ಅಕ್ರಮ ಕಟ್ಟಡ ತೆರವು: ಮಾಲೀಕರ ಆಕ್ರೋಶ
ಕ.ಪ್ರ.ವಾರ್ತೆ ಸಕಲೇಶಪುರ ಡಿ. 27
ಜಿಲ್ಲಾಧಿಕಾರಿ ಆದೇಶದಂತೆ ಪಟ್ಟಣದ ಅಂಬೇಡ್ಕರ್ ಭವನ ರಸ್ತೆಯಲ್ಲಿ ನಿಯಮಬಾಹಿರವಾಗಿ ಕಟ್ಟಲಾಗಿದ್ದ ಒಂದು ಅಡಿಯಷ್ಟು ಕಟ್ಟಡವನ್ನು ಗುರುವಾರ ಪುರಸಭೆ ಅಧಿಕಾರಿಗಳು ತೆರವುಗೊಳಿಸಿದರು.
ಪಟ್ಟಣದ ಹೋಟೆಲ್ ಉದ್ಯಮಿ ಬಾನುದಾಸ್ ಎಂಬುವವರು ನಿರ್ಮಿಸುತ್ತಿರುವ ಕಟ್ಟಡ ರಸ್ತೆಗೆ ಚಾಚಿಕೊಂಡಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಅನ್ಬುಕುಮಾರ್ ಪುರಸಭೆ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ ಕಾರ್ಯಾಚರಣೆಗೆ ಇಳಿದ ಪುರಸಭೆ ಅಧಿಕಾರಿಗಳು, ಕಟ್ಟಡ ಮಾಲೀಕರು ಹಾಗೂ ಅವರ ಬೆಂಬಲಿಗರಿಂದ ತೀವ್ರ ವಿರೋಧ ಎದುರಿಸ ಬೇಕಾಯಿತು.
ಆದರೂ ಹೆಚ್ಚಿನ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಸಿಕೊಂಡು ಪುರಸಭೆಯ ಕಾನೂನು ಉಲ್ಲಂಘನೆ ಮಾಡಿ ಕಟ್ಟಲಾಗಿದ್ದ ಕಟ್ಟಡದ ಒಂದು ಅಡಿಯನ್ನು ಆಧುನಿಕ ಯಂತ್ರದ ಮೂಲಕ ಕತ್ತರಿಸಿ ತೆಗೆಯಲಾಯಿತು. ಕಾರ್ಯಾಚರಣೆಯ ನೇತೃತ್ವವನ್ನು ಪುರಸಭೆ ಮುಖ್ಯಾಧಿಕಾರಿ ವೀರಭದ್ರಯ್ಯ, ಪರಿಸರ ಎಂಜಿನಿಯರ್ ಮಂಜುನಾಥ್, ಲಕ್ಷ್ಮೀಶ್ ವಹಿಸಿದ್ದರು.
ಗುಡ್ಡ ಅಗೆದು ಇಲಿ ಹಿಡಿದ ಪುರಸಭೆ: ರಸ್ತೆಗೆ ಚಾಚಿಕೊಂಡಂತೆ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಲಾಗುವುದು ಎಂಬ ವಿಷಯ ಪಟ್ಟಣದಲ್ಲಿ ಹಬ್ಬಿದ್ದರಿಂದ ಸಾರ್ವಜನಿಕರಲ್ಲಿ ಸಹಜವಾಗಿಯೇ ಕಾರ್ಯಾಚರಣೆ ಬಗ್ಗೆ ತೀವ್ರ ಕುತೂಹಲ ಹೊಂದಿದ್ದರು.
ಆದರೆ ಕಾರ್ಯಾಚರಣೆಯ ವೇಳೆ ಕಟ್ಟಡ ಮಾಲೀಕರ ಪ್ರಶ್ನೆಗೆ ಉತ್ತರ ನೀಡಲಾಗದೆ ಪುರಸಭೆ ಅಧಿಕಾರಿಗಳು ಪೇಚಿಗೆ ಸಿಲುಕಿದರಾದರಾದರೂ, ಜಿಲ್ಲಾಧಿಕಾರಿ ಆದೇಶ ಪಾಲನೆಗೆ ಕಟ್ಟುಬಿದ್ದು ಕಟ್ಟಡದ ಕೇವಲ ಒಂದು ಅಡಿಯನ್ನು ಕತ್ತರಿಸುವ ನಿರ್ಧಾರಕ್ಕೆ ಬಂದಿದ್ದು, ಈ ಕೆಲಸಕ್ಕೆ ಇಷ್ಟೆಲ್ಲ ಪ್ರಚಾರ ಬೇಕಿತ್ತಾ ಎಂದು ತಮ್ಮಲ್ಲೆ ಪ್ರಶ್ನಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

