು ಏನು ಜಿಲ್ಲೆಗೆ ಕಾಣಿಕೆ ನೀಡಿದ್ದಾರೆ ಎಂದು ಒಂದು ಕ್ಷಣ ಆತ್ಮಾಲೋಕನ ಮಾಡಿಕೊಳ್ಳಿ ಎಂದು ಕೇಳಿದರು.
ಕೇಂದ್ರಕ್ಕೆ ಪತ್ರ:   ದೇವೇಗೌಡ ಇಷ್ಟದಂತೆ ಚಿಕ್ಕಮಗಳೂರು ಬೇಲೂರು ಹಾಸನ ಮತ್ತು ಶೃಂಗೇರಿ ರೈಲು ಓಡಿಸಲು ಸದ್ಯ ದೇವೇಗೌಡರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದ ಅವರು ಬೇಲೂರಿನ ಯಗಚಿ ಜಲಾಶಯ ನಿರ್ಮಾಣಕ್ಕೆ ಗೌಡರಿಂದ ಮಾತ್ರ ಸಾಧ್ಯ. ಅದರೆ ಇಂದು ಎಲ್ಲಿ ಬೇಕು ಅಲ್ಲಿಗೆ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಮೊದಲು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಬೇಲೂರಿನ ಮಲೆನಾಡಿನ ಪ್ರದೇಶಕ್ಕೆ ಕುಡಿಯುವ ನೀರು ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದ ಅವರು ಸ್ಥಳೀಯ ಶಾಸಕರು ಇತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
 ಮಂಡ್ಯ ಕ್ಷೇತ್ರದಿಂದ ಭವಾನಿ ಸ್ಪರ್ಧೆ ಮಾಡುತ್ತಾರೆಯೇ ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು,  ಲೋಕಸಭಾ ಚುನಾವಣೆ ಇನ್ನು ದೂರವಿದೆ, ಅಂದು ನೋಡೊಣ ಎಂದ ಅವರು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ - ಬಿಜೆಪಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ನುಡಿದರು.
 ತಾ. ಜೆಡಿಎಸ್ ಅಧ್ಯಕ್ಷ ತೋ.ಚ.ಅನಂತಸುಬ್ಬರಾಯ, ಮುಖಂಡ ಕೆ.ಎಸ್.ಲಿಂಗೇಶ್, ಜಿಲ್ಲಾ ಪಂಚಾಯ್ತಿ  ಸದಸ್ಯರಾದ ಬಿ.ಡಿ.ಚಂದ್ರೇಗೌಡ, ಜಿ.ಟಿ.ಇಂದಿರಾಧರ್ಮ್ಝಪ್ಪ,  ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಾಂಪುರ ರಾಜಶೇಖರ್,  ತಾಲೂಕು ಪಂಚಾಯ್ತಿ  ಮಾಜಿ ಅಧ್ಯಕ್ಷ ಎಂ.ಎ ನಾಗರಾಜು, ಕರಿಕಟ್ಟೆಹಳ್ಳಿ ಮಾಹತೇಶ್ ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.