ಸಂಶೋಧನೆ ಫಲವಾಗಿ ವಿದ್ಯುತ್ ಉತ್ಪಾದನೆ ಪ್ರಸರಣದ ತೊಡಕು ನಿವಾರಣೆ
ಹಾಸನ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಸಂಶೋಧನೆಯ ಫಲವಾಗಿ ಇಂದು ವಿದ್ಯುತ್ ಪ್ರಸರಣೆ ಮತ್ತು ಉತ್ಪಾದನೆಯಲ್ಲಿರುವ ಹಲವಾರು ತೊಡಕು ನಿವಾರಿಸಲಾಯಿತು ಎಂದು ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ಡಾ.ಡಿ.ತುಕಾರಾಮ್ ತಿಳಿಸಿದರು.
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಐಸಿಟಿಇ ವತಿಯಿಂದ ಜ.3 ರವರೆಗೆ ಏರ್ಪಡಿಸಿರುವ ಬೋಧಕರ ವಿಕಾಸ ಯೋಜನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ವಿದ್ಯುತ್ ಪ್ರಸರಣೆ ಮತ್ತು ಉತ್ಪಾದನೆಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿ, 1909 ರಲ್ಲಿ ಪ್ರಾರಂಭವಾದ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಎದುರಿಸಲಾದ ಸವಾಲುಗಳು ಮತ್ತು ನಂತರದ ದಿನಗಳಲ್ಲಿ ಮಾಡಲಾದ ಮಾರ್ಪಾಡುಗಳ ಬಗ್ಗೆ ತಿಳಿಸಿದರು.
ಈಗ ವಿದ್ಯುತ್ ಅನ್ನು ಪ್ರಾಂತೀಯವಾಗಿ ಅಂದರೆ ಉತ್ತರ ದಕ್ಷಿಣ ಮತ್ತು ಪೂರ್ವ ಪಶ್ಚಿಮ ಭಾಗಗಳಿಗೆ ಒಂದೇ ಗ್ರಿಡ್ ಮೂಲಕ ಕಳುಹಿಸಿ ಪಡೆಯಬಹುದಾಗಿದೆ. ದೇಶದಲ್ಲಿ ಸಾಂಪ್ರದಾಯಿಕ ವಿದ್ಯುತ್ ತಂತ್ರಜ್ಞಾನ ಯೋಜನೆಗಳಲ್ಲಿ ಅಸಾಂಪ್ರದಾಯಿಕ ಮತ್ತು ನವೀಕರಿಸಬಹುದಾದ ವಿದ್ಯುತ್ನ್ನು ಸಮೀಕರಿಸುವ ಬಗ್ಗೆ ಹೊಸ ಹೊಸ ಮಾರ್ಗಗಳು ತೆರೆದು ಕೊಳ್ಳುತ್ತಿರುವುದು ಈಗಿನ ತಂತ್ರಜ್ಞಾನಕ್ಕೆ ಒಂದು ಸವಾಲಾಗಿದೆ.
ಎರಡು ವಾರಗಳ ವಿಕಾಸ ಯೋಜನಾ ಕಾರ್ಯಕ್ರಮ ವಿದ್ಯುತ್ ನಿರ್ವಹಣೆ ಮತ್ತು ವಿದ್ಯುತ್ಮಾಪನ ಸಲಕರಣೆ ಗಳ ಬಳಕೆಗೆ ತೆಗೆದುಕೊಳ್ಳಬಹುದಾದ ಪ್ರಯೋಗಾತ್ಮಕ ಕ್ರಮಗಳ ಮತ್ತು ನಿಯಂತ್ರಣಗಳ ಬಗ್ಗೆ ಹೆಚ್ಚುವರಿ ತಂತ್ರಜ್ಞಾನ ತಿಳಿಸಲು ಅತ್ಯಂತ ಸಹಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಬೆಂಗಳೂರಿನ ಪಿಆರ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ. ಆರ್.ನಾಗರಾಜ್ ಮಾತನಾಡಿ, ಬೋಧಕರ ವಿಕಾಸ ಯೋಜನಾ ಕಾರ್ಯಕ್ರಮವನ್ನು ಹಲವಾರು ಕ್ಷೇತ್ರ ಗಳಲ್ಲಿ ಹಮ್ಮಿಕೊಂಡಿದ್ದು, ಉತ್ತಮ ಸಂಶೋಧಕ ಮನ ಸ್ಥಿತಿಯನ್ನು ಹೊಂದಲು ಅತ್ಯಂತ ಸಹಕಾರಿಯಾಗಿದೆ. ತಾಂತ್ರಿಕ ಶಿಕ್ಷಣ ಬೋಧಕರು, ಸಂಶೋಧನಾ ವಿದ್ಯಾರ್ಥ್ಥಿಗಳು ಮತ್ತು ಕೈಗಾರಿಕಾ ತಜ್ಞರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜ್ಞಾನ ಹೆಚ್ಚಿಸಿ ಕೊಳ್ಳಬೇಕೆಂದು ತಿಳಿಸಿದರು.
ಸರ್ಕಾರವು ಹಲವಾರು ಇಂತಹ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಹೆಚ್ಚು ಹೆಚ್ಚು ಪಡೆಯಬೇಕೆಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ವಿ.ಸತ್ಯನಾರಾಯಣ ಮತ್ತು ಉಪಪ್ರಾಂಶುಪಾಲ ಡಾ.ಕೆ.ಎಸ್. ಜಯಂತ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ ಮತ್ತು ಖಜಾಂಚಿ ಆರ್.ಶೇಷಗಿರಿ, ಕಾರ್ಯಕ್ರಮದ ಸಂಯೋಜಕರು ಹಾಗೂ ಉಪ ಪ್ರಾಂಶುಪಾಲ ಡಾ. ಎಂ.ಎಸ್.ರವಿಪ್ರಕಾಶ್ ವಿಭಾಗದ ಮುಖ್ಯಸ್ಥ ಡಾ. ಎಚ್.ಎನ್.ಸುರೇಶ್, ಡಾ. ಜಿ.ಕೆ. ಪುರುಷೋತ್ತಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

